ವಿಕಾರ್ಡ್ ಶಿಕ್ಷಣ ಸಂಸ್ಥೆ- ನ್ಯೂ ಪಬ್ಲಿಕ್ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ
ರಾಣೇಬೆನ್ನೂರು 26 : ಭಾರತ ದೇಶಕ್ಕೆ ಬಹುದೊಡ್ಡ ಇತಿಹಾಸವಿದೆ. ಇತಿಹಾಸದ ಪರಿಕಲ್ಪನೆಯಲ್ಲಿ ಮತ್ತು ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ನಮ್ಮ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕಾದ ಅಗತ್ಯವಿದೆ ಎಂದು ಧಾರ್ಮಿಕ ಪರಿಷತ್ತಿನ ಜಿಲ್ಲಾ ಸದಸ್ಯ, ಸಣ್ಣ ತಮ್ಮಪ್ಪ ಬಾರ್ಕಿ ಹೇಳಿದರು.ಅವರು, ವೀರಭದ್ರೇಶ್ವರ ನಗರದ ವಿಕಾರ್ಡ್ ಶಿಕ್ಷಣ ಸಂಸ್ಥೆಯ, ನ್ಯೂ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ಇದ್ದು ಸಂವಿಧಾನವನ್ನು ಗೌರವಿಸಿ ನ್ಯಾಯ ಸಮ್ಮತ ಕರ್ತವ್ಯಗಳನ್ನು ನಿಭಾಯಿಸಲು ಮುಂದಾಗಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಸಂಸ್ಥೆಯ ಅಧ್ಯಕ್ಷ, ಏಕಾಂತ ಮುದಿಗೌಡ್ರ ಅವರು ಮಾತನಾಡಿ,ಗಣರಾಜ್ಯೋತ್ಸವ ಭಾರತೀಯ ಪ್ರತಿಯೊಬ್ಬ ನಾಗರಿಕರಿಗೂ ಹಬ್ಬವಿದ್ದಂತೆ. ಭಾರತದ ಸಂಸ್ಕೃತಿ ಮತ್ತು ಪರಂಪರೆ ಅಳವಡಿಸಿಕೊಂಡು, ಪ್ರಾಮಾಣಿಕತೆಯಿಂದಮುಂದಾದಾಗ ಮಾತ್ರ ಭಾರತದ ಅಭಿವೃದ್ಧಿಯನ್ನು ಮತ್ತಷ್ಟು ಭದ್ರವಾಗಿ ನಿರ್ಮಿಸಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ಶ್ರೀಮತಿ ವಿನೋದಮ್ಮ ಎಚ್. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ್, ಶಿವಾನಂದ ಗೋರ ಕ್ಕಳ್ಳವರ ಮತ್ತಿತರರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ನಾಗರತ್ನ ಹುಲ್ಲತಿ, ಶಬರಿನ್ ಬಡಿಗೇರ, ಸಂಗೀತಾ ಕುಲಕರ್ಣಿ, ಗಾಯತ್ರಿ ಭರತಕುಮಾರ್, ಶೃತಿ ದೊಡ್ಡಗೌಡ್ರ, ಚಂದ್ರಿಕಾ ಬಿರಾಳ, ರೂಪಾ ಸಿರಿಗೇರಿ, ಚಂದ್ರಶೇಖರ್ ಕೊಡ್ಲಿ, ಮೇಘನಾ ಮಾಕನೂರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರತಿಕ್ಸಾ ಕೊಪ್ಪದ ಸಂಗಡಿಗರು ಪ್ರಾರ್ಥಿಸಿದರು. ಮಂಜುಳಾ ಬಣಕಾರ್ ಸ್ವಾಗತಿಸಿ, ವಂದನಾ ಬಾನಾವಳಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರವೀಣ್ ಮಡಿವಾಳರ ನಿರೂಪಿಸಿ, ಸವಿತಾ ಮಡಿವಾಳರ ವಂದಿಸಿದರು. ನಂತರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.ಊ