ಗುಳೇದಗುಡ್ಡ,16: ಶತಮಾನೋತ್ಸವ ಆಚರಿಸಿದ ಜಿಲ್ಲೆಯ ಪ್ರತಿಷ್ಠಿತ ಗುಳೇದಗುಡ್ಡ ಲಕ್ಷ್ಮೀ ಸಹಕಾರಿ ಬ್ಯಾಂಕಿನ ನಿದರ್ೇಶಕ ಮಂಡಳಿಗೆ ರವಿವಾರ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಮಾಜಿ ಶಾಸಕ ರಾಜಶೇಖರ ಶೀಲವಂತ ಅವರ ಗುಂಪು ತನ್ನ ಮಡಿಲಿಗೆ ಬಾಚಿಕೊಂಡು ತನ್ನ ವಿರುದ್ಧದ ಗುಂಪನ್ನು ಧೂಳಿಪಟ ಮಾಡಿ ವಿಜಯ ಸಾಧಿಸಿದೆ.
ಮಾಜಿಶಾಸಕ ರಾಜಶೇಖರ ಶೀಲವಂತ ಗುಂಪಿನ ಸಾಮಾನ್ಯ ಕ್ಷೇತ್ರದಿಂದ ಸ್ಪಧರ್ಿಸಿದ್ದ ಒಟ್ಟು 11 ಜನ, ಹಿಂದುಳಿದ ವರ್ಗ 'ಅ' ಕ್ಷೇತ್ರದ 02 ಹಾಗೂ ಪ.ಪಂ. ಕ್ಷೇತ್ರದ 01 ಕ್ಷೇತ್ರದ ಅಭ್ಯಥರ್ಿ ಸೇರಿದಂತೆ ಒಟ್ಟು 14 ಸ್ಥಾನಗಳನ್ನೂ ಗೆಲ್ಲುವ ಮೂಲಕ ನಾಯಕ ರಾಜಶೇಖರ ಶೀಲವಂತ ಗುಂಪು ಸತತ ಏಳನೇ ಬಾರಿಯೂ ವಿಜಯ ಮಾಲೆ ತನ್ನದಾಗಿಸಿಕೊಂಡಿದೆ.
ಪಡೆದ ಮತಗಳು: ಅಲದಿ ರವೀಂದ್ರ ಶಿವಪ್ಪ-1246 , ಆಲೂರ ಸಂಗಪ್ಪ ನೀಲಪ್ಪ-1225 , ಕರನಂದಿ ಮೃತ್ಯುಂಜಯ ಬಸವರಾಜ-1252, ಕಾರಕೂನ್ ಸಂಜೀವ ಗೋವಿಂದರಾವ್-1363 , ಪವಾರ ಪರಶುರಾಮ ನಾರಾಯಣಸಾ-1194, ಮಾಲಪಾಣಿ ಕಮಲಕಿಶೋರ ಶ್ರೀಕಿಶನ್- 1362, ರಾಜನಾಳ ಮುರಗೇಶ ಶಿವಪ್ಪ-1320, ರಾಠಿ ಸಂಪತಕುಮಾರ ಘನಶಾಂದಾಸ್- 1397, ಶೀಲವಂತ ಗಣೇಶ ಸಂಗಪ್ಪ- 1331, ಶೀಲವಂತ ರಾಜಶೇಖರ ವೀರಣ್ಣಾ-1353, ಹುನಗುಂದ ಸಂಗಪ್ಪ ವೀರಭದ್ರಪ್ಪ- 1258 ಮತ ಪಡೆದು ಜಯ ಸಾಧಿಸಿದ್ದಾರೆ.
ಹಿಂದುಳಿದ ವರ್ಗ 'ಅ' ಕ್ಷೇತ್ರದ ನಿದರ್ೇಶಕ ಮಂಡಳಿಯ 02 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ರಾಜಶೇಖರ ಶೀಲವಂತ ಗುಂಪಿನ ಕುರಹಟ್ಟಿ ವೀರಣ್ಣ ವೀರಬಸಪ್ಪ-1382, ನೇಮದಿ ದೀಪಕ ಗಣಪತಿ- 1299 ಮತ ಪಡೆದು ಜಯ ಸಾಧಿಸಿದ್ದಾರೆ.
ಪರಿಶಿಷ್ಟ ಪಂಗಡದ ಕ್ಷೇತ್ರದ 01 ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ರಾಜಶೇಖರ ಶೀಲವಂತ ಗುಂಪಿನ ತಳವಾರ ಪರಶುರಾಮ ಹನಮಂತ-1351 ಮತ ಪಡೆದು ಜಯ ಗಳಿಸಿದ್ದಾರೆ.
ಸಂತೋಷ ನಾಯನೇಗಲಿ ಗುಂಪಿಗೆ ಸೋಲು : ಸಾಮಾನ್ಯ ಕ್ಷೇತ್ರದಿಂದ 06 ಜನ ಅಭ್ಯಥರ್ಿಗಳು, ಪ.ಪಂಗಡದಿಂದ ಒಬ್ಬ ಅಭ್ಯಥರ್ಿ, ಹಿಂದುಳಿದ ವರ್ಗ 'ಅ' ಕ್ಷೇತ್ರದಿಂದ ಒಬ್ಬ ಅಭ್ಯಥರ್ಿ ಸ್ಪಧರ್ಿಸಿದ್ದರೂ ಒಟ್ಟು 08 ಜನ ಅಭ್ಯಥರ್ಿಗಳು ನಾಯಕ ಸಂತೋಷ ನಾಯನೇಗಲಿ (494) ಸೇರಿದಂತೆ ಗುಂಪಿನಿಂದ ಎಲ್ಲರೂ ಪರಾಭವಗೊಂಡು ಸೋಲನ್ನು ಅನುಭವಿಸಿದ್ದಾರೆ.
ಶೀಲವಂತ ಗುಂಪಿಗೆ ಸಿಕ್ಕ ಜಯ : ಸತತ 6 ಬಾರಿ ಬ್ಯಾಂಕಿನ ಅಧಿಕಾರವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡೆ ಬಂದಿದ್ದ ಮಾಜಿ ಶಾಸಕ ರಾಜಶೇಖರ ಶೀಲವಂತ ಗುಂಪಿಗೆ ಮತ್ತೇ 07 ನೇ ಬಾರಿಯೂ ಗೆಲುವಿನ ಮಾಲೆ ಅವರ ಕೊರಳಿಗೆ ಬಿದ್ದಿದೆ. ಮೊದಲಿದ್ದ 2209 ಮತಗಳ ಜೊತೆಗೆ ಈ ಬಾರಿ ನ್ಯಾಯಾಲದ ಮೊರೆ ಹೋಗಿ ಹೊಸ 863 ಜನ ಶೇರುದಾರರಿಗೆ ಮತದಾನ ಹಕ್ಕು ನೀಡುವಲ್ಲಿ ಶೀಲವಂತ ಗುಂಪಿನ ಪಾತ್ರ ಹಿರಿದಾಗಿದೆ. ಬ್ಯಾಂಕಿನ ಒಟ್ಟು 17 ಸ್ಥಾನಗಳ ಪೈಕಿ 01 ಪ.ಜಾತಿ ಕ್ಷೇತ್ರದಿಂದ ಈರಣ್ಣಾ ಬಂಡಿವಡ್ಡರ ಹಾಗೂ 02 ಮಹಿಳಾ ಕ್ಷೇತ್ರದಿಂದ ಲಕ್ಷ್ಮೀಬಾಯಿ ರೂಡಗಿ ಹಾಗೂ ವಿಜಯಾ ಸಾವಳಗಿಮಠ ಅವಿರೋಧವಾಗಿ ಆಯ್ಕೆಯಾಗಿದ್ದರು. ಬ್ಯಾಂಕಿನ ಒಟ್ಟು 17 ಸ್ಥಾನಗಳನ್ನೂ ರಾಜಶೇಖರ ಶೀಲವಂತ ಗುಂಪು ತನ್ನದಾಗಿಸಿಕೊಂಡು ಇತಿಹಾಸ ನಿಮರ್ಿಸಿದೆ.