ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ; ಮಹಿಳೆಯರಿಗೆ ಗೌರವ, ಪ್ರೋತ್ಸಾಹ ನೀಡಿ: ಎಂ.ಎ. ಸಪ್ನಾ

ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ; ಮಹಿಳೆಯರಿಗೆ ಗೌರವ, ಪ್ರೋತ್ಸಾಹ ನೀಡಿ: ಎಂ.ಎ. ಸಪ್ನಾ Women's Day celebrated at Sangolli Rayanna College; Respect and encourage women: M.A. Sapna

ಲೋಕದರ್ಶನ ವರದಿ 

ಬೆಳಗಾವಿ 16 :   ಮಹಿಳೆಯರಿಗೆ ಗೌರವ, ಜ್ಞಾನ, ನ್ಯಾಯ, ಸತ್ಯ, ಧೈರ್ಯ, ಸುರಕ್ಷತೆ ಮತ್ತು ಪ್ರೋತ್ಸಾಹ ನೀಡುವುದು ಅತ್ಯಂತ ಮುಖ್ಯ ಎಂದು  ಬೆಳಗಾವಿಯ ಆರ್ಸಿಯು  ಕೆಎಎಸ್ ಹಣಕಾಸು ಅಧಿಕಾರಿ  ಎಂ.ಎ. ಸಪ್ನಾ ಅವರು ಹೇಳಿದರು.  ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಬೆಳಗಾವಿ "ಗಿವ್ ಟು ಗೇನ್" ಎಂಬ ವಿಷಯದ ಅಡಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, "ಗೌರವವನ್ನು ನೀಡುವುದು ತಮ್ಮನ್ನು ತಾವು ಸಬಲೀಕರಣಗೊಳಿಸಲು  ಇರುವ   ಅತ್ಯಂತ ಮುಖ್ಯವಾದ ಮಾರ್ಗ" ವಾಗಿದೆ.  ಎಂದು  ಅವರು “ಗಿವ್ ಟು ಗೇನ್‌” ಎಂಬ ವಿಷಯದ ಮಹತ್ವವನ್ನು ವಿವರಿಸಿದರು. ಮಹಿಳೆಯರಿಗೆ ತರಬೇತಿ, ಆದರ್ಶ ವ್ಯಕ್ತಿಗಳು, ಬೆಳವಣಿಗೆಗೆ ಅವಕಾಶ ಮತ್ತು ಸಮಯ ದೊರಕಬೇಕು. ಸಮಾಜದಲ್ಲಿರುವ ಕಟ್ಟುಪಾಡುಗಳ ಗಡಿ ಮುರಿದು ಮಹಿಳೆಯರು ತಮ್ಮ ಆರೋಗ್ಯ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ಅಮೂಲ್ಯ ಭೂಂಧ್ ಫೌಂಡೇಶನ್ನ ಸಂಸ್ಥಾಪಕಿ  ಡಾ. ಆರತಿ ಭಂಡಾರೆ ಮಾತನಾಡಿ,   ಮಹಿಳೆಯರು ಮತ್ತು ಪುರುಷರು ಸಮಾನರಾಗಿದ್ದಾರೆ. ಸೈಕಲ್ನ ಎರಡು ಚಕ್ರಗಳಂತೆ ಇಬ್ಬರೂ ಸಮಾನವಾಗಿ ಸಮಾಜವನ್ನು ಮುನ್ನಡೆಸಬೇಕು, ಮಹಿಳೆಯರು ಪರಸ್ಪರ ಸಹಕಾರ ನೀಡಿ ಮತ್ತೊಬ್ಬ ಮಹಿಳೆಯನ್ನು ಸಬಲೀಕರಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಕಸದ ನಿರ್ವಹಣೆ ಕುರಿತು ಚಟುವಟಿಕೆಯನ್ನು ನಡೆಸಿ ಪರಿಸರ ಜಾಗೃತಿಯ ಮಹತ್ವವನ್ನು ವಿವರಿಸಿದರು.  

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು,  ಸ್ಟೀಲ್ ನೀರಿನ ಬಾಟಲಿಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.ಮಹಿಳೆಯರು ತಮ್ಮಲ್ಲಿರುವ ಶಕ್ತಿಯಿಂದ ಸಮಾಜಕ್ಕೆ ಕೊಡುಗೆ ನೀಡಬಹುದು. ಮತ್ತು "ಮಹಿಳೆಯರು ಇತರ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು" ಎಂದು ಹೇಳಿದರು. ತ್ಯಾಜ್ಯ ನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಅವರು ಚಟುವಟಿಕೆಗಳನ್ನು ನಡೆಸಿದರು.  "ನಮ್ಮ ಸಮಾಜದ ಅತಿದೊಡ್ಡ ಬೆನ್ನೆಲುಬು ಸಫಾಯಿ ಕರ್ಮಚಾರಿಗಳು ಎಂದು ಅವರು ಶ್ಲಾಘಿಸಿದರು."  ಮಹಿಳಾ ಸಬಲೀಕರಣ ಕೋಶವನ್ನು ’ಸಬಲೀಕೃತ ಮಹಿಳಾ ಕೋಶ’ ಎಂದು ಮರುನಾಮಕರಣ ಮಾಡಬಹುದು ಎಂದು  ಶ್ರೀಪಾದರಾವ್ ಅವರು   ಸಲಹೆ ನೀಡಿದರು. 

ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ, ಫ್ಲ್ಯಾಷ್ಮಾಬ್, ಫುಡ್ಸ್ಟಾಲ್ ಮತ್ತು ಕರಕುಶಲ ಪ್ರದರ್ಶನದಲ್ಲಿ ಭಾಗವಹಿಸಿದವರ ಹೆಸರನ್ನು ಡಾ. ನಮಿತಾ ಪೋತರಾಜ್ ಘೋಷಿಸಿದರು, ಅವರಿಗೆ ಮುಖ್ಯ ಅತಿಥಿಗಳು ಪ್ರಮಾಣಪತ್ರಗಳನ್ನು ವಿತರಿಸಿದರು. ಈ ವೇಳೆ ಮಹಿಳಾ ಸಬಲೀಕರಣ ಕೋಶವು ವಿದ್ಯಾರ್ಥಿಗಳ ಪಾಕಶಾಲೆಯ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಆಹಾರ ಮಳಿಗೆಗಳು ಮತ್ತು ಕರಕುಶಲ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ ಪ್ರೊ.ಎಸ್‌.ಸಿ.ಪಾಟೀಲ್ ,  ಮಹಿಳಾ ಸಬಲೀಕರಣ ಕೋಶದ ಸಂಯೋಜಕಿ ಡಾ. ಸುಮನ ಮುದ್ದಾಪುರ ಸ್ವಾಗತಿಸಿದರು.   ವಿದ್ಯಾರ್ಥಿನಿ  ಪ್ರಿಯಾಂಕಾ ತಿಲಗರ್ ಪ್ರಾರ್ಥನೆ ಗೀತೆ ಹಾಡಿದರು. ವಾಣಿಜ್ಯ ವಿಭಾಗದ ಅಧ್ಯಾಪಕಿ ಜಯಶ್ರೀ ಉಪಾರಿ,ಡಾ. ದೀಪಾ ಆಂಟಿನ  ನಿರೂಪಿಸಿದರು.  ಮನುಸೂರ ಎಸ್‌. ಭಾಲ್ದಾರ  ವಂದಿಸಿದರು.