ವಿಶ್ವ ವಿಕಲಚೇತನರ ದಿನಾಚರಣೆ ವೀಲ್ ಚೇರ್ ವಿತರಣಾ ಕಾರ್ಯಕ್ರಮ

Wheel Chair Distribution Program on World Day of Persons with Disabilities

 ಬ್ಯಾಡಗಿ  04: ಪಟ್ಟಣದ ಲಯನ್ಸ್‌ ಶಾಲೆಯ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ಯಾಡಗಿ ಇವರ ಸಹಭಾಗಿತ್ವದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ನಡೆಯಿತು.  ಕವಿತಾ ಸೊಪ್ಪಿನ ಮಠ ಉದ್ಘಾಟನೆ ನಡೆಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸುರೇಶಬಾಬು ಕೋಟಿ ಅಧ್ಯಕ್ಷತೆ ವಹಿಸಿದ್ದರು. ಎಂ ಎಫ್ ಹಾುಲ್ಲ್ಯಲ ಪ್ರಧಾನ ಮಂತ್ರಿ ಪೋಷಣ ಅಭಿಯಾನ ಪ್ರಭಾರಿ ನಿರ್ದೇಶಕರು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿಗಳು, ಮತ್ತು ಅಸಿಸ್ಟೆಂಟ್ ಗವರ್ನರ  ಮಂಜುನಾಥ ಉಪ್ಪಾರ, ರೋಟರಿ ಅಧ್ಯಕ್ಷ ಎಸ್ ಎಂ ಬೂದಿಹಾಳಮಠ, ಮಾಲತೇಶ ಅರಳಿಮಟ್ಟಿ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ  ಬಸವರಾಜು ಕೋಟೆ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ರೋಟರಿ ಕ್ಲಬ್ಬಿನವರು ನಮ್ಮ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿಗಳ ಮತ್ತು ಶಿಕ್ಷಕರ ಜೊತೆ ಸದಾ ಸಂಪರ್ಕದಲ್ಲಿದ್ದು ಸತತವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಪ್ರತಿ ವರ್ಷವೂ ಅಂಗವಿಕಲ ಮಕ್ಕಳಿಗೆ ವ್ಹೀಲ್ ಚೇರ್ ನೀಡುತ್ತಾ ಬಂದಿದ್ದು ಶೈಕ್ಷಣಿಕವಾಗಿ ಅನೇಕ ಸ್ಪರ್ಧೆ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕಲೆ ಪ್ರೋತ್ಸಾಹ ನೀಡಿದ್ದಾರ.ೆ ಇವರ ಕಾರ್ಯಕ್ರಮಗಳು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲ ರಂಗಗಳಲ್ಲಿ ಹರಡಿವೆ ದೇವರು ರೋಟರಿ ಕ್ಲಬ್ಬಿನ ಎಲ್ಲ ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆ ನಡೆಸಲು ಶಕ್ತಿ ತುಂಬಲಿ ಎಂದು ಹಾರೈಸಿದರು. 

ನಂತರ ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ ಮಂಜುನಾಥ ಉಪ್ಪಾರ ರೋಟರಿ ಕ್ಲಬ್ ವತಿಯಿಂದ ಸುಮಾರು 46800 ಮೌಲ್ಯದ  ವೀಲ್ ಚೇರು, 65 ವಿಶೇಷಚೆತನ ಮಕ್ಕಳಿಗೆ ಹೊಸ ಊಟದ ತಟ್ಟೆಗಳನ್ನು ವಿತರಿಸಿದರು. ಜೊತೆಗೆ ಇನ್ನರ್ವಿಲ್ ಕ್ಲಬ್ ವತಿಯಿಂದ ಒಂದು ವೀಲ್ ಚೇರ್, ಗಿಫ್ಟ್‌ ಬಾಕ್ಸ್‌ ಮತ್ತು ಪುರಸಭೆ ಅಧ್ಯಕ್ಷರಾದ ಶ್ರೀ ಬಾಲಚಂದ್ರಗೌಡ್ರ ಪಾಟೀಲ ಇವರು ನೀಡಿದ ಟಿಫನ್ ಬಾಕ್ಸ್‌  ವಿತರಿಸಲಾಯಿತು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯ ಸಂಪನ್ಮೂಲ ಕೇಂದ್ರ ಅಧಿಕಾರಿಗಳ ವತಿಯಿಂದ ರೋಟರಿ ಅಧ್ಯಕ್ಷ ಎಸ್‌ಎಂ ಬೂದಿಹಾಳಮಠ ಮತ್ತು ಇನ್ನರ್ವಿಲ್ ಅಧ್ಯಕ್ಷೆ  ಕವಿತಾ ಸೊಪ್ಪಿನಮಠ ಇವರನ್ನು ಸನ್ಮಾನಿಸಲಾಯಿತು. ಸಂಧ್ಯಾರಾಣಿ ದೇಶಪಾಂಡೆ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿದರು,  ಸುಭಾಷ್ ಬಿ ನಿರೂಪಿಸಿದರು,  ಶಂಭು ಹಾವೇರಿ ವಂದಿಸಿದರು.

ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಅಧ್ಯಕ್ಷ ಸಿದ್ದಲಿಂಗಯ್ಯ ಬುದಿಹಾಳಮಠ, ಮಾಲತೇಶ ಅರಳಿಮಟ್ಟಿ, ವಿಶ್ವನಾಥ ಅಂಕಲಕೋಟಿ, ಕಿರಣ ಮಾಳೇನಹಳ್ಳಿ, ಸತೀಶ ಅಗಡಿ, ಶಿವರಾಜ ಚೂರಿ, ಪವಾಡಪ್ಪ ಆಚನುರ, ಪರಶುರಾಮ ಮೇಲಗಿರಿ, ಸುರೇಶ ಗೌಡರ, ಇನ್ನರ್ ವ್ಹೀಲ್  ಸದಸ್ಯರಾದ ಪುಷ್ಪ ಇಂಡಿಮಠ, ಲಕ್ಷ್ಮಿ ಉಪ್ಪಾರ, ನಿರ್ಮಲಾ, ವಿಜಯಲಕ್ಷ್ಮಿ, ಪ್ರತಿಭಾ ಮೇಲಗಿರಿ, ಜಯಾ, ಮಹೇಶ್ವರಿ ಪಸಾರದ, ಸಂಧ್ಯಾರಾಣಿ ದೇಶಪಾಂಡೆ, ಎಲ್ಲ ಬೀ ಆರ್ ಪಿ, ಸಿ ಆರ್ ಪಿ ಶಿಕ್ಷಕರು ಉಪಸ್ಥಿತರಿದ್ದರು