ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಚರಣೆಗೆ ಬೆಳಕು ಸಂಸ್ಥೆ ಸ್ವಾಗತ

ಶಿಗ್ಗಾವಿ13 : ಭಾವೈಕ್ಯತೆಯ ಸಂತ, ಶರಣರ ನೆಲೆಬೀಡಾದ ಕ್ಷೇತ್ರ ಹಾಗೂ ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಮುಂದಿನ 86 ನೇ ಅಖಿಲ ಭಾರತ ಸಮ್ಮೇಳನ ಮಾಡಲು ಅವಕಾಶ ಸಿಕ್ಕಿರುವದು ಜಿಲ್ಲೆಯ ಸಾಹಿತಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಸಂತಸ ತಂದಿದೆ ಎಂದು ಬೆಳಕು ಸಾಹಿತ್ಯ ಸಂಸ್ಥೆಯ ತಾಲೂಕಾ ಅಧ್ಯಕ್ಷ ಬಸವರಾಜ ಹಡಪದ ಸ್ವಾಗತಿಸಿ ಹರ್ಷವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಗಭೂಮಿ, ಸಾಹಿತ್ಯ ಕ್ರೀಯಾಶೀಲ ಸಮಾಜದ ಅವಿಭಾಜ್ಯ ಅಂಗವಾಗಿದೆ ಜೊತೆಗೆ ಈ ಭಾಗದ ಸಾಹಿತ್ಯದ ಸಂಗಮವಾಗಲು ಈ ಸಮ್ಮೇಳನ ಸಾಕ್ಷಿಯಾಗಬೇಕು, ಇಂದು ಸಾಹಿತ್ಯವೆಂಬುವದು ಕೆಲ ಜನರ ಸ್ವಾರ್ಥ ಸಾಧನೆಗೆ ಬಳಕೆಯಾಗುತ್ತಿದ್ದು ಮುಕ್ತ ಸಾಹಿತ್ಯದ ವಾತಾವರಣ ಸೃಷ್ಟಿಯಾಗಲು ಸರ್ವರ ಒಗ್ಗೂಡುವಿಕೆ ಮತ್ತು ಭಾಗವಹಿಸುವಿಕೆಯಿಂದ ಅವಶ್ಯವಾಗಿದೆ ಅಲ್ಲದೆ ಪ್ರತಿಯೊಬ್ಬ ಕನ್ನಡ ನಾಡಿನ ಸಾಮಾನ್ಯ ಪ್ರಜೆಯೂ ಸಹಿತ ಸಾಹಿತ್ಯಾರಾಧಕರಾಗಬೇಕು ಅಂದಾಗ ಕನ್ನಡ ತೇರನ್ನು ಎಳೆಯಲು ಸಾಧ್ಯವಿದೆ.

ಜಿಲ್ಲೆಯ ಎಲ್ಲ ಸಾಹಿತಿಗಳನ್ನ, ಕವಿಮನುಗಳನ್ನು, ಕಲಾವಿಧರನ್ನ, ಹಿರಿಯ, ಕಿರಿಯ ಸಾಹಿತಿಗಳನ್ನ, ಸಾಧಕರನ್ನ, ರಂಗಭೂಮಿ ಕಲಾವಿಧರನ್ನ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳನ್ನ ಒಗ್ಗೂಡಿಸಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸುವ ಅವಶ್ಯಕತೆಯಿದೆ ಆ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ಸರ್ವರೂ ಮುಕ್ತ ಮನಸ್ಸಿನಿಂದ ಶ್ರಮಿಸಿ ಯಶಸ್ವಿಗೊಳಿಸಬೇಕು ಜೊತೆಗೆ ಸಮ್ಮೇಳನ ಹಾವೇರಿಗೆ ಬರಲು ಶ್ರಮಿಸಿದ ಪ್ರತಿಯೊಬ್ಬರಿಗೂ ಮುಕ್ತ ಮನಸ್ಸಿನ ಅಭಿನಂದನೆಗಳು.