ಲೋಕದರ್ಶನ ವರದಿ
ಮಾನವ ಸೃಷ್ಟಿಗೆ ಮಹಿಳೆಯೇ ಕಾರಣ, ಅವಳಿಲ್ಲವಾದರೆ ಈ ಸೃಷ್ಟಿಯೇ ಇಲ್ಲ, ಗೊಲ್ಲರ
ಹಾವೇರಿ 25: ಮಹಿಳೆ ಯಾರಿಗೂ ಬಾರವಲ್ಲ,ಆದರೆ ಆಕೆ ಎಲ್ಲರಿಗೂ ಆಧಾರ. ಮನುಕುಲವು ಮುಂದುವರಿಯಲು ಮಾನವ ಸೃಷ್ಟಿಗೆ ಮಹಿಳೆಯೇ ಕಾರಣ, ಅವಳಿಲ್ಲವಾದರೆ ಈ ಸೃಷ್ಟಿಯೇ ಇಲ್ಲ, ಭೂಮಿಯು ಇಲ್ಲ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಸ್ಥಳೀಯ ತಾಯಿ ಸೇವಾ ಫೌಂಡೇಶನ್ ಬೃಂದಾವನ ನಿವಾಸದಲ್ಲಿ ಏರಿ್ಡಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಾಧಕೀಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಗೆ ಅಧಿಕಾರ ನೀಡಿದ ಎಲ್ಲಕಡೆ ಅಭಿವೃದ್ಧಿ ಅಪ್ಪಳಿಸಿ ಬರುತ್ತದೆ, ದಕ್ಷತೆಗೆ ಮತ್ತೊಂದು ಹೆಸರು ಅವಳು, ಸ್ತ್ರೀಶಕ್ತಿ ಅಣುಶಕ್ತಿಗಿಂತ ಶಕ್ತಿಶಾಲಿಯಾದ ಸ್ತ್ರೀತ್ವದ ಗುಣಗಳಿಂದ ತುಂಬಿದಾಗ ಮಾತ್ರ ಯುದ್ಧಗಳು ಇಲ್ಲವಾಗುವವು ಎಂದು ಹನುಮಂತಗೌಡ ಗೊಲ್ಲರ ತಿಳಿಸಿದರು.
ರಾಣೆಬೆನ್ನೂರು ಆರ್. ಟಿ. ಇ. ಎಸ್ ಕಾಲೇಜಿನ ಅತಿಥಿ ಉಪನ್ಯಾಸಕಿ ರೂಪ ಮಾಲತೇಶ ಮಾಚೇನಹಳ್ಳಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಬದಲಾಗುತ್ತಿರುವುದನ್ನು ನಾವು ಕಾಣಬಹುದು, ಆಡುಮುಟ್ಟದ ಸೊಪ್ಪಿಲ್ಲ ಎಂಬ ನಾಣ್ನುಡಿಯಂತೆ ಇಂದು ಮಹಿಳೆಯರು ದುಡಿಯದ ಕಾರ್ಯಕ್ಷೇತ್ರವೇ ಇಲ.್ಲ ಮಹಿಳೆ ಈ ಜಗದ ಕಣ್ಣು, ತ್ಯಾಗ ಅಹಿಂಸೆಗಳ ಪುತ್ಥಳಿ. ಆದರೆ ಇಂದು ಅವಳಲ್ಲಿ ಅಭದ್ರತೆ, ಅಸುರಕ್ಷತೆ ಕಾಡುತ್ತಿದೆ ಎಂದರು.
ಸಾಹಿತಿ ಜುಬೇದ ನಾಯಕ್ ಮಾತನಾಡಿ ಮಹಿಳೆಯೇ ಸರ್ವತೋಮುಖ ಪ್ರಗತಿಯೇ ದೇಶದ ಅಭಿವೃದ್ಧಿಗೆ ದಾರೀದೀಪ ಎಂದು ಹೇಳಿ ಸ್ತ್ರೀ ಮಹತ್ವದ ಕುರಿತು ಕಾವ್ಯ ವಾಚನ ಮಾಡಿದರು.
ನಿವೃತ್ತ ಗುರುಮಾತೆ ರೇಣುಕಾ ಗುಡಿಮನಿ ಮಾತನಾಡಿ ಮಹಿಳೆಯರು ತಮ್ಮ ಸಹಜ ಸಾಮರ್ಥ್ಯಗಳಿಗೆ ಅನುಗುಣವಾಗಿ ಬೆಳೆಯುವ ಸುರಕ್ಷಿತ ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಬೇಕು,ಇದರಲ್ಲಿ ಸಮಾಜದ ಪಾತ್ರ ಅಗತ್ಯವಾಗಿದೆ ಎಂದರು. ರಾಣೆಬೆನ್ನೂರಿನ ಕಸ್ತೂರಿ ವಿನಾಯಕ್ ಹುಲಿಹಳ್ಳಿ (ಶಿಕ್ಷಣ), ರೇಣುಕಾ ಗುಡಿಮನಿ (ಸಂಘಟನೆ) ಹಾಗೂ ಜುಬೇದ ನಾಯಕ್ (ಸಾಹಿತ್ಯ) ಸಾಧಕಿಯರನ್ನು ಪೌಂಡೇಶನ್ ಉಪಾಧ್ಯಕ್ಷೆ ಸುವೇಧ ಲಕ್ಷ್ಮಿಪತಿ ಹಾಗೂ ಸಹ ಕಾರ್ಯದರ್ಶಿ ಭಾರತಿ ರಾಕೇಶ ಶಾಲು ಹೊದಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಸಮಾಜ ಕುರಿತು ತಾಲೂಕ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಹಿರೇ ಲಿಂಗದಹಳ್ಳಿಯ ಪವಿತ್ರ ಗೋರ್ಪನವರ್, ನಗರದ ಮೀನಾಕ್ಷಿ ನಡಕಟ್ಟಿನ ಹಾಗೂ ಕೂಳೆನೂರಿನ ಗೀತಾ ಸೂರದ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಪುತ್ರ ನೀಡಿ ಗೌರವಿಸಲಾಯಿತು.
ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಬಾಲ ಪ್ರತಿಭೆ ಲೋಕ್ಷಾ ಅವಳ ಭರತನಾಟ್ಯ ಪ್ರದರ್ಶನ ವಿಶೇಷ ಗಮನ ಸೆಳೆಯಿತು. ಭಾಗ್ಯಲಕ್ಷ್ಮಿ ರಾಘವೇಂದ್ರ, ಮುಖ್ಯ ಶಿಕ್ಷಕಿ ಪ್ರಭಾವತಿ ಕೊಪ್ಪದ, ಸಾವಿತ್ರಮ್ಮ ಗುಣತಿಮಠ, ನಿವೃತ್ತ ಶಿಕ್ಷಕ ಹೇಮಗಿರಿಗೌಡ ಗೊಲ್ಲರ, ಶೈಲಜಾ ಕೋರಿಶೆಟ್ಟರ, ಲಕ್ಕಣ್ಣವರ ಸಹೋದರಿಯರು, ಜಯಶ್ರೀ ಬಸಟ್ಟಿಯವರ,ಅಮೃತ, ಗೌತಮಿ, ಗಗನ ಮತ್ತಿತರರು ಉಪಸ್ಥಿತರಿದ್ದರು.ಶ್ರೇಯಾ ಪ್ರಾರ್ಥಿಸಿದರು. ಫೌಂಡೇಶನ್ ಉಪಾಧ್ಯಕ್ಷ ಡಾ.ಲಕ್ಷ್ಮೀಪತಿ ಸ್ವಾಗತಿಸಿದರು. ವಿಶ್ರುತ ಎಲ್.ಜಿ ನಿರೂಪಿಸಿದರು. ಫಾರ್ಮಸಿ ಕಾಲೇಜಿನ ಉಪನ್ಯಾಸಕ ರಾಕೇಶ್ ಜಿ.ಎಚ್ ವಂದಿಸಿದರು.