ಧೋನಿ ಮತ್ತೆ ನಾಯಕತ್ವ ವಹಿಸಿದ್ದಕ್ಕೆ ಆಯ್ಕೆ ಸಮಿತಿ ಗರಂ ಆಗಿದ್ದೇಕೆ?

 ಮುಂಬೈ 09: 2018 ಏಷ್ಯಾ ಕಪ್ ಚಾಂಪಿಯನ್ ಆಗಿ ಟೀಂ ಇಂಡಿಯಾ ಹೊರಹೊಮ್ಮಿದ್ದು ಇದೀಗ ಎಂಎಸ್ ಧೋನಿ ತಮ್ಮ 200ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಆಯ್ಕೆ ಸಮಿತಿ ಅಸಮಾಧಾನಗೊಂಡಿದೆ

                ಏಷ್ಯಾಕಪ್ ಕ್ರಿಕೆಟ್ ಟೂನರ್ಿಯ ಸೂಪರ್ 4 ಹಂತದ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯವನ್ನು ರೋಹಿತ್ ಶರ್ಮಾ ಬದಲಿಗೆ ಎಂಎಸ್ ಧೋನಿ ನಾಯಕತ್ವ ವಹಿಸಿದ್ದರು. ಪಂದ್ಯ ರೋಚಕ ಡ್ರಾ ಆಗಿತ್ತು

                ಇದೀಗ ಎಂಎಸ್ ಧೋನಿ ನಾಯಕತ್ವಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಅಸಮಾಧಾನ ಹೊರಹಾಕಿರುವುದು ತಿಳಿದುಬಂದಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ನೇತೃತ್ವದ ಸಮಿತಿ ಧೋನಿ ನಾಯಕತ್ವಕ್ಕೆ ಬೇಸರಗೊಂಡಿದೆ ಎಂದು ತಿಳಿದುಬಂದಿದೆ

                ರೋಹಿತ್ ಶರ್ಮಾ ನೇತೃತ್ವದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಿದ್ದರಿಂದ ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ವೇಳೆ ಉಪನಾಯಕ ಶಿಖರ್ ಧವನ್ ಬದಲಿಗೆ ತಂಡದ ನಾಯಕತ್ವವನ್ನು ಧೋನಿಗೆ ಬಿಟ್ಟುಕೊಟ್ಟಿದ್ದರು. ಇದು ಧೋನಿ ಪಾಲಿಗೆ 200ನೇ ಏಕದಿನ ಪಂದ್ಯವಾಗಿತ್ತು. ಇಲ್ಲಿ ಧೋನಿ ತೆಗೆದುಕೊಂಡ ನಿಧರ್ಾರದ ವಿರುದ್ಧ ಸಮಿತಿ ಬೇಸರ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.