ಬೆಂಗಳೂರು, ಜ 09,ಸೂಪರ್ ಸ್ಟಾರ್ ರಜನಿಕಾಂತ್, ನಯನತಾರಾ ಅಭಿನಯದ ‘ದರ್ಬಾರ್’ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ ರಾಜ್ಯ ಹಲವು ಥಿಯೇಟರ್‍ಗಳಲ್ಲೂ ಚಿತ್ರ ತೆರೆಕಂಡಿದೆ. ಇದೇ ವೇಳೆ ರಾಜ್ಯದಲ್ಲಿ ‘ದರ್ಬಾರ್’ ಚಿತ್ರ ಪ್ರದರ್ಶನ ಮುಂದುವರಿಯಲು ಬಿಡುವುದಿಲ್ಲ ಎಂದು ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಹರೀಶ್ ಹೇಳಿದ್ದಾರೆ.“ತಮಿಳು, ತೆಲುಗು ಹಿಂದಿ ಭಾಷೆಗಳಲ್ಲಿರುವ ದರ್ಬಾರ್ ಚಿತ್ರವನ್ನು ಕನ್ನಡಕ್ಕೇಕೆ ಡಬ್ ಮಾಡಿಲ್ಲ? ಡಬ್ಬಿಂಗ್‍ಗೆ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದೆ, ಪರಭಾಷೆಯ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುತ್ತಿದೆ ಇದರು ಸರಿಯಲ್ಲ. ಯಾವುದೇ ಕಾರಣಕ್ಕೂ ‘ದರ್ಬಾರ್’ ಬಿಡುಗಡೆಗೆ ಅನುವು ನೀಡದಂತೆ ಕರ್ನಾಡಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದೆವು. ಆದರೆ ಅವರು ಇತ್ತ ಗಮನ ಹರಿಸಿಲ್ಲ” ಎಂದು ಕಿಡಿ ಕಾರಿದ್ದಾರೆ.ರಾಜ್ಯದ ತೆರಿಗೆ ಹಣದಿಂದ ಅನ್ಯ ಭಾಷಿಕರು ಬೆಳೆಯುತ್ತಿದ್ದು, ಕಮರ್ಷಿಯಲ್ ದೃಷ್ಟಿಯಿಂದ ಕನ್ನಡ ನಾಡನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹರೀಶ್ ಹೇಳಿದ್ದಾರೆ.