ನವದೆಹಲಿ, ಏ 18, 2016ರಲ್ಲಿ
ಸನ್ ರೈರರ್ಸ್ ಹೈದರಾಬಾದ್ ತಂಡ ಪ್ರಶಸ್ತಿ ಜಯಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್
(ಐಪಿಎಲ್) ನ ನೆಚ್ಚಿನ ಹಾಗೂ ಸ್ಮರಣೀಯ ಕ್ಷಣವಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ
ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಬಹಿರಂಗ ಪಡಿಸಿದ್ದಾರೆ.2016ರಲ್ಲಿ ಸನ್ ರೈಸರ್ಸ್
ಹೈದರಾಬಾದ್ ತಂಡದ ನಾಯಕರಾಗಿದ್ದ ವಾರ್ನರ್, ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್
ಬೆಂಗಳೂರು ತಂಡವನ್ನು ಸೋಲಿಸಿ ತಂಡಕ್ಕೆ ಚಾಂಪಿಯನ್ ಪಟ್ಟ ಗೆದ್ದುಕೊಡುವಲ್ಲಿ ಮಹತ್ವದ
ಪಾತ್ರವಹಿಸಿದ್ದರು. ಪ್ರಸ್ತುತ ಎಲ್ಲಡೆ ಲಾಕ್ ಡೌನ್ ಇರುವ ಕಾರಣ ಐಪಿಎಲ್
ಫ್ರಾಂಚೈಸಿಗಳು ಸೇರಿದಂತೆ ಬಹುತೇಕ ಕ್ರೀಡಾಪಟುಗಳು ಸಾಮಾಜಿಕ ತಾಣದಲ್ಲಿ
ಸಕ್ರಿಯರಾಗಿದ್ದಾರೆ. ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ಸಹ, ವಾರ್ನರ್
ಬಹಿರಂಗಪಡಿಸಿರುವ ಐಪಿಎಲ್ ನೆಚ್ಚಿನ ಕ್ಷಣದ ವಿಡಿಯೋ ತುಣಕನ್ನು ಹಂಚಿಕೊಂಡಿದೆ.''2016ರಲ್ಲಿ
ಪ್ರಶಸ್ತಿ ಜಯಿಸಿದ್ದು ಐಪಿಎಲ್ ನ ನನ್ನ ನೆಚ್ಚಿನ ಕ್ಷಣವಾಗಿದೆ. ನಾವು ಉತ್ತಮ
ಟೂರ್ನಿಯನ್ನು ಹೊಂದಿದ್ದವು. ಸಾಕಷ್ಟು ನಿಕಟವಾಗಿದ್ದ ಪಂದ್ಯಗಳನ್ನು ಗೆದ್ದಿದ್ದು ನಮ್ಮ
ತಂಡದ ಪ್ರಜ್ಞೆಯನ್ನು ಜಾಗೃತಗೊಳಿಸಿತು, ಇದೆಲ್ಲದರ ಕೊಡುಗೆ ತಂಡದ ಕೋಚ್ ಗಳಿಗೆ ಮತ್ತು
ಮಾರ್ಗದರ್ಶಕರಿಗೆ ಸಲ್ಲಬೇಕು, '' ಎಂದು ವಿಡಿಯೊದಲ್ಲಿ ವಾರ್ನರ್ ಹೇಳಿದ್ದಾರೆ.