ಸಲ್ಮಾನ್ ಖಾನ್ ಐಶಾರಾಮಿ ಮನೆ ಬಿಟ್ಟು ಅಪಾರ್ಟ್‌ಮೆಂಟ್‌ ಗೆ ಶಿಫ್ಟ್ ಆಗಿದ್ದು ಏಕೆ?

ಮುಂಬೈ, ಮಾ.19, ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಐಷಾರಾಮಿ ಬಂಗಲೆ ಬಿಟ್ಟು ಸಣ್ಣ ಫ್ಲ್ಯಾಟ್‌ನಲ್ಲಿ ವಾಸಿಸಲು ಕಾರಣವನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್‌ನ ಅತ್ಯಂತ ದುಬಾರಿ ನಟರಲ್ಲಿ ಒಬ್ಬರು. ಆದರೆ ಅವರು ವರ್ಷಗಳಿಂದ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಕುಟುಂಬವೂ ಈ ಕಟ್ಟಡದಲ್ಲಿದೆ. ಐಷಾರಾಮಿ ಬಂಗಲೆಯ ಬದಲು ಈ ಫ್ಲ್ಯಾಟ್‌ನಲ್ಲಿ ಏಕೆ ಉಳಿದುಕೊಂಡಿದ್ದೇನೆ ಎಂದು ಸಲ್ಮಾನ್ ಬಹಿರಂಗಪಡಿಸಿದ್ದಾರೆ “ನಾನು ಯಾವುದೇ ದೊಡ್ಡ ಐಷಾರಾಮಿ ಬಂಗಲೆಯಲ್ಲಿ ವಾಸಿಸುವುದಕ್ಕಿಂತ ಹೆಚ್ಚಾಗಿ ಬಾಂದ್ರಾ ಫ್ಲಾಟ್‌ನಲ್ಲಿ ವಾಸಿಸಲು ಇಷ್ಟಪಡುತ್ತೇನೆ ಏಕೆಂದರೆ ನನ್ನ ಪೋಷಕರು ಅಲ್ಲಿ ನನ್ನ ಫ್ಲಾಟ್‌ಗಿಂತ ಒಂದು ಮಹಡಿ ಮೇಲೆ ಇರುತ್ತಾರೆ” ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ.   "ಈ ಇಡೀ ಕಟ್ಟಡ ನನ್ನ ಒಂದು ದೊಡ್ಡ ಕುಟುಂಬದಂತಿದೆ, ನಾವು ಪುಟ್ಟ ಮಕ್ಕಳಾಗಿದ್ದಾಗ ಕೆಳಗಿನ ತೋಟದಲ್ಲಿ ಒಟ್ಟಿಗೆ ಆಟವಾಡುತ್ತಿದ್ದೆವು ಮತ್ತು ಕೆಲವೊಮ್ಮೆ ಅಲ್ಲಿ ಮಲಗುತ್ತಿದ್ದೆವು. ಈ ಮೊದಲು ನಮಗೆ ಪ್ರತ್ಯೇಕ ಮನೆಗಳಿರಲಿಲ್ಲ, ನಾವು ಎಲ್ಲಾ ಮನೆಗಳನ್ನು ಒಂದೇ ರೀತಿ ಪರಿಗಣಿಸುತ್ತಿದ್ದೆವು. ನಾವು ಯಾವುದೇ ಮನೆಗೆ ಬೇಕಾದರೂ ಹೋಗಿ ಏನು ಬೇಕಾದಾರೂ ತಿನ್ನಬಹುದು. ಅಷ್ಟು ಸಲಿಗೆಯನ್ನು ಇಲ್ಲಿನ ಜನ ನೀಡಿದ್ದಾರೆ. ಇಂತಹದನ್ನು ಕಳೆದುಕೊಳ್ಳಲಾರೆ” ಎಂದಿದ್ದಾರೆ.