ಮುಂದಿನ ವಾರ ಪ್ರೇಗ್ ನಲ್ಲಿ ಮಹಿಳಾ ಚಾರಿಟಿ ಟೆನಿಸ್ ಪಂದ್ಯಾವಳಿ

ನವದೆಹಲಿ, ಜೂನ್ 6,ಮುಂದಿನ ವಾರ ಜೆಕ್ ಗಣರಾಜ್ಯದ ಪ್ರೇಗ್‌ನಲ್ಲಿ ಅಭಿಮಾನಿಗಳೊಂದಿಗೆ ಮಹಿಳಾ ಚಾರಿಟಿ ಟೆನಿಸ್ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.ಜೂನ್ 13 ರಿಂದ 15 ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಆರು ಸದಸ್ಯರ ಎರಡು ತಂಡಗಳು ಭಾಗವಹಿಸಲಿವೆ. ವಿಶ್ವದ ಮೂರನೇ ಶ್ರೇಯಾಕಿತೆ ಕರೋಲಿನಾ ಪ್ಲಿಸ್ಕೋವಾ ಮತ್ತು ಎರಡು ಬಾರಿ ವಿಂಬಲ್ಡನ್ ವಿಜೇತ ಪೆಟ್ರಾ ಕ್ವಿಟೋವಾ ಅವರು ಪರಸ್ಪರರ ಮುಖಾಮುಖಿಯಾಗಲಿದ್ದಾರೆ. "ನಾವು ಕಡಿಮೆ ಜನರೊಂದಿಗೆ ಟೂರ್ನಿ ಪ್ರಾರಂಭಿಸುತ್ತೇವೆ. ಕ್ರಮೇಣ ಸಂಖ್ಯೆಯನ್ನು ಹೆಚ್ಚಿಸುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಪಂದ್ಯಾವಳಿಯ ಪ್ರವರ್ತಕ ತೋಮಸ್ ಪೆಟೆರಾ ತಿಳಿಸಿದರು.ಜೆಕ್ ಗಣರಾಜ್ಯದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲ ದೇಶದಲ್ಲಿ ಜೂನ್ 8ರ ವರೆಗೆ 500 ಜನರನ್ನು ಸೇರಲು ಅವಕಾಶ ನೀಡಲಾಗಿದ್ದು, ಜೆಕ್ ಸರ್ಕಾರದ ನಿರ್ಧಾರದಡಿಯಲ್ಲಿ ಪಂದ್ಯಾವಳಿ ನಡೆಯಲಿದೆ.ಪಂದ್ಯಾವಳಿಯ ಆರೋಜಕರು ಶುಕ್ರವಾರ ಮಧ್ಯಾಹ್ನ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದ್ದಾರೆ.