ಬಾಗಲಕೋಟ ಜಿಲ್ಲೆಗೆ ಪುರಪ್ರವೇಶ ಮಾಡಿದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳಿಗೆ ಭಕ್ತರಿಂದ ಅದ್ಧೂರಿಯ ಸ್ವಾಗತ


ಬಾಗಲಕೋಟ 15 ರಾಜ್ಯದಲ್ಲಿಯೇ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಆದಿ ಚುಂಚನಗಿರಿ ಮಠದ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಬಾಗಲಕೋಟ ಜಿಲ್ಲೆಗೆ ಪೊಉರ ಪ್ರವೇಶ ಮಾಡಿದಾಗ ಸೀಮೀಕೇರಿ, ಗದ್ದನಕೇರಿ, ಬಾಗಲಕೋಟ ಭಕ್ತರು ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಅವರ ಆಶೀವರ್ಾದ ಪಡೆದರು. ಶ್ರಾವಣಮಾಸದ ಶುಭ ಗಳಿಗೆಯಲ್ಲಿ ಬಾಗಲಕೋಟ ತಾಲೂಕಿನ ಸಿಮೀಕೇರಿ ಸರಹದ್ದಿನಲ್ಲಿರುವ ನಿಯೋಜಿತ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ನಂತರ ಬಾಗಲಕೋಟೆಯ ಜೆ.ಡಿ.ಎಸ್. ರಾಜ್ಯ ಕಾರ್ಯದಶರ್ಿಯಾದ ರವಿ ಹುಣಶ್ಯಾಳ, ಜಿಲ್ಲಾ ಮಹಾಪ್ರಧಾನ ಕಾರ್ಯದಶರ್ಿ ಶರಣು ಹುರಕಡ್ಲಿ, ಜಿಲ್ಲಾ ಉಪಾಧ್ಯಕ್ಷರಾದ ಗುರುನಾಥ ಸಿಂಗರೆಡ್ಡಿ, ತಾಲೂಕಾ ಅಧ್ಯಕ್ಷ ಸಲೀಂ ಮೋಮಿನ, ಯಾಶೀನ ನದಾಫ, ಯಾಶೀನ ಮಿಜರ್ಿ, ಜಮೀಲ ಟಂಕಸಾಲಿ, ಹಾಗೂ ಸೀಮಿಕೇರಿ ಗ್ರಾಮದ ವೀರಭದ್ರ ನಾಯಕ, ಮುದಕಣ್ಣ ಬಣಕಾರ, ರುದ್ರಪ್ಪ ಬಣಕಾರ, ಪಾಂಡಪ್ಪ ವಾಲ್ಮೀಕಿ, ಬಾಳಪ್ಪ ಹಟ್ಟಿ, ಮಹಾದೇವ ತಳವಾರ ಸೇರಿ ಅನೇಕರು ಶ್ರೀಗಳ ಆಶೀವರ್ಾದ ಪಡೆದು ಶ್ರೀ ನಿರ್ಮಲಾನಂದ ಸ್ವಾಮಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು. 

ನಂತರ ಶ್ರೀಗಳು ಮಾತನಾಡಿ ಕೇವಲ ದಕ್ಷಿಣ ಕನರ್ಾಟಕಕ್ಕೆ ತಮ್ಮ ಸಮಾಜ ಸೇವೆ ಸೀಮಿತಗೊಳಿಸದೇ ತಾವೂ ಉತ್ತರ ಕನರ್ಾಟಕದಲ್ಲಿಯೇ ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ತಾವು ಶೈಕ್ಷಣಿಕ ಸಂಸ್ಥೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಆದಿಚುಂಚನಗಿರಿಯ ಸಿ.ಇ.ಓ (ಮುಖ್ಯ ಸಂಯೋಜಕರು) ಶ್ರೀ ರಾಮಕೃಷ್ಣಗೌಡರು ಉಪಸ್ಥಿತರಿದ್ದರು.