ಹೊಸವರ್ಷದಿಂದ ಎಲ್ಲಾ ವಿಂಡೋಸ್ ಪೋನ್ ಗಳಲ್ಲಿ ವಾಟ್ಸಾಪ್ ಸ್ಥಗಿತ

ನವದೆಹಲಿ, ಡಿ 11 :       ಬರಲಿರುವ  ಹೊಸ ವರ್ಷದಲ್ಲಿ ಹಳೆಯ ಆವೃತ್ತಿಯ ಫೋನ್ಗಳಲ್ಲಿ ವಾಟ್ಸಾಪ್ ಸೇವೆ   ಸ್ಥಗಿತ ಗೊಳಿಸುವುದಾಗಿ  ವಾಟ್ಸಾಪ್  ಸಂಸ್ಥೆ ಪ್ರಕಟಿಸಿದೆ. ಆಧುನಿಕ ಆವೃತ್ತಿಯನ್ನು ನವೀಕರಿಸಿದವರಿಗೆ ಮಾತ್ರ ವಾಟ್ಸಾಪ್ ಲಭ್ಯವಾಗಲಿದೆ. ವಾಟ್ಸಾಪ್  ಹೊಸ ಆವೃತ್ತಿ ಹೊರಬಂದಾಗಲೆಲ್ಲಾ   ಈ ರೀತಿ ನಡೆಯುತ್ತಿದೆ.    ಪ್ರಸ್ತುತ ಆಂಡ್ರಾಯ್ಡ್ ಫೋನ್  ಬಳಸುವುವರಾದರೆ,  2.3.7 ಆಪರೇಟಿಂಗ್ ಸಿಸ್ಟಮ್ಅನ್ನು, ಐಫೋನ್ ಬಳಸುವವರು   ಐಒಎಸ್ 7 ಆಪರೇಟಿಂಗ್ ಸಿಸ್ಟಮ್ ಅನ್ನು ನವೀಕರಿಸಿಕೊಳ್ಳಬೇಕು.  

ಹಳೆಯ ಆವೃತ್ತಿಗಳ ಫೋನ್ಗಳು ಈ ಡಿಸೆಂಬರ್ 31 ಕ್ಕೆ ಮುಕ್ತಾಯಗೊಳ್ಳುತ್ತವೆ. ಬಹುತೇಕ ಎಲ್ಲಾ ವಿಂಡೋಸ್ ಫೋನ್ಗಳಲ್ಲಿ ವಾಟ್ಸಾಪ್ ಅನ್ನು  ಸ್ಥಗಿತಗೊಳಿಸಲಾಗುತ್ತಿದೆ  ಎಂದು ಸಂಸ್ಥೆ ಹೇಳಿದೆ.  ವಿಂಡೋಸ್ 10 ಮೊಬೈಲ್ ಫೋನ್ ಗಳು   ಓಎಸ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದ್ದರೆ  ವಾಟ್ಸಾಪ್ ಸೇವೆಗಳು  ಸ್ಥಗಿತ ಗೊಳ್ಳಲಿವೆ.  ಆದಾಗ್ಯೂ, ಇವುಗಳನ್ನು ಜುಲೈ 1, 2019 ರಿಂದ  ಸ್ಥಗಿತಗೊಳಿಸಲಾಗುವುದು ಎಂದು ವಾಟ್ಸಾಪ್  ಸಂಸ್ಥೆ ಹೇಳಿದೆ.