ಪಶ್ಚಿಮ ಬಂಗಾಳ ಶಿಕ್ಷಕಿ ಸಾವಿನ ಪ್ರಕರಣ: ಲೋಕಸಭೆಯಲ್ಲಿ ಕೋಲಾಹಲ

ನವದೆಹಲಿ, ನ 22 :  ಪಶ್ಚಿಮ ಬಂಗಾಳದಲ್ಲಿ  ಶಿಕ್ಷಕಿಯೊಬ್ಬರ ಸಾವಿನ ವಿಚಾರಕ್ಕೆ ಸಂಬಂಧಿಸಿ ಲೋಕಸಭೆಯು ಶುಕ್ರವಾರ ಕೋಲಾಹಲಕ್ಕೆ ಸಾಕ್ಷಿಯಾಯಿತು. 

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಲಾಕೆಟ್ ಚಟಜರ್ಿ ರಾಜ್ಯದಲ್ಲಿ ಅರೆಕಾಲಿಕ ಶಿಕ್ಷಕರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಉಲ್ಲೆಖಿಸಿ, ಶಿಕ್ಷಕಿಯ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಿದರು. 

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅರೆಕಾಲಿಕ ಶಿಕ್ಷಕರು ಹಾಗೂ ವಿದ್ಯಾಥರ್ಿಗಳ ಉಪವಾಸ ಮುಷ್ಕರದಿಂದ ಅಪಾಯವಾಗುವ ಸಂಭವವಿದೆ ಎಂದು ಲಾಕೆಟ್ ಚಟಜರ್ಿ ಎತ್ತಿದ ಸಮಸ್ಯೆಯನ್ನು ಬಂಗಾಳದ ಎಲ್ಲಾ ಬಿಜೆಪಿ ಸಂಸದರು ಬೆಂಬಲಿಸಿದರು. 

ಈ ವೇಳೆ ಸದನದ ಎಐಟಿಸಿ ಸದಸ್ಯರು ತಮ್ಮ ಸ್ಥಾನಗಳಿಂದ ಎದ್ದುನಿಂತು, ಬಿಜೆಪಿ ಸಂಸದರು ಮಾಡಿದ ಆರೋಪಗಳನ್ನು ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಪಶ್ಚಿಮ ಬಂಗಾಳದ ಅರೆಕಾಲಿಕ ಶಿಕ್ಷಕರು ಕಳೆದ 10 ದಿನಗಳಿಂದ ಕೋಲ್ಕತ್ತಾದ ಸೆಂಟ್ರಲ್ ಪಾಕರ್್ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ.