ಸವಾಲು ಎದುರಿಸುವ ಸಾಮರ್ಥ್ಯ ಮಹಿಳೆಗಿದೆ : ಪ್ರೊ.ಸೌಮ್ಯಾ

Women have the ability to face challenges : Prof. Soumya

ಹಾರೂಗೇರಿ : ಮಹಿಳೆಯರಿಗೆ ಸಾಕಷ್ಟು ಸವಾಲುಗಳಿರುತ್ತವೆ. ಕುಟುಂಬ ನಿರ್ವಹಣೆ ಜತೆಗೆ ವೃತ್ತಿಯ ಕೆಲಸದ ಒತ್ತಡವೂ ಇರುತ್ತದೆ. ಎರಡೂ ಕಡೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಸವಾಲುಗಳನ್ನು ಎದುರಿಸುವಂತಹ ಸಾಮರ್ಥ್ಯ ಮಹಿಳೆಯರಿಗಿದೆ ಎಂದು ಪ್ರೊ.ಸೌಮ್ಯಾ ಅರಕೇರಿ ಹೇಳಿದರು. 

ಪಟ್ಟಣದ ಜೈ ಭೀಮನಗರದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುವ ಮೂಲಕ ಅಸ್ತಿತ್ವವನ್ನು ಉಳಿಸಿಕೊಂಡು ಸಾಧನೆಯ ಸಿಖರ ಏರಬೇಕು. ಮಹಿಳೆಯರ ಏಳ್ಗೆಗೆ ಸಮಾಜದಲ್ಲಿ ಸಹಬಾಳ್ವೆ, ಸಮಾನ ಗೌರವ ಮತ್ತು ಸಮಾನ ನ್ಯಾಯ ನೀಡಬೇಕಾದ ಅಗತ್ಯವಿದೆ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರ ತ್ಯಾಗ, ಪ್ರೋತ್ಸಾಹ ಅಡಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಅಕ್ಷತಾ ಕಾಂಬಳೆ ಮಾತನಾಡುತ್ತ ಸಾವಿತ್ರಿ ಬಾಯಿ ಫುಲೆ, ಅಂಬೇಡ್ಕರ ಅವರನ್ನು ನಾವು ನೆನಪಿಸಿಕೊಳ್ಳಬೇಕು. ಮಹಿಳೆಯರಿಗೆ ಶಿಕ್ಷಣವನ್ನೇ ನೀಡದ ಸಂದರ್ಭದಲ್ಲಿ ಫುಲೆ ಅವರು ಎಲ್ಲ ಕಟ್ಟಳೆ ಮೀರಿ ಶಿಕ್ಷಣ ಪಡೆದರು. ಅಂಬೇಡ್ಕರ್ ಮಹಿಳೆಯರಿಗೆ ಶಿಕ್ಷಣ, ಮತದಾನದ ಹಕ್ಕನ್ನು ಕೊಡಿಸುವ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಬಲರನ್ನಾಗಿ ಮಾಡಿದ್ದಾರೆ ಎಂದರು. 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಮೋಜಿನ ಆಟಗಳನ್ನು ಏರಿ​‍್ಡಸಲಾಗಿತ್ತು. ಕೇಕ್ ಕತ್ತರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಿನಿ ಕಾಂಬಳೆ, ಕಸ್ತೂರಿ ಅರಕೇರಿ, ಸುಷ್ಮಾ ಅರಕೇರಿ, ಕಮಲವ್ವ ಕಾಂಬಳೆ ಹಾಗೂ ವಿವಿಧ ಮಹಿಳಾ ಸಂಘಗಳ ಸದಸ್ಯೆಯರು ಉಪಸ್ಥಿತರಿದ್ದರು..