ಬೆಂಗಳೂರು, ಅ.22: ಕರ್ನಾಟಕ ಸೀನಿಯರ್ ಮಹಿಳಾ ಕ್ರಿಕೆಟ್ ತಂಡ ಮುಂಬೈನಲ್ಲಿ ನಡೆಯುತ್ತಿರುವ ಬಿಸಿಸಿಐ ಆಯೋಜಿತ ಟೂರ್ನಿಯಲ್ಲಿ ಬರೋಡಾ ತಂಡದ ವಿರುದ್ಧ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ಬರೋಡಾ ತಂಡದ ಸ್ಟಾರ್ ಮಧ್ಯಮ ಕ್ರಮಾಂಕದ ಹೃತ್ವೀಶ ಕಮ್ಲೇಶ್ ಪಟೇಲ್ 28 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 27 ರನ್ ಸೇರಿಸಿದರು. ಜೇನಿತಾ ಫರ್ನಾಂಡಿಸ್ 24 ರನ್ ಬಾರಿಸಿ ತಂಡಕ್ಕೆ ನೆರವಾದರು. ಉಳಿದಂತೆ ರಾಧಾ ಯಾದವ್ 15 ರನ್ ಸಿಡಿಸಿ ಅಬ್ಬರಿಸಿದರು. ಅಂತಿಮವಾಗಿ ಬರೋಡ 18 ಓವರ್ ಗಳಲ್ಲಿ 6 ವಿಕೆಟ್ ಗೆ 97 ರನ್ ಸೇರಿಸಿದರು. ಕರ್ನಾಟಕದ ಪರ ಚಂದು ಎಂ.ವೆಂಕಟೇಶಪ್ಪ 14 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ರಾಜ್ಯ ತಂಡದ ಪರ ವೇದಾ ಕೃಷ್ಣಮೂರ್ತಿ 33 ಎಸೆತಗಳಲ್ಲಿ 20 ರನ್ ಹಾಗೂ ರಕ್ಷಿತಾ 20 ರನ್ ಸಿಡಿಸಿದರು. ಅಂತಿಮವಾಗಿ ಕನರ್ಾಟಕ 18 ಓವರ್ ಗಳಲ್ಲಿ 9 ವಿಕೆಟ್ ಗೆ 64 ರನ್ ಸೇರಿಸಿ ಸೋಲು ಕಂಡಿತು. ಬರೋಡಾ ಪರ ರಾಧಾ ಯಾದವ್ ಮೂರು ವಿಕೆಟ್ ಪಡೆದರು.