ಪೌರತ್ವ ಕಾಯ್ದೆಯ ಕುರಿತು ಬಿಜೆಪಿಯಿಂದ ಶ್ವೇತಪತ್ರ ವಿತರಣೆ

ನವದೆಹಲಿ, ಡಿ 17 :       ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಯ್ದೆ ಕುರಿತು ವಿವರಿಸುವ ಶ್ವೇತಪತ್ರ ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.   

ಈಶಾನ್ಯ ರಾಜ್ಯಗಳಲ್ಲಿ ಡಿಸೆಂಬರ್ ಅಂತ್ಯದವರೆಗೆ ನಂತರ ಜನವರಿ ಮೊದಲ ವಾರದವರೆಗೂ ಬಿಜೆಪಿ ಈ ಕಾರ್ಯ ಮುಮದುವರಿಸಲಿದೆ. ಶ್ವೇತಪತ್ರದಲ್ಲಿ ಪ್ರಮುಖವಾಗಿ ಅಸ್ಸಾಂ ಮತ್ತಿತರರ ಈಶಾನ್ಯ ರಾಜ್ಯಗಳಿಗೆ ಆದ್ಯತೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಕಾಯ್ದೆಯಿಂದ ವಿನಾಯ್ತಿ ನೀಡಲಾಗಿದೆ.   

ಸಂಸತ್ತಿನ ಎರಡೂ ಸದನಗಳಲ್ಲಿ ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡುವ ಹೊಸ ಪೌರತ್ವ ಕಾಯ್ದೆಗೆ ಅನುಮೋದನೆ ದೊರೆತಿತ್ತು.   

ಶ್ವೇತಪತ್ರದಲ್ಲಿ ಕಾಂಗ್ರೆಸ್ ನ ದ್ವಿಮುಕ ಧೋರಣೆಯನ್ನು ಉಲ್ಲೇಖಿಸಿದ್ದು, ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನ ಡಾ. ಮನಮೋಹನ್ ಸಿಂಗ್ ಕಾಯ್ದೆಯನ್ನು ಬೆಂಬಲಿಸಿದ್ದರು ಎಂದು ಆರೋಪಿಸಿದರು.   

1950ರಲ್ಲಿ ನೆಹರೂ- ಲಿಯಾಖತ್ ಒಪ್ಪಂದಕ್ಕೆ ಸಹಿ ಹಾಕಿತ್ತಾದರೂ, ಅದು ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ದೊರೆಯಲಿಲ್ಲ ಎಂದು ಶ್ವೇತಪತ್ರದಲ್ಲಿ ಆರೋಪಿಸಲಾಗಿದೆ.   

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಯ ವಿರುದ್ಧ ಪಟ್ಟಬದ್ಧ ಹಿತಾಸಕ್ತಿಗಳು ದೇಶವನ್ನು ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದರು.