ಕೊಲಂಬೊ, ಜ.22 : ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಯನ್ನು ಲಂಕಾ ಆಡಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ವಿಂಡೀಸ್, ಲಂಕಾ ಪ್ರವಾಸ ಫೆ.10 ರಿಂದ ಆರಂಭವಾಗುತ್ತದೆ. ಮೊದಲು ಪ್ರವಾಸಿ ತಂಡ ಎರಡು ಅಭ್ಯಾಸ ಪಂದ್ಯ ಆಡಲಿದೆ. ಕೊಲಂಬೊದಲ್ಲಿ ಫೆ.22 ರಂದು ಏಕದಿನ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ ಫೆ.26 ರಂದು ಹಾಗೂ ಮೂರನೇ ಪಂದ್ಯ ಮಾರ್ಚ್ 1ರಂದು ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಹೊರತು ಪಡಿಸಿ, ಉಳಿದ ಎರಡೂ ಪಂದ್ಯಗಳು ಹಗಲು ರಾತ್ರಿ ಪಂದ್ಯಗಳಾಗಿವೆ.
ಪ್ರವಾಸಿ ತಂಡ ಮಾರ್ಚ್ 4 ಹಾಗೂ ಮಾರ್ಚ್ 6 ರಂದು ಕ್ಯಾಂಡಿಯಲ್ಲಿ ಟಿ-20 ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ಉಭಯ ದೇಶಗಳ ಮಧ್ಯ ದ್ವಿಪಕ್ಷೀಯ ಸರಣಿ 2018ರಂದು ನಡೆದಿತ್ತು. ವಿಂಡೀಸ್ ಪ್ರವಾಸ ಬೆಳೆಸಿದ್ದ ಲಂಕಾ ಮೂರು ಟೆಸ್ಟ್ ಪಂದ್ಯಗಳನ್ನು ಆಡಿತ್ತು. 2015ರಿಂದ ವಿಂಡೀಸ್ ತಂಡ, ಲಂಕಾ ಪ್ರವಾಸ ಬೆಳೆಸಿರಲಿಲ್ಲ. ಕಳೆದ ಸರಣಿಯಲ್ಲಿ ವಿಂಡೀಸ್ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯ ಗೆದ್ದಿರಲಿಲ್ಲ. ಆದರೆ, ಟಿ-20 ಸರಣಿಯಲ್ಲಿ ಪ್ರವಾಸಿ ತಂಡ ಸಮಬಲ ಸಾಧಿಸಿತ್ತು.