ಲೋಕದರ್ಶನ ವರದಿ
ಬೆಳಗಾವಿ 20: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಗುಣಾತ್ಮಕವಾಗಿ ಬೆಳೆಸುವಲ್ಲಿ ಡಾ.ಶಿವಾನಂದ ಹೊಸಮನಿಯವರು ಅಪಾರ ಕೊಡುಗೆ ನೀಡಿದ್ದಾರೆಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ನುಡಿದರು.
ಅವರು ಲಿಂಗರಾಜ ಮಹಾವಿದ್ಯಾಲಯದ ಕೇಂದ್ರಸಭಾಗೃಹದಲ್ಲಿ ದಿ.20ರಂದು ಆಯೋಜಿಸಿದ್ದ ರಾಣಿ ಚನ್ನಮ್ಮ ವಿವಿ ವಿಶ್ರಾಂತ ಉಪಕುಲಪತಿ ಡಾ.ಶಿವಾನಂದ ಹೊಸಮನಿಯವರ ಅಭಿನಂದನಾ ಸಮಾರಂಭದಲ್ಲಿ ಕೆಎಲ್ಇ ಸಂಸ್ಥೆಯ ಪರವಾಗಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಡಾ.ಹೊಸಮನಿಯವರು ಕೃಷಿ ಚಿಂತಕರಾಗಿ, ದಕ್ಷ ಅಧಿಕಾರಿಗಳಾಗಿ ಗಡಿಜಿಲ್ಲೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಶಿಕ್ಷಣ ಎನ್ನುವುದು ಸಮಾನ ಧರ್ಮವನ್ನು ಬೋಧಿಸುತ್ತದೆ. ಅದು ಎಲ್ಲರ ಸೊತ್ತು, ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಜ್ಞಾನ ಎಲ್ಲರಿಗೂ ಒಲಿಯುತ್ತದೆ. ಎಲ್ಲಿ ಗುಣಾತ್ಮಕವಾದ ಶಿಕ್ಷಣ ಇರುವುದೋ ಅಲ್ಲಿ ಸಮಾಜವು ಉನ್ನತಮಟ್ಟದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಶಿಕ್ಷಣ ಹಾಗೂ ಸಂಶೋಧನಾಂಗಗಳನ್ನು ಹೊಸಮನಿಯವರು ಬಲಪಡಿಸಿದ್ದಾರೆ. ಇಂದು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಭದ್ರವಾದ ಅಡಿಪಾಯ ಹಾಕುವುದು ಅಗತ್ಯವೆನಿಸಿಕೊಂಡಿದೆ. ದಕ್ಷ ಹಾಗೂ ಸೇವಾನಿಷ್ಠ ಕುಲಪತಿಗಳಿಂದ ಮಾತ್ರ ಒಂದು ವಿಶ್ವವಿದ್ಯಾಲಯ ಜಾಗತಿಕ ಮನ್ನಣೆಗೆ ಪಾತ್ರವಾಗಲು ಸಾಧ್ಯವೆಂದು ಹೇಳುತ್ತಾ, ಹೊಸಮನಿಯವರನ್ನು ಸತ್ಕರಿಸಿದರು.
ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಡಾ.ಶಿವಾನಂದ ಹೊಸಮನಿಯವರು ಬೆಳಗಾವಿ ತವರು ಜಿಲ್ಲೆಯವನಾದ ನಾನು ಆಕಸ್ಮಿಕವಾಗಿ ಉಪಕುಲಪತಿ ಸ್ಥಾನವನ್ನು ಅಲಂಕರಿಸಿದೆ. ರೈತರಿಗೆ ನಾನು ನೀಡಿದ ಸೇವೆ ಹಾಗೂ ರೈತರಿಗಾಗಿ ಮಾಡಿದ ಹಲವಾರು ಯೋಜನೆಗಳಿಂದ ಈ ಗೌರವಾನ್ವಿತ ಸ್ಥಾನವನ್ನು ಹೊಂದಲು ಸಾಧ್ಯವಾಯಿತು. ಕೆಎಲ್ಇ ಸಂಸ್ಥೆಯು ಉತ್ತರ ಕನರ್ಾಟಕ ಮೇರುಪರ್ವತ. ಮೊದಲಿನಿಂದಲೂ ಈ ಸಂಸ್ಥೆಯೊಂದಿಗೆ ನನ್ನದು ಉತ್ತಮ ಒಡನಾಟವಿದ್ದು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸ್ಮರಣೀಯ ಕೊಡುಗೆಯನ್ನು ನೀಡಿದೆ. ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಸಪ್ತಷರ್ಿಗಳನ್ನು ಹಾಗೂ ಅದನ್ನು ವಿಸ್ತಾರೋನ್ನತವಾಗಿ ಬೆಳೆಸಿದ ಡಾ.ಪ್ರಭಾಕರ ಕೋರೆ ಹಾಗೂ ತಂಡದವರನ್ನು ನಾನು ಅಭಿನಂದಿಸುತ್ತೇನೆ. ಇಂದು ಶಿಕ್ಷಣವೆನ್ನುವುದು ತನ್ನ ಗುಣಾತ್ಮಕತೆಯನ್ನು ಕಳೆದುಕೊಳ್ಳುತ್ತಿರುವುದು ವಿಷಾಧನೀಯ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅದು ಸಾಧ್ಯವಾಗುತ್ತಿಲ್ಲ. ನಮ್ಮ ವಿದ್ಯಾಥರ್ಿಗಳು ಹೆಚ್ಚಿನ ಅಂಕಗಳನ್ನು ಪಡೆಯುತ್ತಾರೆ ಆದರೆ ಪ್ರಾಯೋಗಿಕವಾಗಿ ಅನುಷ್ಠಾನದಲ್ಲಿ ಅದನ್ನು ತರುವಲ್ಲಿ ವಿಫಲವಾಗುತ್ತಾರೆ. ಹಾಗಾಗದ ಹಾಗೆ ಶಿಕ್ಷಣದಲ್ಲಿ ವಿಶೇಷ ಬದಲಾವಣೆ ತರುವುದು ಅಗತ್ಯವೆನಿಸಿದೆ. ನಾವು ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಕಾರಣ ನಮ್ಮ ಉನ್ನತ ಶಿಕ್ಷಣ ಗುಣಾತ್ಮಕತೆಯನ್ನು ಕಳೆದುಕೊಂಡಿರುವುದು. ಸತತ ದುಡಿಮೆ ಹಾಗೂ ಪರಿಶ್ರಮದಿಂದ ಮಾತ್ರ ಅಗಾಧವಾದುದನ್ನು ಸಾಧಿಸಲು ಸಾಧ್ಯ. ನನ್ನ ಕಾಲಾವಧಿಯಲ್ಲಿ ಅಗತ್ಯವಾದ ಕ್ರಮಗಳನ್ನು ಹಾಗೂ ಯೋಜನೆಗಳನ್ನು ಕೈಗೊಂಡಿದ್ದೇನೆ. ಅವುಗಳು ಅನುಷ್ಠಾನಗೊಳ್ಳುವಲ್ಲಿ ಶ್ರಮಿಸಿದ್ದೇನೆ. ಇದಕ್ಕೆ ಎಲ್ಲರ ಸಹಾಯ ಸಹಕಾರಗಳು ದೊರೆತಿವೆ ಅವರೆಲ್ಲರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆಂದು ಹೇಳಿದರು.
ವೇದಿಕೆಯ ಮೇಲೆ ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷ ಎಂ.ಸಿ.ಕೊಳ್ಳಿ, ಬಸವರಾಜ ತಟವಟಿ, ಆಜೀವ ಸದಸ್ಯರಾದ ಡಾ.ಎಂ.ಟಿ.ಕುರಣಿ ಹಾಗೂ ಕೆಎಲ್ಇ ಸಂಸ್ಥೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಆರ್.ಎಲ್ ವಿಜ್ಞಾನ ಕಾಲೇಜಿ ಪ್ರಾಚಾರ್ಯ ಡಾ.ವಿಘ್ನೇಶ್ವರ ಯಳಮಲಿಯವರು ಸ್ವಾಗತಿಸಿದರು. ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.