ಜಿ ಐ ಟಿ ಯಲ್ಲಿ ಹೊಸ ವಿದ್ಯಾಥರ್ಿಗಳಿಗೆ ಸ್ವಾಗತ


ಬೆಳಗಾವಿ 07: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪರಿಶ್ರಮಕ್ಕೆ ಬೇರೆ ಯಾವುದೇ ಪಯರ್ಾಯವಿಲ್ಲಾ ಮತ್ತು ಇದು ಯಶಸ್ಸಿನ ಏಕೈಕ ಮಂತ್ರವಾಗಿದೆ ಎಂದು ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ ಹೇಳಿದರು. 

ಅವರು ಜಿ ಐ ಟಿಯಲ್ಲಿ 2018-19 ಇಂಜಿನಿಯರಿಂಗ್ ಪದವಿಯ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾಥರ್ಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದರು. 

ಇವತ್ತಿನ ವೇಗಕ್ಕೆ ಪರಿಶ್ರಮದ ಜೊತೆ " ಸ್ಮಾಟರ್್ ವಕರ್್ " ಸಹ ಅವಶ್ಯಕತೆ ಇದೆ ಮತ್ತು ಕ್ಷಿಪ್ರ ಫಲಿತಾಂಶದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.    

ಜಿ ಐ ಟಿ ಯ ಪ್ಲೆಸ್ಮೆಂಟ್ಸ್ ಬಗ್ಗೆ ಮಾತನಾಡುತ್ತ, ಇವತ್ತಿನ ಔದ್ಯೋಗಿಕ ವಲಯದ ಬೇಡಿಕೆಗೆ ತಕ್ಕಂತೆ ವಿದ್ಯಾಥರ್ಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು "ಇಂಡಸ್ಟ್ರಿ ರೆಡಿ ಎಂಜಿನೀರ್ಸ ಕಲ್ಪನೆಯನ್ನು ಇಟ್ಟುಕೊಂಡು ನಮ್ಮ ಮಹಾವಿದ್ಯಾಲಯ ಕೆಲಸ ಮಾಡುತ್ತಿದ್ದು, ವಿದ್ಯಾಥರ್ಿಗಳ ಹೊಸ ಹೊಸ ಐಡಿಯಾಗಳಿಗೆ ರೆಕ್ಕೆ ಕೊಟ್ಟು ಸ್ವಾವಲಂಬಿಯಾಗಿ ಸ್ಟಾಟರ್್ ಅಪ್ಗಳನ್ನೂ ತೆರೆಯಲು ಸಂಸ್ಥೆ ಕೆಲಸ ಮಾಡುತಿದ್ದೆ ಎಂದು ಹೇಳಿದರು. 

ನಂತರ ಸಿ ಇ ಟಿ ಯಲ್ಲಿ 1500 ಕ್ಕಿಂತ ಕಡಿಮೆ ಶ್ರೇಣಿಯನ್ನು ಪಡೆದು ಜಿ ಐ ಟಿ ಗೆ ಪ್ರವೇಶ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸುತ್ತ ಮಾತನಾಡಿದ ಇವರು ಈ ವಿದ್ಯಾಥರ್ಿಗಳಿಗೆ ಸಂಸ್ಥೆ  ಫೀಸ್ನಲ್ಲಿ 100 ರಿಯಾಯಿತಿ ನೀಡಿದ್ದು ಉಚಿತವಾಗಿ ಬಿ ಇ ಶಿಕ್ಷಣವನ್ನು ನೀಡಲಿದೆ ಎಂದು ತಿಳಿಸಿದರು. 

 ಕಾಲೇಜಿನ ಪ್ರಾಚಾರ್ಯ ಡಾ. ಏ. ಎಸ್. ದೇಶಪಾಂಡೆ ಅವರು ಒಟ್ಟು ಬಿ. ಇ. ಕೋಸರ್್ ಬಗ್ಗೆ ಹೇಳುತ್ತಾ. ಸಂಸ್ಥೆಯಲ್ಲಿ ವಿದ್ಯಾಥರ್ಿಗಳಿಗಾಗಿ ಇರುವ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ಜೊತೆಗೆ ಜಿ ಐ ಟಿ ಯ ಸ್ವಾಯತ್ತತೇ ಬಗ್ಗೆ ಹೇಳುತ್ತಾ ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ಇದು ಹೇಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಒಬ್ಬ ವಿದ್ಯಾಥರ್ಿ ರೆಗ್ಯುಲರ್ ಬಿ ಇ ಪದವಿಯ ಜೊತೆಗೆ ತನಗಿಷ್ಟವಾದ ಮತ್ತು ಇಂದು ಅವಶ್ಯಕವಿರುವ ತಾಂತ್ರಿಕ ವಿಷಯಗಳಲ್ಲಿ "ಹಾನಸರ್್ ಡಿಗ್ರಿ ಯನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟರು. 

 ಡೀನ್ ಡಾ. ಎಂ ಎಸ್ ಪಾಟೀಲ, ಪ್ರಥಮ ವರ್ಷದ ಸಂಯೋಜಕ ಡಾ. ಎಂ. ಕೆ. ರೆಂದಾಳೆ ಸಿಬ್ಬಂದಿ ವರ್ಗ ಹಾಗೂ ಜಿ ಐ ಟಿ ಗೆ ಪ್ರವೇಶ ಪಡೆದ 800 ಕ್ಕಿಂತ ಹೆಚ್ಚು ವಿದ್ಯಾಥರ್ಿಗಳು ಮತ್ತು ಪಾಲಕರು ಹಾಜರಿದ್ದರು. ಕಾರ್ಯಕ್ರಮವನ್ನು ಆನ್ವಯಿಕ ವಿಜ್ಞಾನ ವಿಭಾಗಗಳು ಜಂಟಿಯಾಗಿ ಸಂಯೋಜಿಸಿದ್ದವು. ಪ್ರೊ. ನೂಪುರ್ ಮತ್ತು ಪ್ರೊ. ಪ್ರಾಜಕ್ತ ನಿರೂಪಿಸಿದರು.