ಇಡುಕ್ಕಿ,ಜ 18 ಮಹಿಳೆಯೊಬ್ಬರು ಎರಡು ದಿನ ಕಾರಿನಲ್ಲೇ ಲಾಕ್ ಆಗಿದ್ದು, ಆಕೆಯ ಪತಿ ಕಾಣೆಯಾಗಿರುವ ಘಟನೆ ಇಲ್ಲಿನ ಆದಿಮಾಲಿ ಬಳಿಯ ಕಲ್ಲಾರ್‍ಕುಟ್ಟಿಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೆಟ್ರೋಲ್ ಪಂಪ್ ಒಂದರ ಸಮೀಪ ಕಾರು ನಿಲ್ಲಿಸಿ, ನೈಸರ್ಗಿಕ ಕರೆಗೆ ಹೋಗಿ ಬರುವುದಾಗಿ ಪತಿ ತೆರಳಿದ್ದಾರೆ ನಂತರ ಕಿಡಿಗೇಡಿಗಳು ಕಾರನ್ನು ಲಾಕ್ ಮಾಡಿದ್ದಾರೆ .ಎರಡು ದಿನಗಳ ನಂತರ ಲೈಲಾಮಣಿ ದಣಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಆದರೆ ಆಕೆಯ ಪತಿ ಮ್ಯಾಥ್ಯೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ವೃದ್ಧ ದಂಪತಿಗೆ ತಿರುವನಂತಪುರದಲ್ಲಿ ಒಬ್ಬ ಮಗನಿದ್ದಾನೆ ಎಂದು ಮಾಹಿತಿ ನೀಡಿರುವ ಲೈಲಾಮಣಿ ಕೆಲವೊಮ್ಮೆ ವಿರೋಧಾತ್ಮಕ ಹೇಳಿಕೆಗಳನ್ನುನೀಡಿದ್ದಾರೆ. ಕಾರಿನೊಳಗೆ ಪಾಸ್‌ಬುಕ್ ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ. ವಯನಾಡಿನ ತಲಪ್ಪುಳ ಮೂಲದ ಇವರಿಬ್ಬರು ಇತ್ತೀಚೆಗೆ ತಮ್ಮ ಜಮೀನನ್ನು ಮಾರಿ ಬಾಡಿಗೆ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.