ಗುಳೇದಗುಡ್ಡ೧೦: ಸಾರ್ವಜನಿಕರು ತಮ್ಮ ಸಾಮಾಜಿಕ ಜೀವನದಲ್ಲಿ ಕಾನೂನುಗಳನ್ನು ಸರಿಯಾಗಿ ಅರಿತುಕೊಳ್ಳುವುದರ ಮೂಲಕ ಅವುಗಳ ಮಹತ್ವ ಅರಿಯಬೇಕು. ಕಾನೂನುಗಳನ್ನು ಗೌರವಿಸಬೇಕು. ಯಾವುದೇ ಅಪರಾಧ ಕೃತ್ಯಗಳನ್ನು ಮಾಡಬಾರದು. ಇದರಿಂದ ಸ್ವಾಸ್ಥ್ಯ ಸಮಾಜ ನಿಮರ್ಾಣವಾಗಿ ಆರೋಗ್ಯಕರ ಪರಿಸರ ಸೃಷ್ಟಿಯಾಗುತ್ತದೆ ಎಂದು ಬಾದಾಮಿಯ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಕಿಶೋರ್ಕುಮಾರ್ ಎಂ. ಹೇಳಿದರು.
ಅವರು ಬುಧವಾರ ಸಮೀಪದ ತೆಗ್ಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾನೂನುಗಳು ನಮ್ಮ ಹಕ್ಕುಗಳನ್ನು ರಕ್ಷಿಸುತ್ತವೆ. ಸಮಾಜದಲ್ಲಿ ಸಮಾನತೆಯನ್ನುಂಟು ಮಾಡುತ್ತವೆ. ಬಾಲವಿವಾಹಗಳಂತಹ ಅಪರಾಧಗಳನ್ನು ಮಾಡದೇ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಬಾದಾಮಿಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪುನಿತ್ ಮಾತನಾಡಿ, ಲೋಕ್ ಅದಾಲತ್ ಹಾಗೂ ಜನತಾ ನ್ಯಾಯಾಲಯದ ಉಪಯೋಗವನ್ನು ಪಡೆಯುವ ಮೂಲಕ ನ್ಯಾಯಬದ್ದವಾದ ಬದುಕು ತಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು.
ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಕಾನೂನಿನ ಅರಿವು, ನೆರವು ಪಡೆಯುವುದರ ಮೂಲಕ ಗ್ರಾಮದಲ್ಲಿ ನಡೆಯುವ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಬಾದಾಮಿಯ ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಮತಿ ಎ.ಬಿ.ಕುಬಕಡ್ಡಿ ಹೇಳಿದರು.
ಬಾಲಕಾರ್ಮಿಕ ಕಾಯ್ದೆ ಮತ್ತು ಮೂಲಭೂತ ಕರ್ತವ್ಯದ ಕುರಿತು ನ್ಯಾಯವಾದಿ ಪಿ.ಎನ್.ರಾಠೋಡ ಉಪನ್ಯಾಸ ನೀಡಿದರು. ಜನನ ಮತ್ತು ಮರಣ ನೋಂದಣಿ ಕಾಯ್ದೆ ಕುರಿತು ಪಿ.ಆರ್.ಬಡಿಗೇರ ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎ.ಬಿ. ಉದ್ನೂರ, ಉಪಾಧ್ಯಕ್ಷ ಶಕೀಲ ಕಾಂಟ್ರಾಕ್ಟರ್, ಹಿರಿಯ ನ್ಯಾಯವಾದಿಗಳಾದ ಕೆ.ಟಿ.ಪವಾರ, ಜಿ.ಎಸ್.ಮೇಟಿ, ಎಸ್.ಆರ್.ಬರಹಾಣಪೂರ, ಜಿ.ಎಸ್.ರಾಂಪೂರ, ಗ್ರಾಮದ ಹಿರಿಯರಾದ ಬಾಲಪ್ಪ ಮದಕಟ್ಟಿ, ಯಲ್ಲಪ್ಪ ಮೇಟಿ, ಯಲ್ಲಪ್ಪ ಶಡ್ಲಗೇರಿ, ಕೆಲವಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಎಂ.ಕಾಳಗಿ, ಅಂಗನವಾಡಿ ಮೇಲ್ವಿಚಾರಕಿ ಭುವನೇಶ್ವರಿ ಬರಹಾಣಪೂರ ಅಂಗನವಾಡಿ ಶಿಕ್ಷಕಿಯರು, ಗ್ರಾಮದ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಚಂದ್ರಶೇಖರ ಕಾಳನ್ನವರ್ ವಂದಿಸಿದರು.