ನವದೆಹಲಿ, ಜ 27 : ಇತರ ಕಾಂಗ್ರೆಸ್ ಆಡಳಿತ ಮತ್ತು ಎಡಪಕ್ಷಗಳ ಆಡಳಿತವಿರುವ ರಾಜ್ಯಗಳ ಹಾದಿಯಲ್ಲೇ ಸಾಗಿರುವ ಪಶ್ಚಿಮ ಬಂಗಾಳ ಸರ್ಕಾರ, ಸೋಮವಾರ ನಡೆದ ವಿಶೇಷ ವಿಧಾನಸಭಾ ಅಧಿವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಮಂಡಿಸಲಿದೆ.
ಇದರಿಂದ ಪಶ್ಚಿಮ ಬಂಗಾಳ, ಕೇರಳ, ಪಂಜಾಬ್ ಮತ್ತು ರಾಜಸ್ತಾನದ ನಂತರ ಸಿಎಎ ವಿರುದ್ಧ ನಿರ್ಣಯ ಮಂಡಿಸಲಿರುವ ನಾಲ್ಕನೇ ರಾಜ್ಯವಾಗಲಿದೆ.
ಸೋಮವಾರ ಸಿಎಎ ವಿರುದ್ಧ ಅಧಿಕೃತ ನಿರ್ಣಯ ಮಂಡಿಸಲಾಗುವುದು. ಎಲ್ಲಾ ಪಕ್ಷಗಳು ಅವಿರೋಧವಾಗಿ ಇದಕ್ಕೆ ಬೆಂಬಲ ಸೂಚಿಸುತ್ತವೆ ಎಂದು ನಂಬಿದ್ದೇವೆ ಎಂದು ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಜ. 21ರಂದು ಮಾಹಿತಿ ನೀಡಿದ್ದರು.
ಈ ನಿರ್ಣಯವನ್ನು ಬೆಂಬಲಿಸಿರುವ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು, ವಿಳಂಬವಾದರೂ ಉತ್ತಮ ನಿರ್ಧಾರ ಎಂದಿವೆ.