ಪಟ್ಟಣದ ಎಪಿಎಂಸಿಯ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಯಾರ ಮಡಿಲಿಗೆ?

ಲೋಕದರ್ಶನ ವರದಿ

ಶಿಗ್ಗಾವಿ 09: ಶಿಗ್ಗಾವಿ ಪಟ್ಟಣದ ಎಪಿಎಂಸಿಯ ಅದ್ಯಕ್ಷ, ಉಪಾದ್ಯಕ್ಷರ 20 ತಿಂಗಳ ಒಪ್ಪಂದ ಪ್ರಕಾರ ಅಧಿಕಾರಾವಧಿ ಮುಗಿದು ಇದೇ ಜೂನ್ ತಿಂಗಳ 18 ರ ಗುರುವಾರದಂದು ಚುನಾವಣೆಯ ದಿನಾಂಕ ನಿಗಧಿಯಾದ ಹಿನ್ನೆಲೆಯಲ್ಲಿ ಸದಸ್ಯರಿಗೆ ಚುನಾವಣೆ ನೋಟಿಸ್ ಜಾರಿ ಮಾಡಿರುವ ಸಕರ್ಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅಖಾಡಾ ಸಜ್ಜುಗೊಳಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಕಣ ರಂಗೇರುವಂತೆ ಮಾಡಿದೆ.

ಒಟ್ಟು 16 ಸದಸ್ಯ ಬಲ ಹೊಂದಿರುವ ಎಪಿಎಂಸಿಯಲ್ಲಿ ಹನ್ನೊಂದು ರೈತ ಪ್ರತಿನಿಧಿಗಳು, ಒಬ್ಬರು ವರ್ತಕರ ಪ್ರತಿನಿಧಿ, ಒಬ್ಬರು ಸಹಕಾರಿ ಸಂಘದ ಪ್ರತಿನಿಧಿ ಮತ್ತು ಮೂವರು ನಾಮನಿದರ್ೇಶಿತ ಸದಸ್ಯರನ್ನೋಳಗೊಂಡು ಒಟ್ಟು 16 ಸದಸ್ಯ ಬಲ ಹೊಂದಿದೆ.

  ಕಳೆದ ಬಾರಿ ಕಾಂಗ್ರೆಸ್ನ ಎರಡೇ ಸದಸ್ಯರಿದ್ದರೂ ಪ್ರೇಮಾ ಪಾಟೀಲ ಅವರು ಅದ್ಯಕ್ಷರಾಗಿ, ಹನುಮರೆಡ್ಡಿ ನಡುವಿನ ಮನಿಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದ್ದರು ಅಲ್ಲದೇ ಈ ಮೊದಲು ತಮ್ಮ 20 ತಿಂಗಳ ಅವಧಿಯಲ್ಲಿ ಅಭಿವೃದ್ದಿ ಪಥದತ್ತ ಎಪಿಎಂಸಿಯನ್ನು ತೆಗೆದುಕೊಂಡು ಹೋಗಿ ಮರಳಿ ಅದ್ಯಕ್ಷರಾಗುವ ಆಸೆಯಲ್ಲಿದ್ದ ಅನುಭವಿ ತಿಪ್ಪಣ್ಣ ಸಾತಣ್ಣವರ ಅವರು ಕೊನೆಯಗಳಿಗೆಯಲ್ಲಿ ಅದ್ಯಕ್ಷಗಿರಿ ಕೈತಪ್ಪಿತ್ತು, ಈ ಹಿನ್ನೆಲೆಯಲ್ಲಿ ಈ ಬಾರಿ ಆ ರೀತಿಯ ಯಾವುದೇ ಮನಸ್ಥಾಪಗಳಿಗೆ ಅವಕಾಶ ಮಾಡಿ ಕೊಡದೇ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸೂಚನೆಯಂತೆ ಅದ್ಯಕ್ಷ ಮತ್ತು ಉಪಾದ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಸದ್ಯ ಹಾಲಿ ಸದಸ್ಯರೇ ಹೇಳುತ್ತಿರುವುದು ಚುನಾವಣೆಯಿಲ್ಲದೇ ಅವಿರೋಧ ಆಯ್ಕೆ ಮಾತ್ರ ಖಚಿತ ಎಂಬುದು ಸ್ಪಷ್ಟವಾಗಿದೆ.

        ಸದ್ಯ ಸ್ಥಳೀಯ ಶಾಸಕ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ತೀಮರ್ಾನದಂತೆ ಅದ್ಯಕ್ಷರ ಆಯ್ಕೆ ನಡೆಯಲಿದೆ ಎನ್ನುತ್ತಿರುವ ಹಾಲಿ ಸದಸ್ಯರು ಕಳೆದ ಬಾರಿ ಬಿಜೆಪಿ ಬೆಂಬಲಿತ ಅದ್ಯಕ್ಷರಾಗುವ ಎಲ್ಲ ಸಂದರ್ಭವಿದ್ದರೂ ಯಾಕೆ ಅದ್ಯಕ್ಷಗಿರಿಯು ಕಾಂಗ್ರೇಸ್ ಅಭ್ಯಥರ್ಿಯ ಪರವಾಗುವಂತೆ ಮಾಡಿದರು ? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗದಾಗಿದೆ.

ಅಧ್ಯಕ್ಷಗಿರಿಯ ಆಕಾಂಕ್ಷಿಗಳು : ಕಳೆದ ಬಾರಿಯ ಆಕಾಂಕ್ಷಿ ಹೊಸೂರ ಕ್ಷೇತ್ರದ ಹರ್ಜಪ್ಪ ಲಮಾಣಿ, ಮುತ್ತಳ್ಳಿಯ ಮಲ್ಲನಗೌಡ್ರ ಪಾಟೀಲ, ಚಂದಾಪೂರ ಕ್ಷೇತ್ರದ ಸಂಗಣ್ಣ ಕೂಡಲ ಅವರ ಹೆಸರುಗಳು ಅದ್ಯಕ್ಷಗಿರಿಗೆ ಬಲವಾಗಿ ಕೇಳಿ ಬರುತ್ತಿವೆ, ಈ ಮಧ್ಯೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ತಿಪ್ಪಣ್ಣ ಸಾತಣ್ಣವರ ಪುನರಾಯ್ಕೆ ಬಯಸಿ ತೆರೆ ಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. 

       ಒಟ್ಟಾರೆ ಎಲ್ಲ ಸದಸ್ಯರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತೆರೆ ಮರೆಯಲ್ಲಿ ಕಸರತ್ತು ನಡೆಸಿರುವದಂತೂ ಸತ್ಯ, ಆದರೆ ಇಲ್ಲಿ ಎಲ್ಲದಕ್ಕೂ ಆಯ್ಕೆ ದಿನಾಂಕಕ್ಕೂ ಮುನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಶಿಗ್ಗಾವಿ ಭೇಟಿ ಮಾತ್ರ ಮಹತ್ವ ಪಡೆದಿದ್ದು ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅಂತಿಮ ತೆರೆ ಬೀಳಲಿದೆ ಎನ್ನಲಾಗುತ್ತಿದೆ.