ಲೋಕದರ್ಶನವರದಿ
ರಾಣೇಬೆನ್ನೂರು22: ಸಮಾಜವನ್ನು ಸರಿದಾರಿಗೆ ತರುವ ಹಾಗೂ ಸಮಾಜ ಮೌಢ್ಯವನ್ನು ಹೋಗಲಾಡಿಸುವ ಕಾರ್ಯ ಮಾಡುವ ಮೂಲಕ ಚಿತ್ರ ರಂಗ ತನ್ನದೇ ಆದ ಸೇವೆ ಸಲ್ಲಿಸುತ್ತದೆ ಎಂದು ಚಿತ್ರ ನಟಿ ತಾರಾ ಹೇಳಿದರು.
ನಗರದ ರಾಜರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ನವದೆಹಲಿಯ ಅಖಿಲ ಭಾರತೀಯ ಪ್ರಜ್ಞಾ ಪ್ರವಾಹ, ಪರಿವರ್ತನ ಸಂಘದ ವತಿಯಿಂದ ಕನರ್ಾಟಕ ವೈಭವ ವೈಚಾರಿಕ ಹಬ್ಬ ಕಾರ್ಯಕ್ರಮದಲ್ಲಿ ನಡೆದ ಚಿತ್ರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಚಿತ್ರರಂಗ ಮಾಧ್ಯಮವಾಗಿ ಬೆಳೆದರೆ ಉತ್ತಮ, ಉದ್ದಿಮೆಯಾಗಿ ಬೆಳೆದರೆ ಸಮಾಜ ಸುಧಾರಣೆ ಕಷ್ಟ ಸಾಧ್ಯ ಎಂದರು.
ಈ ಹಿಂದಿನ ಚಿತ್ರ ರಂಗಕ್ಕೂ ಮತ್ತು ಇಂದಿನ ಚಿತ್ರ ರಂಗ ಸಾಕಷ್ಟು ಬದಲಾವಣೆಯಾಗಿದೆ, ಅಂದು ಕುಟುಂಬದಲ್ಲಿ ಸಾಮರಸ್ಯೆ ಹೇಗಿರಬೇಕು ಎಂಬ ಅಂಶಗಳನ್ನು ಉತ್ತಮವಾಗಿ ಬಿಂಬಿಸಲಾಗುತ್ತಿತ್ತು, ಪ್ರಸ್ತುತ ಯುವಕರ ಮನೋಸ್ಥಿತಿಗೆ ಅನುಗುಣವಾಗಿ ಚಿತ್ರಗಳು ಬರಲಾರಂಭಿಸಿವೆ, ಹಾಗಾಗಿ ಉದ್ದಿಮೆಯಾಗಿ ಪರಿರ್ತನೆಯಾಗುತ್ತಿರುವುದು ನೋಡುಗರ ಮೇಲಿದೆ ಎಂದರು.
ಗೋಷ್ಠಿಯಲ್ಲಿ ಚಿತ್ರಛಾಯಾಗ್ರಾಹಕ ಅಶೋಕ ಕಾಶಪ್ಪನವರ, ಕನರ್ಾಟಕ ಚಲನಚಿತ್ತ ಅಕಾಡಮಿ ಅಧ್ಯಕ್ಷ ಸುನೀಲ ಪುರಾಣಿಕ ಇದ್ದರು. ವಿವಿಧ ಶಾಲಾ ಕಾಲೇಜ ವಿದ್ಯಾಥರ್ಿಗಳು ಮತ್ತು ನಾಗರಿಕರು ಪಾಲ್ಗೊಂಡಿದ್ದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.