ರಾಣಿ ಚನ್ನಮ್ಮನ ವಿಜಯ ಜ್ಯೋತಿಯಾತ್ರೆಗೆ ಸಂಭ್ರಮದ ಸ್ವಾಗತ

ಲೋಕದರ್ಶನ ವರದಿ

ಬೆಳಗಾವಿ 19:  1824 ಅಕ್ಟೋಬರ್ ತಿಂಗಳ 24 ಭಾರತದ ಚರಿತ್ರೆಯಲ್ಲಿ ಅವಿಸ್ಮರಣೀಯ ದಿನ. ಅದೊಂದು ಸಂಕಲ್ಪದ ದಿನ. ಸ್ವಾಭಿಮಾನದ, ಆತ್ಮಾಭಿಮಾನದ ಸಂಕೇತದ ದಿನವನ್ನಾಗಿ ನಾವಿಂದು ಆಚರಿಸುತ್ತಿದ್ದೇವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿಯವರು ಅಭಿಪ್ರಾಯ ಪಟ್ಟರು. ಅವರು ರಾಣಿ ಚನ್ನಮ್ಮ ಅವರ ವಿಜಯದ ಸಂಕಲ್ಪಯಾತ್ರೆಯ ರಥ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕನ್ನಡಿಗರ ಆತ್ಮಾಭಿಮಾನದ ಸಂಕೇತ ರಾಣಿ ಚನ್ನಮ್ಮನವರಾಗಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗಿಂತ ಮುಂಚೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ದಾರಿಯನ್ನು ಸೃಷ್ಟಿಮಾಡಿದರು. ಅವರ ವೀರ ಸಂಕಲ್ಪವೇ ಮುಂದೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಯಿತು ಎಂದು ತಿಳಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಅಧ್ಯಯನ ಪೀಠದಿಂದ ಮುಂಬರುವ ದಿನಗಳಲ್ಲಿ ವಿಚಾರಸಂಕಿರಣ, ಚಚ್ಚರ್ೆ, ಕಿರುಹೊತ್ತಿಗೆ ಹಾಗೂ ಚನ್ನಮ್ಮನ ಮೂತರ್ಿಯನ್ನು ಪ್ರತಿಷ್ಟಾಪಿಸುವ ವಿಚಾರಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಗಮಿಸಿದ್ದ ಕಿತ್ತೂರಿನ ತವರಿನವರಾದ ಡಾ. ಎಸ್.ಡಿ.ಪಾಟೀಲ ಅವರು ಚನ್ನಮ್ಮನ ಜೀವನ ಸಾಧನೆಯ ಕುರಿತು ವಿವರಿಸಿದರು. ಸಮಾರಂಭದಲ್ಲಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸಂಶೋಧನಾ/ ಸ್ನಾತಕೋತ್ತರ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ. ಸುಮಂತ ಹಿರೇಮಠ ಅವರು ಸಂಯೋಜಿಸಿದ್ದರು.