ಬೆಂಗಳೂರು, ಫೆ 25, ವಿಶಿಷ್ಟ ಕಂಠಸಿರಿಯ, ‘ನಿನ್ನಾ ಪೂಜೆಗೆ ಬಂದೆ ಮಾದೇಶ್ವರ’ ಹಾಡಿನಿಂದ ಜನಪ್ರಿಯರಾಗಿರುವ ಖ್ಯಾತ ಗಾಯಕ ರಘು ದೀಕ್ಷಿತ್ ಇತ್ತೀಚಿಗೆ ದನಿಯಾಗಿರುವ ಕೆಲ ಗೀತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ದೀಕ್ಷಿತ್ ಕೆಲವೊಮ್ಮೆ ಒತ್ತಡಕ್ಕೆ ಮಣಿದು ಕೆಟ್ಟ ಹಾಡುಗಳನ್ನೂ ಹಾಡಬೇಕಾಗುತ್ತದೆ , ಸಾಹಿತ್ಯ ಇಷ್ಟವಾಗುವುದಿಲ್ಲ ಎಂದರುಹಾಗಾದರೆ ನೀವು ಹಾಡಿದ ಕೆಟ್ಟ ಹಾಡು ಯಾವುದು ಎಂಬ ಪ್ರಶ್ನೆಗೆ ಎ ಪಿ ಅರ್ಜುನ್ ಸಾಹಿತ್ಯದ‘ಯು ಆರ್ ಮೈ ಪೊಲೀಸ್ ಬೇಬಿ” ಎಂಬ ಉತ್ತರ ಹೊರಬಂತು ಅಂದಹಾಗೆ ರುಸ್ತುಂ ಚಿತ್ರದ ಈ ಗೀತೆಯಲ್ಲಿ ಶಿವರಾಜ್ ಕುಮಾರ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ ಹಾಡಿಗೆ ಅನೂಪ್ ಸಿಳೀನ್ ಸಂಗೀತವಿದೆ ಆದರೆ ರಘು ದೀಕ್ಷಿತ್ ಗೆ ಬೇಸರ ತಂದಿದ್ದು ಸಾಹಿತ್ಯ “ಇಂತಹ ಹಾಡನ್ನೇಕೆ ಹಾಡಿದೆ ಎಂದು ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಂಡೆ” ಎಂದರು. ಕೆಲವೊಂದು ಸಂದರ್ಭದಲ್ಲಿ ಇಷ್ಟವಿಲ್ಲದ ಹಾಡುಗಳಿಗೂ ದನಿಯಾಗಬೇಕಾಗುತ್ತದೆ, ಇದಕ್ಕೆ ಕಾರಣ ಒತ್ತಡ ಎಂಬುದು ರಘು ದೀಕ್ಷಿತ್ ಅಂಬೋಣ.