ಬಾರ್ಬಡಸ್, ಜ 10, ತೀವ್ರ ಕುತೂಹಲ ಕೆರಳಿಸಿದ್ದ ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಒಂದು ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ 2014ರ ಬಳಿಕ ಇದೇ ಮೊದಲ ಬಾರಿ ತವರು ನೆಲದಲ್ಲಿ ಏಕದಿನ ಸರಣಿ ತನ್ನದಾಗಿಸಿಕೊಂಡಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿಂಡೀಸ್ 2-0 ಮುನ್ನಡೆ ಗಳಿಸಿದೆ. ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಐರ್ಲೆಂಡ್ ನೀಡಿದ್ದ 238 ರನ್ ಗುರಿ ಹಿಂಬಾಲಿಸಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕೊನೆಯ ಓವರ್ ನಲ್ಲಿ ಐದು ರನ್ ಅಗತ್ಯವಿತ್ತು. ಆದರೆ, ಪ್ರವಾಸಿ ತಂಡದ ಗೆಲುವಿಗೆ ಒಂದೇ ಒಂದು ವಿಕೆಟ್ ಬೇಕಾಗಿತ್ತು. ಈ ವೇಳೆ ಐರ್ಲೆಂಡ್ ತಂಡ ಎರಡು ರನೌಟ್ ಮಾಡುವಲ್ಲಿ ವಿಫಲವಾಯಿತು. ಈ ವೇಳೆ ಶೆಲ್ಡನ್ ಕಾರ್ಟೆಲ್ ಸಿಕ್ಸ್ ಹೊಡೆಯುವ ಮೂಲಕ ವಿಂಡೀಸ್ ಗೆ 2-0 ಮುನ್ನಡೆ ತಂದಿತ್ತರು. ಮಾರ್ಕ್ ಅಡೈರ್ ಮಾಡಿದ ತಪ್ಪಿನಿಂದ ಕಾರ್ಟೆಲ್ ರನೌಟ್ ನಿಂದ ಜೀವದಾನ ಪಡೆದು ಐರ್ಲೆಂಡ್ ಗೆ ಸೋಲುಣಿಸಿದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ಪಾಲ್ ಸ್ಟರ್ಲಿಂಗ್ ಅವರ (63 ರನ್) ಅರ್ಧಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿತ್ತು. ಅಲ್ಜಾರಿ ಜೋಸೆಫ್ ನಾಲ್ಕು ವಿಕೆಟ್ ಪಡೆದರು. ಮೊದನೇ ಏಕದಿನ ಪಂದ್ಯದಲ್ಲೂ ಜೋಸೆಫ್ 32 ರನ್ ನೀಡಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದರು.ಐರ್ಲೆಂಡ್ ತಂಡದ ನಿಯಮಿತ ಆಟಗಾರರಾದ ಕೆವಿನ್ ಒ ಬ್ರಿಯನ್ (31) ಹಾಗೂ ಸಿಮಿ ಸಿಂಗ್ (34) ತಂಡಕ್ಕೆ ಅಲ್ಪ ಕಾಣಿಕೆ ನೀಡಿದ್ದರು. ಜೋಸೆಫ್ ಜತೆಗೆ, ಶೆಲ್ಡನ್ ಕಾಟ್ರೆಲ್ ಮೂರು ವಿಕೆಟ್ ಪಡೆದರು.ಗುರಿ ಹಿಂಬಾಲಿಸಿದ್ದ ವೆಸ್ಟ್ ಇಂಡೀಸ್ ಆರಂಭ ಕೂಡ ಕೆಟ್ಟದಾಗಿತ್ತು. ಒಂದು ಹಂತದಲ್ಲಿ 76 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಶಾಯ್ ಹೋಪ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ 54 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ನಿಕೋಲಸ್ ಪೂರನ್ (52) ಹಾಗೂ ನಾಯಕ ಕೀರಾನ್ ಪೋಲಾರ್ಡ್ ಆರನೇ ವಿಕೆಟ್ ನಿರ್ಣಾಯಕ ಹಂತದಲ್ಲಿ 64 ರನ್ ಜತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಬ್ಯಾರಿ ಮೆಕ್ ಕಾರ್ಟಿ (2/28) ಅವರ ಬೌಲಿಂಗ್ ಅದ್ಭುತ ಕ್ಯಾಚ್ ಗೆ ಔಟ್ ಆಗುವ ಮುನ್ನ ಗೆರೆಥ್ ಡೆಲಾನಿ ಅವರ ಎರಡು ಎಸೆತಗಳಲ್ಲಿ ಪೊಲಾರ್ಡ್ ಅಂಗಳದ ಮೇಲ್ಛಾವಣೆಗೆ ಚೆಂಡನ್ನು ಅಟ್ಟಿದ್ದರು.148 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ಇನ್ನೇನು ಸೋಲು ಕಟ್ಟಿಟ್ಟ ಬುತ್ತಿ ಎಂದೇ ಅನಿಸಿತ್ತು. ಆದರೆ, ಕ್ರಿಸ್ ಗೆ ಆಗಮಿಸಿ ಹೇಡನ್ ವಾಲ್ಷ್ ಅಜೇಯ 46 ರನ್ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಗ್ರೆನೆಡಾದಲ್ಲಿ ಭಾನುವಾರ ಸೆಣಸಲಿವೆ. ನಂತರ, ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ.ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ 242/9 (ನಿಕೋಲಸ್ ಪೂರನ್ 52, ಹೇಡನ್ ವಾಲ್ಷ್ 42; ಸಿಮಿ ಸಿಂಗ್ 2/48, ಐರ್ಲೆಂಡ್ 237/9 )ಪಾಲ್ ಸ್ಟರ್ಲಿಂಗ್ 63, ಸಿಮಿ ಸಿಂಗ್ 34, ಅಲ್ಜಾರಿ ಜೋಸೆಫ್ 4/32)