ನೂತನವಾಗಿ ಪ್ರಾರಂಭಗೊಂಡ ಬಿಜಾಪುರ-ಯಶವಂತಪುರ ರೈಲಿಗೆ ಅದ್ಧೂರಿ ಸ್ವಾಗತ

ಲೋಕದರ್ಶನವರದಿ

ಬಾಗಲಕೋಟ : ನೂತನವಾಗಿ ಪ್ರಾರಂಭಗೊಂಡ ಬಿಜಾಪೂರ-ಯಶವಂತಪುರ ರೈಲಿಗೆ ಬಾಗಲಕೋಟ ರೈಲು ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿ ಪಟಾಕಿಗಳನ್ನು ಸಿಡಿಸಿ ಪೂಜೆ ಸಲ್ಲಿಸುವ ಮುಖಾಂತರ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಮಾತನಾಡಿ ಹಲವು ವರ್ಷಗಳಿಂದ ಬಿಜಾಪೂರದಿಂದ ಬೆಂಗಳೂರಿಗೆ ಇನ್ನೊಂದು ರೈಲಿನ ಬೇಡಿಕೆ ಮಾಡುಲಾಗುತ್ತಿತ್ತು. ಬೇಡಿಕೆಗೆ ಸ್ಪಂದಿಸಿದ ಮಾನ್ಯ ರೈಲು ಸಚಿವರಾದ ಸುರೇಶ ಅಂಗಡಿ, ಲೋಕಸಭಾ ಸದಸ್ಯರಾದ ಪಿ.ಸಿ. ಗದ್ದಿಗೌಡರ ಸ್ಥಳೀಯ ಶಾಸಕರಾದ ಡಾ. ವೀರಣ್ಣ ಚರಂತಿಮಠ ಮತ್ತು ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಅಭಿನಂದಿಸಿದರಲ್ಲದೆ ರೈಲು ಅನುಕೂಲಕರ ಸಮಯದಲ್ಲಿ ಓಡಿಸಬೇಕೆಂದು ಕೇಳಿಕೊಂಡರು. ಈಗಿದ್ದ ಬಿಜಾಪೂರ-ಯಶವಂತಪುರ ಬೆಂಗಳೂರುವರೆಗೆ ಮುಂದುವರೆಸಿ ಮುಂಜಾನೆ 06:00 ಘಂಟೆಗೆ ತಲುಪುವಂತೆ ಮಾಡಬೇಕು. ಇದರ ಲಾಭ ಪ್ರಯಾಣಿಕರಿಗೆ ಆಗುವುದು. ಅಂದರೆ ಈಗ ಬೆಳಿಗ್ಗೆ 04:00 ಘಂಟೆಗೆ ಯಶವಂತಪುರ ತಲುಪುತ್ತಿದ್ದು, ಈ ರೈಲು ಪ್ರಯಾಣಿಕರಿಗೆ ಅಟೋ ಚಾಜರ್್ ಮತ್ತು ಸಮಯದ ಹೊರೆ ಆಗುತ್ತದೆ. ಅನುಕೂಲಕರ ಸಮಯ ಅಳವಡಿಸಬೇಕೆಂದು ಕೇಳಿಕೊಂಡರು. ಅದರಂತೆ ಇನ್ನೂ ಎರಡು ರೈಲುಗಳು ಅಂದರೆ ಗುಂಡಕಲ್-ತಿರುಪತಿ, ಹುಬ್ಬಳ್ಳಿ-ನಿಜಾಮುದ್ದೀನ  ಬಾಗಲಕೋಟ ಮಾರ್ಗವಾಗಿ ಸಂಚರಿಸಬಹುದಾದ ಎಲ್ಲ ಅವಕಾಶಗಳಿದ್ದು ಮಾನ್ಯ ರೇಲ್ವೆ ಸಚಿವರಿಗೆ ಮನವರಿಕೆ ಮಾಡಬೇಕೆಂದು ಶಾಸಕರಾದ ಡಾ. ವೀರಣ್ಣ ಚರಂತಿಮಠ, ಮುಖಂಡರಾದ ಪ್ರಕಾಶ ತಪಶೆಟ್ಟಿ, ನಾರಾಯಣಸಾ ಭಾಂಡಗೆ ಅವರನ್ನು ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿಕೊಂಡು ರೈಲು ಪ್ರಾರಂಭಕ್ಕೆ ಶ್ರಮಿಸಿದ ಅವರನ್ನು ರೇಲ್ವೆ ಹೋರಾಟ ಸಮಿತಿ ವತಿಯಿಂದ ಬಾಗಲಕೋಟ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಡಾ. ವೀರಣ್ಣ ಚರಂತಿಮಠ, ಮುಖಂಡರಾದ ಪ್ರಕಾಶ ತಪಶೆಟ್ಟಿ, ನಾರಯಣಸಾ ಭಾಂಡಗೆ, ರಾಜು ನಾಯ್ಕರ, ಬಸವರಾಜ ಯಂಕಂಚಿ, ಜಯಂತ ಕುರಂದವಾಡ, ಬಿಜೆಪಿಯ ನಗರಸಭಾ ಸದಸ್ಯರುಗಳು, ಪದಾಧಿಕಾರಿಗಳು, ಚೇಂಬರ ಆಫ್ ಕಾಮಸರ್ಿನ ಪದಾಧಿಕಾರಿಗಳು ದಾಮೋದರ ರಾಠಿ, ಎಸ್.ಎಸ್. ಲಾಥೋರ್ಕರ, ತೋಳನೂರ, ಹುಬ್ಬಳ್ಳಿ, ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಕುತುಬುದ್ದೀನ ಖಾಜಿ ಉಪಾಧ್ಯಕ್ಷರಾದ ಶ್ರೀನಿವಾಸ ಬಳ್ಳಾರಿ, ಮಮತಾಜ ಬೇಗಂ ಸೌದಾಗರ, ಮಂಜುಳಾ ಭೊಸಾರೆ, ಲಕ್ಷ್ಮೀ ಹೊಸಮನಿ, ಸುಧಾ ಪಾಟೀಲ, ಜಯಾ ಗುಳಬಾಳ, ದಾನಮ್ಮ ಹಾದಿಮನಿ, ಮೈನುದ್ಧೀನ ಖಾಜಿ ಮತ್ತು ನೂರಾರು ಜನರಿದ್ದರು.