ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ವಣಜೋಳೆ ಆಯ್ಕೆ: ಅಧಿಕಾರ ಹಸ್ತಾಂತರ

ಅಥಣಿ ನ್ಯಾಯಾಲಯದ ನ್ಯಾವಾದಿಗಳ ಸಂಘದ ನೂತನ ಅಧ್ಯಕ್ಷರಾದ ಕೆ.ಎ.ವಣಿಜೋಳೆ ಅವರಿಗೆ ಕಳೆದ ಸಾಲಿನ ಅಧ್ಯಕ್ಷ .ಕೆ.ಎ.ಹಲಸಗಿ ಅಧ


ಅಥಣಿ 01: ಅಥಣಿಯ ಪಟ್ಟಣದ ಸ್ಥಳೀಯ ನ್ಯಾಯಾಲಯದ ನ್ಯಾಯವಾದಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ  ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೂಟಿ ನಡೆದು ನ್ಯಾಯವಾದಿ ಕೆ.ಎ.ವಣಜೋಳೆ ಅವರು ಪ್ರತಿಸ್ಪಧರ್ಿ ಎಸ್.ಜಿ.ಪೂಜಾರಿ ಅವರನ್ನು ಬಾರಿ ಅಂತರದಿಂದ ಸೋಲಿಸುವ ಮೂಲಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.

ಇಂದು ಅಥಣಿ ನ್ಯಾಲಯದಲ್ಲಿ 2018-19 ನೇ ಸಾಲಿನ ನಾಯವಾದಿಗಳ ಸಂಘದ ಪಧಾಧಿಕಾರಿಗಳ ಪದಗ್ರಹಣ ಸಮಾರಂಭ ಕಳೆದ ಸಾಲಿನ ಅಧ್ಯಕ್ಷ ಕೆ.ಎ. ಹಲಸಿಗಿ ಅವರು ನೂತನವಾಗಿ ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎ.ವಣಜೋಳೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಕೆ.ಎ.ವಣಜೋಳೆ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ನನ್ನ ಆಡಳಿತಾವದಿಯಲ್ಲಿ ಬಾರ ಅಸೋಶಿಸಿಯನ್ಕ್ಕೆ ಯಾವುದೇ ರೀತಿ ಅಪಕೀತರ್ಿ ಬರದಂತೆ ಕಾರ್ಯವನ್ನು ನಿರ್ವಹಿಸಿಕೊಂಡು ಎಲ್ಲ ಹಿರಿಯರ ಸಲಹೆ ಕಿರಿಯರ ಸಹಕಾರದಿಂದ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ದು ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುವೆ ಮತ್ತು ನ್ಯಾಯಾಲಯದ ವಾತವಾರಣ ಸ್ವಚ್ಛಗೊಳಿಸಿ ಸಂಘಕ್ಕೆ ನ್ಯಾಯವನ್ನು ಒದಗಿಸುವುದಾಗಿ ತಿಳಿಸಿದರು.

ಹಿರಿಯ ನ್ಯಾಯವಾದಿಗಳಾದ ಮಹಾಜನ ಅವರು ಮಾತನಾಡಿ, ಚುನಾವಣೆಗೆ ಅಂದರೆ ಪರ ವಿರೋಧ ಇರುವುದು ಸಹಜ ಇವನೆಲ್ಲವನ್ನು ಮೀರಿ ಸಂಘಕ್ಕಾಗಿ ದುಡಿಯುವಂತಾಗಲಿ. ನ್ಯಾವಾದಿಸಂಘದಿಂದ ಹಲವಾರು ಕೆಲಸಗಳು ಆಗ ಬೇಕಾಗಿದ್ದು ಇವುಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಅಧ್ಯಕ್ಷರು ಕಟ್ಟು ನಿಟ್ಟಿನ ಕಾರ್ಯವನ್ನು ನಿರ್ವಹಿಸಲಿ. ಎಲ್ಲ ಹಿರಿಯ ಕಿರಿಯ ನ್ಯಾಯವಾದಿಗಳು ಒಗ್ಗಟ್ಟಿನಂದ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.

ಮತ್ತೋರ್ವ ಹಿರಿಯ ನ್ಯಾಯವಾದಿ ಸಿ.ಪಿ.ಹಚ್ಚಿಬಟ್ಟಿ ಮಾತನಾಡಿ, ನ್ಯಾಯವಾದಿಗಳ ಸಂಘದ ಸದಸ್ಯನಿಗೆ ಸೌಲಭ್ಯಗಳು ಸಿಗುವಂತ ಕಾರ್ಯವಾಗಲಿ, ನ್ಯಾಯಾಲಯದಲ್ಲಿರುವ ಗ್ರಂಥಾಲಯವನ್ನು ಉನ್ನತಮಟ್ಟಕ್ಕೇರಿಸಲಿ ಇದರಿಂದ ಹಿರಿಯ ಕಿರಿಯ ನ್ಯಾಯವಾದಿಗಳಿಗೆ ಅನುಕೂಲಕರವಾಗುತ್ತೆ ಎಂದರು.

ನ್ಯಾಯವಾದಿ ಸಂಘದ ಚುನಾವಣಾ ಅಧಿಕಾರಿಯಾಗಿ ನ್ಯಾಯವಾದಿ ಬಿ.ಎಸ್.ಅಂಬಿಯವರು ಕಾರ್ಯವನ್ನು ನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ ನ್ಯಾಯವಾದಿ ಕೆ.ಎ.ವಣಜೋಳೆ 204 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ ಅಭ್ಯಥರ್ಿಗಳಲ್ಲಿ ಎಸ್.ಆರ್.ಪಾಟಣಕರ 171 ಮತಗಳನ್ನು ಪಡೆದು ಜಯವನ್ನು ಸಾಧಿಸಿದ್ದಾರೆ, ಕಾರ್ಯದಶರ್ಿಯಾಗಿ ರವಿ ಕಾಂಬಳೆ 174 ಮತಗಳನ್ನು ಪಡೆದು ಜಯವನ್ನು ಗಳಿಸಿದ್ದಾರೆ. ಗ್ರಂಥಾಲಯ ಕಾರ್ಯದಶರ್ಿಗಳಾಗಿ ಎಸ್.ಎಮ್.ಬಾಬರ ಆಯ್ಕೆ ಆಗಿದ್ದಾರೆ.

ಹಿರಿಯ ನ್ಯಾಯವಾದಿಗಳಾದ ಆರ್.ಎನ್.ಸಿದ್ಧಾಂತಿ, ಸುರೇಶ ಸೌದಿ, ಆರ್.ಎಮ್.ಬೋಸಲೆ,   ಬಿ.ಎನ್.ದಳವಾಯಿ, ಬಿ.ಎಮ್.ಪಾಟೀಲ, ಬಿ.ವ್ಹಿ.ಹೊನಗೌಡರ, ಆರ್.ಎಸ್.ಪಾಟೀಲ, ವ್ಹಿ.ಎಸ್.ದೇಸಾಯಿ, ಎನ್.ಆರ್.ಕೋಕಲೆ, ಎಸ್.ಎಸ್.ಪಾಟೀಲ, ಬಸವರಾಜ ಡಂಗಿ ಸೇರಿದಂತೆ ಅನೇಕರು ಇದ್ದರು.