ಚಿಕ್ಕೋಡಿ 19: ಹೀರಾಶುಗರ ತಾಂತ್ರಿಕ ಇಂಜೀನಿಯರಿಂಗ್ ಕಾಲೇಜ ನೀಡಸೋಸಿ ಇವರ ಕಳೆದ ಮಂಗಳವಾರ 18 ರಂದು ಕಾಲೇಜು ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರೇಣುಕಾ ಶುಗರ ಸಂಸ್ಥಾಪಕರಾದ ವಿದ್ಯಾ ಎಮ್ ಮುರುಕುಂಬಿ ಬೆಳಗಾವಿಯ ಆಶ್ರಯ ಪೌಂಡೇಶನ್ ಸಂಸ್ಥಾಪಕರಾದ ಸಪಲಾ ನಾಗರತ್ನ ಹಾಗೂ ಧುಳಗನವಾಡಿಯ ಬಯಲಾಟ ಹಿರಿಯ ಕಲಾವಿದೆ ಯಮನಾಬಾಯಿ ಲ ಕಲಾಚಂದ್ರ ಇವರಿಗೆ ಕಾಲೇಜು ಪ್ರಾರ್ಚಾಯರಾರದ ಡಾ. ಎಸ್.ಸಿ ಕಮತೆ ಇವರು ಮೂವರು ಮಹಿಳಾ ಸಾಧಕರಿಗೆ ಶಾಲು ಹೊದಿಸಿ ಫಲಪುಷ್ಪನೀಡಿ ಆತ್ಮೀಯವಾಗಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸ ಬಳಗದವರು ಉಪಸ್ಥಿತರಿದ್ದರು. ಚಿಕ್ಕೋಡಿ ಆಶಾದೀಪ ಸಮುದಾಯ ಕಲಾಕೇಂದ್ರ ತಂಡದವರು ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕಿ ಸುಜಾತಾ ಕಮತೆ ಸ್ವಾಗತಿಸಿ ವಂದಿಸಿದರು.