240 ಸೈಟ್ ಖರೀದಾರರಿಗೆ ಉತಾರ ಪೂರೈಸದೇ ಇರುವುದು ಯಾವ ನ್ಯಾಯ ಅಧಿಕಾರಿಗಳಿಗೆ ತರಾಟೆ : ಶಾಸಕ ಪಠಾಣ
ಶಿಗ್ಗಾವಿ 17: ಪಟ್ಟಣದ ಗೌಸ್ ಮೊದೀನ್ ತಹಶೀಲ್ದಾರ ಲೇಓಟ್ ಖರೀದಿದಾರರಿಗೆ ಬಿ ಖಾತೆ ನೀಡಿದರೆ ಅನ್ಯಾಯ ಮಾಡಿದಂತಾಗುತ್ತದೆ. ಸರ್ಕಾರಕ್ಕೆ ಪಾವತಿಸಬೇಕಾದ ಹಣಭರಿಸಿ ಪ್ಲಾಟ್ ಖರೀದಿ ಮಾಡಿದವರಿಗೆ ಇ-ಸ್ವತ್ತು ಉತಾರ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು. ತಾಲೂಕಿನ ಬಂಕಾಪೂರ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಪ್ಲಾಟ್ ಮಾಲೀಕರು ಉದ್ಯಾನವನಕ್ಕೆ ಬಿಡಲಾದ ಸೈಟ್‌ನ್ನು ಮಾರಾಟ ಮಾಡಿದ್ದಾರೆ. ಅದರ ಬದಲಾಗಿ ಬೇರೆ ಸೈಟು ಉದ್ಯಾವನಕ್ಕೆ ನೀಡಲಾಗಿದೆ. ಸಮಸ್ಯೆ ಇರುವುದು ಎರಡು ಸೈಟ್ ಗಳ ಮಧ್ಯೆ. ಆ ಕಾರಣ ಇಟ್ಟುಕೊಂಡು 240 ಸೈಟ್ ಖರೀದಾರರಿಗೆ ಉತಾರ ಪೂರೈಸದೇ ಇರುವುದು ಯಾವ ನ್ಯಾಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ತಹಶೀಲ್ದಾರ ಪ್ಲಾಟ್ ಖರೀದಿದಾರರಿಗೆ ಕಾನೂನಾತ್ಮಕವಾಗಿ ತಾವೇ ಮುಂದೆ ನಿಂತು ಉತಾರ ಪೂರೈಸುವ ಭರವಸೆ ನೀಡಿದರು. ಬಂಕಾಪುರ, ಸವಣೂರ, ಶಿಗ್ಗಾವಿ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲು, ತವರಮೇಳ್ಳಿಹಳ್ಳಿ ಮೋತಿತಲಾಬ್, ನಾಗನೂರ ಕೆರೆ ಜಾಕ್‌ವೆಲ್ ಗಳ ಅಭಿವೃದ್ಧಿಗೆ 3 ನೂರು ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. 30 ಕೋಟಿ ರೂ. ವೆಚ್ಚದಲ್ಲಿ ಮಲ್ಲಪ್ಪನ ಕೆರೆ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಸುಂಕದಕೇರಿ ದುರ್ಗಾದೇವಿ ಹೊಂಡವನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಪಶು ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ, ಬಡವರಿಗೆ ‘ರಿಯಾಯ್ತಿ ದರದಲ್ಲಿ ಊಟ, ಉಪಹಾರ ಸೇವೆ ಕಲ್ಪಿಸಲಾಗುವುದು. ಬರುವ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕ್ವಾಟರ್ಸ್ ನಿರ್ಮಾಣ, ನಾಡಕಚೇರಿ ಅಭಿವೃದ್ಧಿ, ಕ್ರೀಡಾಂಗಣ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ದಿಗಾಗಿ ಯಾವುದೇ ಟೆಂಡರ್‌ಗಳಿಗೆ ತಡೆ ನೀಡಬಾರದು. ಟೆಂಡರ್‌ದಾರರಿಂದ ಕ್ರಿಯಾ ಯೋಜನೆ ಪ್ರಕಾರ ಕೆಲಸ ಪಡೆಯುವಂತೆ ಸಲಹೆ ನೀಡಿದರು.ಸಭೆಯಲ್ಲಿ 2025-26 ಸಾಲಿನ ಆಯವ್ಯಯ ಅಂದಾಜು ಪತ್ರಿಕೆಗೆ ಅನುಮೊದನೆ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆ, ಎಸ್. ಎಫ್.ಸಿ. ವಿಶೇಷ ಅನುದಾನದ ಬಳಕೆ, ಪಟ್ಟಣದಲ್ಲಿ ಸಿಪಿಎಚ್‌ಸಿ-ಯುಎಚ್ ಕಾರ್ಯಕ್ರಮದಡಿ ಆಯುಷ್ಮಾನ ಆರೋಗ್ಯ ಮಂದಿರ ನಿರ್ಮಾಣಕ್ಕೆ ಬೇಕಾದ ನಿವೇಶನ ಮಂಜೂರು ಮಾಡುವ ಬಗ್ಗೆ, ದಿ. ಮಾಡರ್ನ್ ಹೈಸ್ಕೂಲ್ ನಿವೇಶನ, ಅಂಗನವಾಡಿ, ವಾಲ್ಮೀಕಿ ಹಾಗೂ ಭೋವಿ ಸಮಾಜದ ಸಮುದಾಯ ಭವನಕ್ಕೆ ನಿವೇಶನ ನೀಡುವ ಕುರಿತು ಚರ್ಚಿಸಿ ಸದಸ್ಯರಿಂದ ಅನುಮೊದನೆ ಪಡೆಯಲಾಯಿತು.ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಮುಖ್ಯಾಧಿಕಾರಿ, ಶಿವಾನಂದ ಅಜ್ಜಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬಖಾನ್ ಪಠಾಣ, ಸಿಪಿಐ ಅನಿಲ್ ಕುಮಾರ ರಾಠೋಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.