‘ಮಾಲ್ಗುಡಿ ಡೇಸ್’ ಈ ವಾರ ತೆರೆಗೆ

ಬೆಂಗಳೂರು, ಫೆ 03 :   ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್ & ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ ರತ್ನಾಕರ್ ಕಾಮತ್ ನಿರ್ಮಿಸಿರುವ ‘ಮಾಲ್ಗುಡಿ ಡೇಸ್’  ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  

ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಕಿಶೋರ್ ಮೂಡಬಿದ್ರೆ ನಿರ್ದೇಶಿಸಿದ್ದಾರೆ   ಈ ಹಿಂದೆ ‘ಅಪ್ಪೆ ಟೀಚರ್‘ ಎಂಬ ತುಳು ಚಿತ್ರವನ್ನು ಕಿಶೋರ್ ನಿರ್ದೇಶಿಸಿದ್ದರು 

ಕಿಶೋರ್ ಮೂಡಬಿದ್ರೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣವಿದೆ  ಪ್ರದೀಪ್ ನಾಯಕ್ ಸಂಕಲನ ಹಾಗೂ  ಗಗನ್ ಖಡೇರಿಯಾ ಸಂಗೀತ ನೀಡಿದ್ದಾರೆ

ವಿಜಯ ರಾಘವೇಂದ್ರ, ಗ್ರೀಷ್ಮ ಶ್ರೀಧರ್, ಧನರಾಜ್, ಗೋಪಿನಾಥ್ ಭಟ್, ರೂಪೇಶ್, ತೇಜಸ್ವಿನಿ, ಸಂದೇಶ್ ಜೈನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.