ಕೊಪ್ಪಳ ೦೯: ಕೊಪ್ಪಳ ಜಿಲ್ಲೆಯ ಐತಿಹಾಸಿಕ ಆನೆಗೊಂದಿ ಉತ್ಸವದ ಮುಖ್ಯವೇದಿಕೆಯ ಮಳಿಗೆ ಸಾಲಿನಲ್ಲಿ ಕೊಪ್ಪಳ ಅರಣ್ಯ ವಿಭಾಗ ಸ್ಥಾಪಿಸಿರುವ ವನ್ಯಜೀವಿಗಳೊಂದಿಗೆ ಮಾನವ ಸಹಬಾಳ್ವೆ ಸಂದೇಶ ಸಾರುವ ಮಳಿಗೆ ಮತ್ತು ಸೆಲ್ಫಿ ಸ್ಟ್ಯಾಂಡ್ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಿದೆ.ಹಸಿರೇ ಉಸಿರು ,ಕಾಡಿದ್ದರೆ ನಾಡು ಸಂದೇಶಗಳು ಕೇವಲ ಘೋಷಣೆಗಳಾಗಬಾರದು. ಮಾನವ ಪ್ರಾಣಿ ಸಂಘರ್ಷ ಇಲ್ಲವಾಗಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅನುಸರಿಸಬೇಕು ಎಂಬ ಜಾಗೃತಿ ಮೂಡಿಸುವ ಬೆಟ್ಟ, ಸರೋವರ, ಪ್ರಾಣಿ ಸಂಕುಲಗಳು, ಐತಿಹಾಸಿಕ ಸ್ಮಾರಕಗಳ ಪ್ರತಿರೂಪಗಳನ್ನು ಇಲ್ಲಿ ನಿಮರ್ಿಸಲಾಗಿದೆ.
ಸೆಲ್ಫಿ ಸ್ಟ್ಯಾಂಡ್ನಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ, ಜಿ.ಪಂ. ಅಧ್ಯಕ್ಷ ಎಚ್. ವಿಶ್ವನಾಥರೆಡ್ಡಿ, ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಬೈಯಾಪುರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನಮೂರ್ತಿ , ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಸೇರಿದಂತೆ ಹಲವರು ಫೋಟೊ ತೆಗೆಸಿಕೊಂಡಿದ್ದು, ವಿಶೇಷವಾಗಿತ್ತು. ಹಿಂಬದಿಯಲ್ಲಿ ಪ್ರಕೃತಿದತ್ತವಾದ ಬೆಟ್ಟಸಾಲು ಕಾಣಸಿಗುವುದು ಈ ಸೆಲ್ಫಿ ಸ್ಟ್ಯಾಂಡಿನ ವಿಶೇಷವೆನಿಸಿದೆ.
ಉತ್ಸವಕ್ಕೆ ಆಗಮಿಸಿರುವ ಸಾರ್ವಜನಿಕರು ಕೂಡ ಈ ಫ್ರೇಮಿನಲ್ಲಿ ನಿಂತು ಫೋಟೊ ತೆಗೆಸಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ