ಸ್ವಾಸ್ಥ್ಯ ಸಮಾಜ ನಮ್ಮೆಲ್ಲರ ಹೊಣೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್

ಕೊಪ್ಪಳ: ಮಾನಸಿಕ ರೋಗಿಗಳೂ ಸಾಮಾನ್ಯರಂತೆ ಜೀವಿಸುವ ಮೂಲಭೂತ ಹಕ್ಕನ್ನು ಹೊಂದಿದ್ದು, ಅವರಿಗಾಗಿಯೇ ಕಾನೂನು ಕಟ್ಟಳೆಗಳಿವೆ. ಆದ್ದರಿಂದ ಸ್ವಾಸ್ಥ್ಯ ಸಮಾಜ ನಮ್ಮೆಲ್ಲರ ಹೊಣೆಯಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಟಿ. ಶ್ರೀನಿವಾಸ್ ಅವರು ಹೇಳಿದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಗರದ ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ಸುಮಾರು 8 ಲಕ್ಷ ಜನ ಮರಣ ಹೊಂದುತ್ತಿದ್ದಾರೆ.  ಇದರಲ್ಲಿ ಶೇ. 17 ರಷ್ಟು ಜನರು (1,75,00) ಭಾರತಿಯರು ಎಂಬುವುದು ವಿಷಾದಕಾರಿ ಸಂಗತಿಯಾಗಿದೆ.  ಈ ವರ್ಷದ ಅಂತರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಸಂಘ (ಐ.ಎ.ಎಸ್.ಪಿ) ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಿಂದ "ಜೊತೆಗೂಡಿ ಕೇಲಸ ಮಾಡೋಣ, ಆತ್ಮಹತ್ಯೆ ತಡೆಗಟ್ಟೋಣ" ಎಂಬ ಘೋಷಣೆಯಿಂದ ಜನರಲ್ಲಿ ಅರಿವು ಮೂಡಿಸುವ ಕೇಲಸ ಮಾಡೋಣ.  ಆತ್ಮಹತ್ಯೆ ಸಮಸ್ಸೆಗೆ ಪರಿಹಾರವಲ್ಲ.  ಕೌಟುಂಬಿಕ ಸಮಸ್ಸೆ, ಆರ್ಥಿಕ ತೊಂದರೆ, ಒತ್ತಡಗಳನ್ನು ನಿಭಾಯಿಸುವದಕ್ಕೆ ಮಾನಸಿಕ ಸ್ವಸ್ಥತೆಯನ್ನು ಕಾಪಾಡಿಕೊಳ್ಳುವದು ಅತ್ಯವಶ್ಯಕವಾಗಿದೆ.  ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ.  ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು.  ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಕಾರ್ಯ ಕ್ಷೇತ್ರದವರು ಅಷ್ಟೆ ಅಲ್ಲದೇ ಸಮಾಜದ ಪ್ರತಿಯೊಬ್ಬ ನಾಗರಿಕರು ಸಹ ಮಾನವಿಯತೆಯ ಮೌಲ್ಯಗಳನ್ನು ಬೆಳೆಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾದ ವ್ಯಕಿಗಳ ಬಗ್ಗೆ ಕಾಳಜಿ ವಹಿಸಬೇಕು.  ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನು ಬಂಧಿಸುವದು, ಕಟ್ಟಿಹಾಕುವದು ಕಾನೂನು ಬಾಹಿರವಾಗಿದ್ದು, ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಅಂತವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.  ಯಾವುದೆ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲೂ ನೀರಾಕರಿಸಿದರೆ ಅಧಿಕಾರಿಗಳ ಮೇಲೆ ಕಾನೂನು ನಿಯಮಾನುಸಾರ ಕ್ರಮ ಕೈಗೊಳ್ಳಾಗುತ್ತದೆ ಎಂದು ಹೇಳಿದರು.  

ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯ ಡಾ. ರವಿಕುಮಾರ  ಮಾನಸಿಕ ಖಿನ್ನತೆ, ಆತ್ಮಹತ್ಯೆ ಕುರಿತು ಉಪನ್ಯಾಸ ನೀಡಿ, ಮನುಷ್ಯನಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೊಗ್ಯ ಅಷ್ಟೇ ಮುಖ್ಯವಾಗಿದೆ.  ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ಅಳುವುದು, ನಗುವುದು, ದೇವರು ಬಂದತೆ ನಟಿಸುವುದು, ಹೀಗೆ ಮೂಡನಂಬಿಕೆಯಿಂದ ಬಳಲುತ್ತಿರುವರು ಮಾನಸಿಕ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.  ಎಲ್ಲಾ ರೀತಿಯಲ್ಲಿ ಮಾನಸಿಕ ಖಾಯಿಲೆಗಳು ತನ್ನದೆ ಆದ ಚಿಕಿತ್ಸೆಯನ್ನು ಹೊಂದಿರುತ್ತದೆ.  ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದ ಮತ್ತು ಖಿನ್ನತೆಗೆ ಒಳಗಾದ ವ್ಯಕ್ತಿಗಳಿಗೆ ಮತ್ತು ಕುಟುಂದವರಿಗೆ ಧೈರ್ಯ ತುಂಬುವ ಕೇಲಸವನ್ನು ಆಶಾ ಕಾರ್ಯಕತರ್ೆಯರು ಮಾಡಬೇಕು.  ಆಶಾ ಕಾರ್ಯಕರ್ತೆಯರು ಮೊದಲನೇ ಹಂತದಲ್ಲಿ ಮಾನಸಿಕ ರೋಗಿಗಳ ಬಗ್ಗೆ ಹೆಚ್ಚಿನ ಆಧ್ಯತೆ ನೀಡಿ ನಂತರ ಸೂಕ್ತ ಚಿಕಿತ್ಸೆಗೆ ತಜ್ಞರ ಬಳಿ ತರಬೇಕು.  ಯಾವುದೇ ರೀತಿಯ ಭಯ ಪಡದೇ ಚಿಕಿತ್ಸೆ ಪಡೆದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಮತ್ತು ಮಾನಸಿಕ ರೋಗಿಗಳು ಕೆಲವೂಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಈ ರೀತಿಯ ನಿರ್ಧಾರವನ್ನು ತೆಗೆದು ಕೊಳ್ಳುವ ಮುಂಚೆ 02 ನಿಮಿಷ ಶಾಂತಿಯಿಂದ ಜೀವನದ ಬಗ್ಗೆ ಮತ್ತು ಅವರ ಅವಲಂಬಿತರ ಬಗ್ಗೆ ವಿಚಾರಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ``ಜೊತೆಗೂಡಿ ಕೆಲಸ ಮಾಡೋಣ ಆತ್ಮಹತ್ಯೆ ತಡೆಗಟ್ಟೋಣ'' ಎಂಬ ಘೋಷ ವಾಖ್ಯವಾಗಿದ್ದು, ಎಲ್ಲರೂ ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಮಹೇಶ ಎಮ್.ಜಿ ಮಾತನಾಡಿ, ಆತ್ಮಹತ್ಯೆಗೆ ಮಾನಸಿಕ ಆರೋಗ್ಯ ಒಂದೇ ಕಾರಣವಲ್ಲ, ವಯಸ್ಸಿನ ಆಧಾರದ ಮೇಲೆ ಮಾನಸಿಕ ಚಿಂತನೆಗಳು ಬದಲಾಗುತ್ತವೆ. ಅದರಲ್ಲಿ ಕೆಲವೊಂದಿಷ್ಟು ಜನರು ಹೆಚ್ಚಿನ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಅಂತವರನ್ನು ಗುರುತಿಸಿ, ಕೌನ್ಸಲಿಂಗ್ ಮಾಡಿ, ಚಿಕಿತ್ಸೆ ಕೊಡುವ ಕೆಲಸ ಆರೋಗ್ಯ ಇಲಾಖೆಯದ್ದಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ್ ಎಸ್. ಯರಗಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ ದಾನರಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗರಾಜು.ಟಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ.ಜಂಬಯ್ಯ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಪ್ರಕಾಶ. ವಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಾಮಾಂಜನೆಯ ಸೇರಿದಂತೆ ತಾಲ್ಲೂಕಾ ಆರೋಗ್ಯ ಅಧಿಕಾರಿಗಳ ಸಿಬ್ಬಂದಿ ವರ್ಗದವರು ಮತ್ತು ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕತರ್ೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.