ಎಲ್ಲರನ್ನು ಪ್ರೀತಿಯಿಂದ ಸೌಹಾರ್ದತೆಯಿಂದ ಕಂಡಾಗ ಭಗವಂತ ಕಾಣುತ್ತಾರೆ: ಬಬಲೇಶ್ವರ

When you see everyone with love and harmony, you see God: Babaleshwar

ವಿಜಯಪುರ 18: ಎಲ್ಲರನ್ನು ಪ್ರೀತಿಯಿಂದ ಸೌಹಾರ್ದತೆಯಿಂದ ಕಂಡಾಗ ನಮಗೆ ಭಗವಂತ ಕಾಣುತ್ತಾರೆ. ಅಲ್ಲಾ ಬೇರೆಯಲ್ಲ ಪರಮಾತ್ಮ ಬೇರೆಯಲ್ಲ ಎಲ್ಲರೂ ಒಂದೇ.. ನಾವೆಲ್ಲರೂ ಸೌಹಾರ್ದತೆಯ ಬದುಕಿ ಬಾಳಬೇಕಾಗಿದೆ. ನಮ್ಮ ನಾಡು ಸೌಹಾರ್ದತೆಯ ಬೀಡಾಗಿದೆ. ಇಂತಹ ಸಂಸ್ಕೃತಿಯನ್ನು ಸೂಫಿ ಸಂತರು ಬಸವಾದಿ ಶಿವಶರಣ ನೀಡಿದ್ದಾರೆ ಎಂದು ಬಾಲ ವಿಕಾಸ ಅಕಾಡೆಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. 

ನಗರದಲ್ಲಿ ಸುವಿಧಾ ಸಾಮಾಜಿಕ ಸೇವಾ ಸಂಸ್ಥೆವತಿಯಿಂದ ಹಮ್ಮಿಕೊಂಡ ಸರ್ವಧರ್ಮ ಇಪ್ತಿಯಾರ ಕೂಟದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. 

ಸೂಫಿ ಸಂತರ ನಾಡಿನಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಾಗಿ ಸೌಹಾರ್ದಯುತವಾಗಿ ಬಾಳುತ್ತಾ ಬಂದಿದ್ದೇವೆ. ಸಮಾಜದಲ್ಲಿ ಮಾದರಿಯಾಗಿ ಒಗ್ಗೂಡಿ ಬದುಕಬೇಕಾಗಿದೆ. ರಂಜಾನ ಇದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾಗಿದೆ. ಈ ರಂಜಾನ ದಿನಗಳಲ್ಲಿ ಉಪವಾಸ ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದರಂತೆ ಈ ಪವಿತ್ರ ಮಾಸದಲ್ಲಿ ಮಕ್ಕಳಿಗೆ ಧರ್ಮ ಗ್ರಂಥ ಓದಲು, ಪುಸ್ತಕ ಓದುವ ಸಂಸ್ಕೃತಿಯತ್ತ ಬೆಳೆಸಬೇಕಾಗಿದೆ.  

ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ವೀರುಪಾಕ್ಷ ದೇವರು ಯರನಾಳ,  ಮನಗೂಳಿಯ ದರ್ಗಾದ ಪೀಠಾಧಿಪತಿಗಳಾದ ಡಾ. ಸೈಯ್ಯದ ಫೈರಜ್ ಹುಸೇನ ಸಾಹೇಬ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಎಂ.ಸಿ.ಮುಲ್ಲಾ, ಅಹಿಂದ ಮುಖಂಡ ಎಸ್‌.ಎಂ.ಪಾಟೀಲ ಗಣಿಹಾರ, ಕಾಂಗ್ರೆಸ್ ಮುಖಂಡ ಮಹ್ಮದ ರಫೀಕ ಟಪಾಲ, ಗಂಗಾಧರ ಸಂಬಣ್ಣಿ, ಅಬ್ದುಲ ರಜಾಕ ಹೊರ್ತಿ, ಆಝಾದ ಪಟೇಲ, ಶಂಕರಗೌಡ ಹಿರೇಗೌಡರ, ರಾಜು ಕಂಭಾಗಿ, ನಾಗರಾಜ ಲಂಬು, ಸಿ.ಎಸ್‌.ನಿಂಬಾಳ, ಮೋಯಿನ ಕಲಾದಗಿ, ಪೀರಪಟೇಲ ಪಟೇಲ, ಶಕೀಲ ಬಾಗಮಾರೆ, ವಿಜಯಕುಮಾರ ಘಾಟಗೆ, ಮಹಾದೇವ ರಾವಜಿ, ಮದಸ್ಸರ ಖತೀಬ, ಶಬ್ಬೀರ ಪಿತಲಿ, ರೈಸ ಇಂಡಿ, ಅಶ್ಫಾಕ ಮನಗೂಳಿ, ಶಖೀಲ ಗಢೇದ, ಬಂದೇನವಾಜ ಮುಲ್ಲಾ, ಸೋಮಶೇಖರ ಕುರ್ಲೆ ಸೇರಿದಂತೆ ಮುಂತಾವರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಫಯಾಜ ಕಲಾದಗಿ ಸ್ವಾಗತಿಸಿದರು. ದಸ್ತಗೀರ ಸಾಲೋಟಗಿ ನಿರೂಪಿಸಿ, ವಂದಿಸಿದರು. 

ಈ ಸಂದರ್ಭದಲ್ಲಿ ಸುವಿಧಾ ಸಂಸ್ಥೆಯ ಸದಸ್ಯರಾದ ಎಚ್‌.ಎಸ್‌.ಕಬಾಡೆ, ಮೊಹ್ಮದ ನಶೀಮ ರೋಜಿಂದಾರ, ಮೊಹ್ಮದ ಸಾಧಿಕ ಜಾನ್ವೇಕರ, ಐ.ಸಿ.ಪಠಾಣ, ಶಫೀಕ ಜಾಗೀರದಾರ, ದಾದಾಪೀರ ಮುಜಾವರ, ರಿಯಾಜ ಡೋಂಗರಗಾಂವ, ಬಸವರಾಜ ಬಿ.ಕೆ, ಗೌಸ ಜಾಗೀರದಾರ, ಇಲಿಯಾಸ ಸಿದ್ದಿಕಿ, ಪಿದಾ ಹುಸೇನ ಕಲಾದಗಿ, ಅಖ್ತರ ಮುತುವಲ್ಲಿ, ಲತಿಫ ಕಲಾದಗಿ, ಹಸನ ಕಲಾದಗಿ, ಲಿಯಾಕತ ಕಲಾದಗಿ, ಅಬೂಕರ ಅಂಬರಖಾನೆ, ಅತೀಕ ಹತ್ತರಕಿಹಾಳ, ಜಮೀರ ಹುದ್ದಾರ, ಫೈರೋಜಖಾನ ಜಹಾಂಗೀರ ಹಿಪ್ಪರಗಿ, ಎಸ್‌.ಎ.ಇಂಡಿಕರ, ರಜಾಕ ಕಾಖಂಡಕಿ, ಜಾವೀದ ಕೋಟ್ಯಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.