ಲೋಕದರ್ಶನ ವರದಿ
ಗುರ್ಲಾಪೂರ 08 : ಮೂಡಲಗಿ ಎಂದರೆ ನೆನಪಿಗೆ ಬರುವುದು ಪ್ರಸಿದ್ಧ ದನಗಳ ಸಂತೆ, ಅದೇ ರೀತಿ ಗುದ್ದಾಡಿ ತಾಲೂಕಾ ಗದ್ದುಗೆ ಏರಿರುವುದು ಇಡೀ ಕರ್ನಾಟಕ ಜನರಿಗೆ ಗೊತ್ತು, ಬ್ಯಾಂಕಿಂಗ್ ವ್ಯವಹಾರದಲ್ಲಿ ಜಿಲ್ಲೆಯ ಗಮನ ಸೆಳೆದ ಪಟ್ಟಣ, ಇತ್ತಿಚಿಗೆ ಪಟ್ಟಣದಲ್ಲಿ ನೂತನ ಕಟ್ಟಡ ಉದ್ಘಾಟನೆಗೊಂಡ ಕುರುಹಿನಶೆಟ್ಟಿ ಸೊಸಾಯಿಟಿಯ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ರೇಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಹೇಳುವ ಹಾಗೆ
ಭಾರತದಲ್ಲಿ ಬದಲಾವಣೆ ಕಾಣಬೇಕಾದರೆ ಮುಂಬಯಿ ನಗರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆ ಕಾಣಬೇಕಾದರೆ ಮೂಡಲಗಿ ಪಟ್ಟಣದಲ್ಲಿ ಮೂಡಲಗಿ ಪಟ್ಟಣ ಬೆಳೆಯುತ್ತಿರುವುದಕ್ಕೆ ಸಚಿವರ ಮಾತೆ ಸಾಕ್ಷಿ ಈ ಪಟ್ಟಣದಿಂದ ವಿವಿಧ ನಗರ ಹಾಗೂ ಹೊರರಾಜ್ಯಕ್ಕೆ ಪ್ರಯಾಣಿಸಬೇಕಾದರೆ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿ ಗುರ್ಲಾಪೂರ ಕ್ರಾಸ್ದಿಂದ ಸಾಗಬೇಕು.
ಗುರ್ಲಾಪೂರ ಮೂಡಲಗಿ ಅಂತರ 3ಕಿ.ಮೀ. ಈ ರಸ್ತೆಯ ಆಕಾರ ಹೇಳತೀರದು. ಮೊಳಕಾಲ ಉದ್ದ ಗುಂಡಿಗಳು ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಆಗಿರುವ ಅಪಘಾತಗಳು ಸಾಕಷ್ಟು, ಅತೀಕ್ರಮಣದಿಂದ ಇಕ್ಕಟ್ಟಾದ ರಸ್ತೆ, ಈ ಎಲ್ಲ ಸಮಸ್ಯೆಗೆ ಪರಿಹಾರ ಯಾವಾಗ ಎಂದು ಜನ ಕೇಳುತ್ತಿದ್ದಾರೆ. ಕಾಟಾಚಾರಕ್ಕೆ ಗುಂಡಿ ಮುಚ್ಚಿದರೆ ಸಾಲದು, ವೃದ್ಧರು, ಮಹಿಳೆಯರು, ಅಂಗವೀಕಲರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಇನ್ನಾದರೂ ಎಚ್ಚೆತ್ತುಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳು ಗುರ್ಲಾಪೂರ ಕ್ರಾಸ್ದಿಂದ ಮೂಡಲಗಿವರೆಗೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಡಬಲ್ ರಸ್ತೆ ನಿರ್ಮಿಸಬೇಕೆಂದು ಗ್ರಾಮಸ್ಥರು ಹಾಗೂ ಪ್ರಯಾಣಿಕರ ಆಗ್ರಹವಾಗಿದೆ.