ನಂದಿ ಭೂಷಿತ ಕಪ್ಪತ ಜ್ಯೋತಿ ಯಾತ್ರೆಗೆ ಸ್ವಾಗತ

Welcome to the Nandi Bhushitta Kappata Jyoti Yatra

ಹುಬ್ಬಳ್ಳಿ 13: ಚನ್ನಮ್ಮನ ಕಿತ್ತೂರನಿಂದ ಕಪ್ಪತಗುಡ್ಡದವರೆಗೆ ನಂದಿಕೃಷಿ ಪುನರುತ್ಥಾನಕ್ಕಾಗಿ ನಂದಿ ಭೂಷಿತ ಕಪ್ಪತ ಜ್ಯೋತಿ ಯಾತ್ರೆ ಕಪ್ಪತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನಮಠದ ಪೂಜ್ಯರಾದ ಶ್ರೀ ಶಿವಕುಮಾರ ಮಹಾಸ್ವಾಮಿಜಿ ಅವರ ನೇತೃತ್ವದಲ್ಲಿ ಚನ್ನಮ್ಮನ ಕಿತ್ತೂರದಿಂದ ಪ್ರಾರಂಭವಾಗಿ ಧಾರವಾಡ ಮೂಲಕ ಹುಬ್ಬಳ್ಳಿಗೆ ಆಗಮಿಸಿದಾಗ ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನಮಠದ ಪೂಜ್ಯರಾದ ಶ್ರೀ ಶಿವಕುಮಾರ ಮಹಾಸ್ವಾಮಿಜಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಗೌರವ ನಮನ, ಪ್ರಣಾಮಗಳನ್ನು ಸಲ್ಲಿಸಿದರು.  

ದರ್ಶನ ಆಶೀರ್ವಾದ ಪಡೆದರು.ರಾಣಿಚನ್ನಮ್ಮಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶಂಕರ ಕುಂಬಿ,  ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ ಉಪ ಆಯುಕ್ತರಾದ ಜಿ.ಬಿ. ಗೌಡಪ್ಪಗೋಳ, ಭಾಲಚಂದ್ರ ಜಾಬಶೆಟ್ಟಿ,  ವಿ.ವಿ.ಶೀರಿ, ಎಂ.ಬಿ.ಪೂಜಾರ, ಶಂಕರ ಪಾಟೀಲ, ಪ್ರಭುರೋಣದ, ಬಿ.ಕೆ.ಪಾಟೀಲ, ಉಳವಪ್ಪ ಬಂಗಾರಿ, ಮಲ್ಲಿಕಾರ್ಜುನ ಅಂಗಡಿ,  ಮಹಾರಾಜನವರ, ಮಾಳಶೆಟ್ಟಿ, ಶ್ಯಾಮಸುಂದರ ಬಿದರಕುಂದಿ, ಸಂಗಮೇಶ, ಮುಂತಾದವರು ಭಾಗವಹಿಸಿದ್ದರು.