ವರದಕ್ಷಿಣೆಗಾಗಿ ಮಹಿಳೆ ಹತ್ಯೆ

ಹಾಜಿಪುರ, ಡಿ 20:         ವರದಕ್ಷಿಣೆ ಪಿಡುಗು ಇನ್ನೂ ನಿರ್ಮೊಲನೆಯಾಗಿಲ್ಲ ಎಂಬುದಕ್ಕೆ ದೇಶದ ವಿವಿಧೆಡೆಯಿಂದ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿವೆ  ಈ ನಿಟ್ಟಿನಲ್ಲಿ ವೈಶಾಲಿ ಜಿಲ್ಲೆಯ ಭಗವಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಜಾಫಪುರ್ ಮಲಾಹಿ ಗ್ರಾಮದಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ.   

ಬೆಗುಸರೈ ಜಿಲ್ಲೆಯ ಬಚ್ವಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಚಮತ ಲಕ್ಷ್ಮಣ್ ತೋಲಾದ ಉಮೇಶ್ ಪಾಸ್ವಾನ್ ಅವರ ಪುತ್ರಿ ಕಾಜಲ್ ದೇವಿ (22) ಹತ್ಯೆಗೀಡಾದ ದುರ್ದೈವಿ.   

ಈಕೆ ಎಂಟು ವರ್ಷಗಳ ಹಿಂದೆ ವೈಶಾಲಿ ಜಿಲ್ಲೆಯ ಮುಜಫಪುರ್ ಮಲಾಹಿ ಗ್ರಾಮದ ಸಂಜಯ್ ಪಾಸ್ವಾನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದಾಗಿನಿಂದ, ಕಾಜಲ್ಗೆ 50 ಸಾವಿರ ರೂ. ವರದಕ್ಷಿಣೆ ತರಲು ಹಿಂಸೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.   

ಮೃತರ ತಂದೆ ಉಮೇಶ್ ಪಾಸ್ವಾನ್ ಅವರ ಹೇಳಿಕೆಯ ಆಧಾರದ ಮೇಲೆ ಮೃತಳ ಪತಿ ಸಂಜಯ್ ಪಾಸ್ವಾನ್, ಅವರ ತಂದೆ, ತಾಯಿ ಸೇರಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮಾಹಿತಿ ನೀಡಿದ್ದಾರೆ.