ಲೋಕದರ್ಶನವರದಿ
ಶಿರಹಟ್ಟಿ 03: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಹಾಗೂ ಮಕ್ಕಳು ಪ್ರತಿಯೊಂದು ರಂಗದಲ್ಲೂ ಭಾಗವಹಿಸುವುದರ ಮೂಲಕ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ ಆದರೂ ಅವರ ಮೇಲೆ ನಿತ್ಯ ದೌರ್ಜನ್ಯ ಹಾಗೂ ಶೋಷಣೆಗಳು ನಡೆಯುತ್ತಲೇ ಇವೆ ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳು ಅದನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಪ್ರಭಾರಿ ಪಿಎಸ್ಐ ಪಿ.ಎಂ. ಬಡಿಗೇರ ಹೇಳಿದರು.
ಅವರು ಸ್ಥಳೀಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪೋಲಿಸ್ ಇಲಾಖೆ ವತಿಯಿಂದ ನಡೆದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾಯರ್ಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಶೋಷಣೆಗಳು ನಿಲ್ಲಬೇಕು ಹಾಗೂ ಬಾಲ್ಯ ವಿವಾಹ ಪದ್ಧತಿಯನ್ನು ನಿಮರ್ೂಲನೆ ಮಾಡಬೇಕು. ವರದಕ್ಷಣೆ ಕಿರುಕುಳ, ಲಿಂಗ ತಾರತಮ್ಯಗಳಂತಹ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಬೇಕು. ಪುರುಷನ ಸರಿಸಮವಾದ ಸ್ಥಾನಮಾನ ಮಹಿಳೆ ಪಡೆದಾಗ ಮಾತ್ರ ಮಹಿಳೆಗೆ ಸ್ವತಂತ್ರ್ಯ ಸಿಕ್ಕಂತೆ ಆದ್ದರಿಂದ ಮಹಿಳೆಯರ ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ನಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆಯ ವಿರುದ್ಧ ರಕ್ಷಣೆಯಿಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ಮಹಿಳೆಯರ ಹಾಗೂ ಮಕ್ಕಳು ವೈಯಯಕ್ತಿಕ ಸ್ವಾತಂತ್ರ್ಯ, ಘನತೆಯಿಂದ ಬಾಳುವ ಹಕ್ಕು, ಹೆಣ್ಣು ಮಕ್ಕಳ ಮಾರಾಟ, ಬಸ್ನಲ್ಲಿ ಚುಡಾಯಿಸುವುದನ್ನು ತಡೆಯಲು ಹಾಗೂ ಶೋಷಣೆಯಿಂದ ಮುಕ್ತವಾಗಿ ಇರಿಸಲು ಶೋಷಣೆಯ ಹಕ್ಕುನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕುಗಳನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಸ್ವಾತಂತ್ರ್ಯವಾಗಿ ಬದುಕಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ, ಕಾರ್ಯದಶರ್ಿ ಶಶಿಧರ ಶಿರಸಂಗಿ, ಮುಖಂಡ ಮುತ್ತರಾಜ ಬಾವಿಮನಿ. ಹಿತೈಸಿಗಳಾದ ಪ್ರಕಾಶ ಶಿರಗೂರ, ದೇವಪ್ಪ ಬಾಳೋಜಿ, ಪ್ರದೀಪ ಗೊಡಚ್ಚಪ್ಪನವರ, ಶಿದ್ದಪ್ಪ ಹುಗಾರ, ಮಂಜುಳಾ ಜಟ್ಟೆಪ್ಪನವರ, ಎಂ.ಎ. ಮುಲ್ಲಾನವರ, ಅಲ್ಲಮಾ ಅಗಸರ, ಆರ್.ಎಂ. ಗೌಡರ, ಎಸ್.ಸಿ. ಶಿವಶಿಂಪರ, ಎಸ್.ಡಿ. ಭೂತಪ್ಪನವರ, ಕೆ.ಎನ್. ಕೊಬಿಹಾಳ, ಎಫ್.ಎಸ್. ಹುಬ್ಬಳ್ಳಿ, ಹಸನಸಾಬ ಕಿಲ್ಲೇದಾರ, ಸುಜಾತ ದೊಡ್ಡುರ, ಯಶೋಧಾ ಬಾಳೋಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.