ಗಾಂಧೀ ಸ್ಥಬ್ದ ಚಿತ್ರ ಅಭಿಯಾನಕ್ಕೆ ಸಂಭ್ರಮದ ಸ್ವಾಗತ

ಬೆಳಗಾವಿ 24:  ರಾಷ್ಟಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಗಾಂಧೀ 150 ಸ್ತಬ್ಧಚಿತ್ರ ಅಭಿಯಾನ ಕಿತ್ತೂರು ಉತ್ಸವದ ಅಂಗವಾಗಿ ಚನ್ನಮ್ಮ ಕಿತ್ತೂರಿಗೆ  ಇಂದು ( ಬುಧವಾರ) ಆಗಮಿಸಿತು.

ಚನ್ನಮ್ಮನ ವೃತ್ತದ ಬಳಿ ಶಾಸಕ ಮಹಾಂತೇಶ ದೊಡ್ಡಗೌಡರ ಅಭಿಯಾನವನ್ನು ಬರಮಾಡಿಕೊಂಡು, ಗಾಂಧೀ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರುಸತ್ಯ ಮತ್ತು ಅಹಿಂಸೆಯಿಂದ ಯಾವುದೇ ಸಾಧನೆ ಮಾಡಬಹುದು ಎಂದು ಮಹಾತ್ಮಾ ಗಾಂಧೀಜಿ ತೋರಿಸಿಕೊಟ್ಟು, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಗ್ರಾಮಗಳ ಅಭಿವೃದ್ಧಿ ಕನಸು ಕಂಡಿದ್ದ ಗಾಂಧೀಜಿ ಅವರ ಕನಸನ್ನು ನನಸಾಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದರು.

ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿದರ್ೇಶಕ ಗುರುನಾಥ ಕಡಬೂರ ಮಾತನಾಡಿ, ಜಗತ್ತೆ ಆದರ್ಶವಾಗಿಟ್ಟುಕೊಳ್ಳುವ ವ್ಯಕ್ತಿತ್ವ ಮಹಾತ್ಮಾ ಗಾಂಧೀಜಿ ಅವರದ್ದಾಗಿದೆ. ನನ್ನ ಜೀವನವೇ ನನ್ನ ಸಂದೇಶ ಎಂಬ ಗಾಂಧಿಜೀಯವರ ತತ್ವ ಪ್ರತಿಯೊಬ್ಬರಿಗೂ ಮಾದರಿ ಎಂದು ಹೇಳಿದರು.

ಸ್ಥಬ್ದ ಚಿತ್ರ ಅಭಿಯಾನಕ್ಕೆ ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದು, ರಾಜ್ಯಾದ್ಯಂತ ಅಭಿಯಾನ ಸಂಚರಿಸಲಿದೆ. ಅಕ್ಟೋಬರ್ 25 ರಂದು ಗೋಕಾಕ ಹಾಗೂ 26 ರಂದು ಅಥಣಿ ತಾಲೂಕಿನಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು "ಬೋಳುವಾರ ಮಹ್ಮದ್ ಕುಂಇ" ರಚನೆಯ "ಬಾಪು-ಪಾಪು" ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು.

ಪ್ರಭಾರಿ ತಹಶೀಲ್ದಾರ ಸಿದ್ದರಾಮೇಶ್ವರ, ವಾತರ್ಾ ಇಲಾಖೆಯ ಎಮ್.ಎಲ್.ಜಮಾದಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

 ಮೆರವಣಿಗೆ:

   ಚನ್ನಮ್ಮ ವೃತ್ತದಿಂದ ಪಟ್ಟಣದಲ್ಲಿ ಸ್ಥಬ್ದ ಚಿತ್ರದ ಮೆರವಣಿಗೆ ಜರುಗಿತು. ಅಧಿಕಾರಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾಥರ್ಿಗಳು ಸೇರಿದಂತೆ ಸಾರ್ವಜನಿಕರಿ ಪಾಲ್ಗೊಂಡಿದ್ದರು.

 ಜನ-ಮನ ಸೆಳೆದ ಸ್ಥಬ್ದ ಚಿತ್ರ:

ಬ್ರಿಟಿಷ್ ಆಳ್ವಿಕೆ ವಿರೋಧಿಸಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದ ಆಕರ್ಷಕ ಪ್ರತಿಕೃತಿ, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು ಹಾಗೂ ಕೆಟ್ಟದ್ದನ್ನು ಮಾತನಾಡಬಾರದು ಎಂಬ ಸಂದೇಶ ಸಾರುವ ಮೂರು ಮಂಗಗಳ ಚಿತ್ರಗಳು, ಗಾಂಧೀಜಿಯವರ ಪ್ರಸಿದ್ಧ ಹೇಳಿಕೆಗಳು ಹಾಗೂ ಅವರ ಭಜನೆಗಳು ಪ್ರಸಾರ ಸ್ಥಬ್ದಚಿತ್ರದಲ್ಲಿದ್ದವು