ಸೂರ್ಯಗ್ರಹಣ ವೀಕ್ಷಿಸಿದ ೧೫ ಮಂದಿಯ ಸ್ಥಿತಿ ..ಏನಾಗಿದೆಯೆಂದರೆ..?

ಜೈಪುರ, ಜ ೨೨ :     ಕಳೆದ  ಡಿಸೆಂಬರ್  ೨೬ ರಂದು  ಅಪರೂಪದ ಕಂಕಣ ಸೂರ್ಯ ಗ್ರಹಣ  ಸಂಭವಿಸಿತ್ತು. ಈ ಸೂರ್ಯಗ್ರಹಣವನ್ನು ನೇರವಾಗಿ,  ಬರಿ ಗಣ್ಣಿನಿಂದ ವೀಕ್ಷಿಸಿಸಿದ  ೧೫  ಮಂದಿಯಲ್ಲಿ  ಸರಿಪಡಿಸಲಾಗದ   ದೃಷ್ಟಿ ದೋಷ ಕಾಣಿಸಿಕೊಂಡಿದೆ.

ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಡಿಸೆಂಬರ್ ೨೬ ರಂದು  ಸಂಭವಿಸಿದ  ಸೂರ್ಯಗ್ರಹಣವನ್ನು  ೧೫ ಮಂದಿ ಯುವಕರು ಬರಿ ಗಣ್ಣಿನಿಂದ  ವೀಕ್ಷಿಸಿದ ಕಾರಣ  ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ.   ಸೂರ್ಯ ಗ್ರಹಣದ ನೇರ ವೀಕ್ಷಣೆಯಿಂದ   ಅವರ ಕಣ್ಣುಗಳಲ್ಲಿನ ರೆಟಿನಾ ಗೆ ಹಾನಿಯಾಗಿದ್ದು ದೃಷ್ಟಿ ದೋಷ ಕಾಣಿಸಿಕೊಂಡಿದೆ  ಎಂದು ಎಸ್‌ಎಂಎಸ್ ಆಸ್ಪತ್ರೆಯ ವೈದ್ಯ ಕಮಲೇಶ್ ಖಿಲಾನಿ ಹೇಳಿದ್ದಾರೆ ಭವಿಷ್ಯದಲ್ಲಿಯೂ ಸಹ ಅವರ  ದೃಷ್ಟಿ  ಸಂಪೂರ್ಣವಾಗಿ ಮರಳುವ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಸೂರ್ಯನನ್ನು ನೇರವಾಗಿ ವೀಕ್ಷಿಸಬೇಡಿ.  ವೀಕ್ಷಿಸಿದರೆ  ಕಣ್ಣಿಗೆ ಭಾರಿ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು    ತಜ್ಞರು   ಜನರಿಗೆ  ಸಾಕಷ್ಟು ಎಚ್ಚರಿಕೆ ನೀಡಿದ್ದರು.

ಸೋಲಾರ್ ಗಾಗಲ್ಸ್, ಮೈಲಾರ್ ಶೀಟ್, ವೆಲ್ಡಿಂಗ್ ಗ್ಲಾಸ್ ಮೂಲಕ ಗ್ರಹಣವನ್ನು  ವೀಕ್ಷಿಸಬಹುದು ಎಂದು ಸಲಹೆ ನೀಡಿದ್ದರು.  ಟೆಲಿಸ್ಕೋಪ್ ಮೂಲಕ ಸೂರ್ಯನ ಪ್ರತಿಬಿಂಬ ಹಾಳೆ ಮೇಲೆ ಬೀಳುವಂತೆ ಮಾಡಿ ನೋಡಬಹುದು. ಸೂಜಿ ರಂಧ್ರ ಬಿಂಬ ಗ್ರಾಹಿ (ಪಿನ್ ಹೋಲ್ ಕ್ಯಾಮರಾ) ರೆಡಿ ಮಾಡಿಯೂ ವೀಕ್ಷಿಸಬಹುದು ಎಂದು ತಿಳಿ ಹೇಲಿದ್ದರೂ,   ಈ ಯುವಕರು     ಬರಿ ಗಣ್ಣಿನಿಂದ  ಸೂರ್ಯ ಗ್ರಹಣ ವೀಕ್ಷಿಸುವ ಸಾಹಸ ಮಾಡಿ   ದೃಷ್ಟಿ ದೋಷ ಸಮಸ್ಯೆಯನ್ನು ತಂದು ಕೊಂಡಿದ್ದಾರೆ.