ದೇಶ ದ್ರೋಹಿ ಹೇಳಿಕೆ ಯಾರೇ ನೀಡಲಿ ಗಡಿಪಾರು ಮಾಡಲಿ: ಡಾ. ಪ್ರಣವಾನಂದರಾಮ ಶ್ರೀ

ಲೋಕದರ್ಶನವರದಿ

ರಾಣೇಬೆನ್ನೂರು22: ಬೆಂಗಳೂರಿನ ಪ್ರೀಡಂ ಪಾಕರ್ಿನಲ್ಲಿ ಸಿಎಎ ವಿರೋಧಿಸಿ ನಡೆದ ಬಹಿರಂಗ ಸಭೆಯಲ್ಲಿ ದೇಶವಿರೋಧಿ ಘೋಷಣೆ ಕೂಗಿರುವ ದೇಶದ್ರೋಹಿ ಅಮೂಲ್ಯ ಲಿಯೋನ್ ಎಂಬುವವಳನ್ನು ಕೂಡಲೇ ಗಡಿಪಾರು ಮಾಡಬೇಕು. ಇಂತಹ ದೇಶದ್ರೋಹಿಗಳು ನಮ್ಮ ಪವಿತ್ರವಾದ ಭರತಭೂಮಿಯ ಮೇಲಿರಲು ಅವಕಾಶ ಕಲ್ಪಿಸಬಾರದು ಕೂಡಲೇ ಇವಳಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ತಾಲೂಕಿನ ಆರೇಮಲ್ಲಾಪುರದ ಶರಣಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಡಾ.ಪ್ರಣವಾನಂದರಾಮ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

  ಶನಿವಾರದಂದು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅಮೂಲ್ಯ ಎಂಬುವಳು ಕೇವಲ ತನ್ನ ಪ್ರಚಾರಕ್ಕಾಗಿ ಭಾರತಮಾತೆಗೆ ದ್ರೋಹ ಬಗೆದರೆ ಇವಳನ್ನು ಸುಮ್ಮನೆ ಬಿಡಬಾರದು, ಇವಳಿಗೆ ಯಾರೂ ನೆರವಾಗಬಾರದು, ನಮ್ಮ ನೆಲದಲ್ಲಿ ಹುಟ್ಟಿ, ನಮ್ಮ ತಾಯಿಯ ಅನ್ನವನ್ನು ತಿಂದು ನಮ್ಮ ತಾಯಿಗೆ ದ್ರೋಹ ಬಗೆಯುವ ಇಂತಹ ನೀಚರನ್ನು ನಮ್ಮ ದೇಶದಲ್ಲಿ ವಾಸಿಸಲು ಅವಕಾಶ ನೀಡಬಾರದು ಎಂದರು.

  ಯಾವುದೇ ಪಕ್ಷದ ನಾಯಕರುಗಳಾಗಲಿ, ದೇಶದ ಪ್ರಧಾನಿ ಎಂದರೆ ಅವರಿಗೆ ಗೌರವ ಕೊಡಲೇಬೇಕು. ಅದನ್ನು ಬಿಟ್ಟು ತಮ್ಮ ವರ್ಚಸ್ಸಿಗೋಸ್ಕರ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ನಮ್ಮದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ಅಮೂಲ್ಯ ಎಂಬ ಅವಿವೇಕಿ ಹಗುರವಾಗಿ ಮಾತನಾಡುತ್ತಲೇ ಬಂದಿದ್ದಾಳೆ. ಇದೀಗ ಪಾಕಿಸ್ಥಾನ ಜಿಂದಾಬಾದ್ ಎಂದು ಹೇಳುವ ಇವಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.

  ಅಮೂಲ್ಯ ಅವಳ ತಂದೆ ಉಗ್ರರ ಜೊತೆ ಸಂಬಂಧವಿಟ್ಟಿರುವ ಅನುಮಾನ ಮೂಡುತ್ತಿದೆ. ಅವಳ ತಂದೆ ನಾಟಕವಾಡುತ್ತಿದ್ದಾರೆ. ಅವಳ ತಂದೆ ಹಾಗೂ ತಾಯಿಯನ್ನೂ ಸಹ ಜೈಲಿಗೆ ಅಟ್ಟಬೇಕು. ಅಮೂಲ್ಯ ಮಾತನಾಡಿದ ಸಭೆಯಲ್ಲಿ ಆಯೋಜಕರನ್ನು ಮತ್ತು ಅವಳನ್ನು ಕರೆಸಿ ಮಾತನಾಡಲು ಮೈಕ್ ಕೊಟ್ಟವರನ್ನೂ ಸಹ ತನಿಖೆಗೊಳಪಡಿಸಿ ಅವರುಗಳಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದರು.

  ಅಮೂಲ್ಯ ಅವಳು ಹೆಣ್ಣಲ್ಲ ರಾಕ್ಷಸಿ. ಅಂತಹ ರಾಕ್ಷಸಿ ಜೊತೆಗೆ ಇನ್ನೋಂದು ಆರುದ್ರ ಎಂಬ ರಾಕ್ಷಸಿ ಹುಟ್ಟಿಕೊಂಡು ದೇಶದ್ರೋಹಿಗಳಾಗಿ ದೇಶವಿರೋಧಿ ಘೋಷಣೆ ಕೂಗುವ ಇಂತಹ ರಾಕ್ಷಸಿಯರಿಗೆ ಭಾರತದ ನೆಲದಲ್ಲಿ ನೆಲೆಯೂರಲು ಬಿಡಬಾರದು. ಈ ಬಗ್ಗೆ ಸರಕಾರಕ್ಕೆ ನಾನೂ ಸಹ ಮನವಿಯನ್ನು ಸಲ್ಲಿಸಿ ಅವರುಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದೇನೆ ಎಂದರು.