ನೂತನ ಸಚಿವ ಶ್ರೀಮಂತ ಪಾಟೀಲರಿಗೆ ಅದ್ದೂರಿ ಸ್ವಾಗತ

ಲೋಕದರ್ಶನ ವರದಿ

ಕಾಗವಾಡ 13: ಕಾಗವಾಡ ಕ್ಷೇತ್ರದ ಶಾಸಕರು ನೂತನ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಇವರು ಸಚಿವ ಸಂಪುಟ ರಚನೆ ಬಳಿಕ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದರಿಂದ ಅವರ ಅಭಿಮಾನಿಗಳು ಅದ್ಧೂರಿವಾಗಿ ಸ್ವಾಗತ ನೀಡಿದರು.

ಗುರುವಾರ ಬೆಳಿಗ್ಗೆ ಕಾಗವಾಡ ಕ್ಷೇತ್ರದ ಶಿರಗುಪ್ಪಿ ಗ್ರಾಮದಲ್ಲಿ ಸಚಿವರು ಆಗಮಿಸಿದ್ದರು. ಅವರ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಹವಾದ್ಯದ ಮೆರವಣಿಗೆ ಮುಖಾಂತರ ಪಕ್ಷದ ಹಿರಿಯ ಮುಖಂಡ ಶಿವಾನಂದ ಪಾಟೀಲ ಇವರ ನಿವಾಸದಲ್ಲಿ ಬರಮಾಡಿಕೊಂಡರು.

ರಾಜ್ಯದ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ, ನಾನು ದೇವರ ಮೇಲೆ ಅಷ್ಟೇನು ನಂಬಿಕೆಯಿಡಲ್ಲಾ. ಆದರೆ, ನನ್ನ ಕ್ಷೇತ್ರದ ಜನತೆ ನನ್ನ ದೇವರು. ಅವರ ಆಶೀವರ್ಾದದಿಂದ ರಾಜ್ಯ ಸರ್ಕಾರದ ಸಚಿವನಾಗಿ ನಿಮ್ಮ ಸೇವೆ ಮಾಡಲು ಅವಕಾಶ ವದಿಗಿದೆ. ಕಾಗವಾಡ ಕ್ಷೇತ್ರ ರಾಜ್ಯ ಮಟ್ಟದಲ್ಲಿ ಹಿಂದೂಳಿದ ಕ್ಷೇತ್ರವೆಂದು ಗುರುತಿಸಲಾಗಿದೆ. ಇಲ್ಲಿಯ ಶಿಕ್ಷಣ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಒಳ್ಳೆ ರಸ್ತೆ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಮಾದರಿ ಕ್ಷೇತ್ರ ಮಾಡುವ ನನ್ನ ಗುರಿಯಾಗಿದೆ ಎಂದು ಹೇಳಿದರು.

ಶಿರಗುಪ್ಪಿ ಗ್ರಾಮದ ಹಿರಿಯ ನ್ಯಾಯವಾದಿ, ಪಕ್ಷದ ಮುಖಂಡರಾದ ಅಭಯಕುಮಾರ ಅಕಿವಾಟೆ ಮಾತನಾಡುವಾಗ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ನಮ್ಮ ಶಾಸಕರಿಗೆ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಿ, ಜವಳಿ ಖಾತೆದೊಂದಿಗೆ ಅಲ್ಪ ಸಂಖ್ಯಾತರ ಖಾತೆ ನೀಡಿದ್ದಾರೆ. ಇದರ ಮುಖಾಂತರ ಅಲ್ಪ ಸಂಖ್ಯಾತರ ಅನೇಕ ಕುಟುಂಬಗಳು ಸಮಸ್ಯೆಯಲ್ಲಿದ್ದು, ಇವುಗಳನ್ನು ಭಗಿಹರಿಸಲು ಸಚಿವ ಶ್ರೀಮಂತ ಪಾಟೀಲರು ಪ್ರಯತ್ನಿಸುತ್ತಾರೆ. ದಿ. ಎ.ಬಿ.ಜಕನೂರ, ವ್ಹಿ.ಎಲ್.ಪಾಟೀಲ ಇವರ ನಂತರ ಸುಮಾರು 35 ವರ್ಷಗಳ ಬಳಿಕ ಕ್ಷೇತ್ರಕ್ಕೆ ಸಚಿವ ಸ್ಥಾನ ಲಭಿಸಿದೆ. ಇದು ನಮ್ಮ ಸೌಭಾಗ್ಯ ಎಂದರು.

ಶಿರಗುಪ್ಪಿ, ಜುಗೂಳ, ಕಾಗವಾಡ, ಮಂಗಾವತಿ, ಕುಸನಾಳ, ಸೇರಿದಂತೆ ಅನೇಕ ಕಾರ್ಯಕರ್ತರು ಒಂದುಗುಡಿ ಶಾಸಕರಿಗೆ ಹೂ ಮಾಲೆ ಹಾಕಿಸಿ, ಸಿಹಿ ನೀಡಿ, ಪಕ್ಷದ ಹಿರಿಯ ಮುಖಂಡ, ನ್ಯಾಯವಾದಿ ಅಭಯಕುಮಾರ ಅಕಿವಾಟೆ, ಮಹಾವೀರ ಕಾತ್ರಾಳೆ, ಅಶೋಕ ಕಾತ್ರಾಳೆ, ಅರುಣ ಗಣೇಶವಾಡಿ, ಮಹಾವೀರ ಗಣೇಶವಾಡಿ, ಸಹದೇವ ಪೂಜಾರಿ, ಐ.ಬಿ.ಪಾಟೀಲ, ರಾವಸಾಹೇಬ ಪಾಟೀಲ, ಬೊಮ್ಮನ್ನಾ ಚೌಗುಲೆ, ನಿವೃತ್ತ ಪ್ರಾಚಾರ್ಯ ಬಿ.ಜೆ.ಪಾಟೀಲ, ರಾಮಗೌಡಾ ಪಾಟೀಲ, ದೀಪಕ ಪಾಟೀಲ, ಸುಭಾಷ ಮೋನೆ,ವರ್ಧಮಾನ ಅಕಿವಾಟೆ, ಗ್ರಾಪಂ ಅಧ್ಯಕ್ಷ ಈಕ್ಬಾಲ್ ಕನವಾಡೆ, ಪ್ರಕಾಶ ಢಂಗ, ಅಮೀತ ಪಾಟೀಲ, ಅಬ್ದುಲಬಾರಿ ಮುಲ್ಲಾ, ದಾದಾ ಪಾಟೀಲ, ಉತ್ಕರ್ಶ ಪಾಟೀಲ, ಸೇರಿದಂತೆ ಅನೇಕರು ಇದ್ದರು.