ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಸಮಾರಂಭ

ಲೋಕದರ್ಶನ ವರದಿ

ಬಳ್ಳಾರಿ25:  ಗುರುತಿಪ್ಪೇರುದ್ರ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ವತಿಯಿಂದ ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಹೊಸ ವಿದ್ಯಾರ್ಥಿಗಳಿಗೆ  ಹಿರಿಯ ವಿದ್ಯಾಥರ್ಿಗಳು ಸ್ವಾಗತಿಸುವ ಕಾರ್ಯಕ್ರಮ"ಂಆಗಿಖಿಊಙಂ-2018"ನ್ನು ಹಮ್ಮಿಕೊಂಡಿದ್ದರು.

    ಕಾರ್ಯಕ್ರಮದ ಪ್ರಾರಂಭದಲ್ಲಿ ಭವಾನಿ, ಬಿಬಿಎ ಇವರು ಪ್ರಾರ್ಥನೆಯನ್ನು ಮಾಡಿದರು. ಜಿ.ನಾಗರಾಜ್, ಕಾರ್ಯದಶರ್ಿಗಳು ಇವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

   ಮುಖ್ಯ ಅತಿಥಿಗಳಾದ ಎಸ್.ಬಿ.ಅಂದ್ರಾಳ್, ಸದಸ್ಯ ಕಾರ್ಯದಶರ್ಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ.ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಯುತರು ಮಾತನಾಡಿ ವಿದ್ಯಾಥರ್ಿಗಳು ತೆಗೆದುಕೊಳ್ಳುವ ನಿರ್ಣಯಗಳೇ ಅವರ ಭಾವಿ ಜೀವನವನ್ನು ರೂಪಿಸುತ್ತವೆಎಂದು ತಿಳಿಸಿದರು. ಯಾವುದೇ ಕೋರ್ಸನ್ನು ತೆಗೆದುಕೊಳ್ಳುವಾಗ ಅದರ ಬಗ್ಗೆ ಆಲೋಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ನಿರ್ಣಯದ ನಂತರ ತಾವು ಆಯ್ಕೆ ಮಾಡಿಕೊಂಡ ವಿಷಯವನ್ನು ಯಾವುದೇ ಒತ್ತಡದಲ್ಲಿ ಅಭ್ಯಾಸ ಮಾಡದೇ ಆ ವಿಷಯದ ಬಗ್ಗೆ ಪ್ರೀತಿಯಿಂದ ಇಷ್ಟಪಟ್ಟು ಕಲಿಯಬೇಕಾಗುತ್ತದೆ. ಹಾಗೇ ಕಲಿತ ವಿದ್ಯೆ ಮಾತ್ರ ಹೆಚ್ಚಿನ ಗುರಿಗಳನ್ನು ತಲುಪುವಂತೆ ಮಾಡುತ್ತದೆ.ಕೆಲವೇ ವರ್ಷಗಳಲ್ಲಿ ಈ ಕಾಲೇಜು ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

   ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದಕೆ.ಜಿ.ಬಸವರಾಜ್, ಲೋಕ ಅದಾಲತ್ ಪೆನಲ್ ಅಡ್ವೋಕೇಟ್, ಬಳ್ಳಾರಿ.ಇವರು ಮಾತನಾಡಿ ಬಳ್ಳಾರಿಯಲ್ಲಿ ಗುರುತಿಪ್ಪೇರುದ್ರ ಕಾಲೇಜು ವಿದ್ಯಾಥರ್ಿಗಳು ಸ್ವರ್ಣಪದಕ ಮತ್ತುಇತರೆ ರ್ಯಾಂಕ್ಗಳನ್ನು ಪಡೆಯುವಲ್ಲಿ ಹೆಸರು ವಾಸಿಯಾಗಿದ್ದಾರೆ ಎಂದು ತಿಳಿಸಿದರು. ಸಿದ್ಧರಾಮ ಕಲ್ಮಠ, ಅಧ್ಯಕ್ಷರು, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್, ಬಳ್ಳಾರಿ, ಪ್ರಾಂಶುಪಾಲರಾದ ಶ್ರೀ.ಹಯಾತ್ ಅಲಿ, ಮತ್ತು ಹೆಚ್.ಆರ್.ಬಾಲನಾಗರಾಜ್, ಇವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದರು. 

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಎನ್.ರುದ್ರಪ್ಪ ಇವರು ಮಾತನಾಡಿ ಹೊಸ ವಿದ್ಯಾಥರ್ಿಗಳಿಗೆ ಈ ಕಾಲೇಜಿನಲ್ಲಿ ತಮಗೆ ಅಭ್ಯಾಸ ಮಾಡಲು ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಇದರಲ್ಲಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಅನುಭವಿಗಳು ಇರುವುದರಿಂದ ಅವರ ಶ್ರಮ ಮತ್ತು ವಿದ್ಯಾಥರ್ಿಗಳ ಶಿಸ್ತಿನ ಪರಿಶ್ರಮಗಳು ಉತ್ತಮ ಫಲಿತಾಂಶಗಳನ್ನು ತಂದು ಕೊಡಲಿವೆ ಎಂದು ತಿಳಿಸಿದರು.

  ಈ ಕಾರ್ಯಕ್ರಮಕ್ಕೆ .ಪಲ್ಲವಿ ಮತ್ತು ಸಿಂಧು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಮಲ್ಲಿಕಾಜರ್ುನ ಇವರು ವಂದನಾರ್ಪಣೆಯನ್ನು ಮಾಡಿದರು.

   ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ .ಮಹೇಶ್ವರಿರವರು ಭರತನಾಟ್ಯ, ರಾಕೇಶ್ ಮತ್ತು ವಿವಿಧ ತಂಡಗಳ ವಿದ್ಯಾಥರ್ಿಗಳ ನೃತ್ಯಗಳು ಎಲ್ಲರನ್ನು ಆಕಷರ್ಿಸಿದವು. ಈ ಕಾರ್ಯಕ್ರಮಗಳ ನಿರೂಪಣೆಯನ್ನು ಭಾರ್ಗವಿ ಎಂ.ಬಿ, ಮಾಧುರ್ಯ, ಕೀರ್ತನಾ, ಸರೋಜ್, ಭುವನೇಶ್ವರಿ, ತೆನಾಲಿ ಮತ್ತುಚಿನ್ನು ಇವರುಗಳು ಮಾಡಿದರು.