ಲೋಕದರ್ಶನ ವರದಿ
ಶೇಡಬಾಳ 15: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ರಾಜು ಕಾಗೆಯವರು ಬಿಜೆಪಿ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಶುಕ್ರವಾರ ದಿ. 15 ರಂದು ಉಗಾರ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಕ್ಷಬೇಧ ಮರೆತು ಕಾಂಗ್ರಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ರಾಜು ಕಾಗೆಯವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿಂದ ಸ್ವಕ್ಷೇತ್ರ ಕಾಗವಾಡ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಶಿರಗುಪ್ಪಿ, ಉಗಾರ ಖುರ್ದ ಹಾಗೂ ಉಗಾರ ಬುದ್ರುಕ್ ಪಟ್ಟಣದ ಚನ್ನಮ್ಮ ವೃತ್ದಲ್ಲಿ ಸೇರಿದ ನೂರಾರು ಕಾಂಗ್ರಸ್ ಹಾಗೂ ಬಿಜೆಪಿಯ ಕಾರ್ಯಕರ್ತರು ಹೂಮೆಯನ್ನು ಹಾಕಿ ಸ್ವಾಗತಿಸಿ ಜೈಕಾರಗಳನ್ನು ಕೂಕಿ ಬರಮಾಡಿಕೊಂಡರು.
ಅಭಿಮಾನಿಗಳಿಂದ ಸ್ವಾಗತ ಸ್ವೀಕರಿಸಿ ನನ್ನ ಮೇಲೆ ಅಭಿಮಾನವಿಟ್ಟು ಎಲ್ಲರು ಸೇರಿ ನನ್ನನ್ನು ಸ್ವಾಗತಿಸಿದ್ದಕ್ಕೆ ತಮ್ಮೆಲ್ಲರಿಗೂ ಅಭಿನಂದನೆಗಳನ್ನು ಹೇಳಿದ ರಾಜು ಕಾಗೆಯವರು ಕಳೆದ 30 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಬಂದಿದ್ದೇನೆ. 4 ಬಾರಿ ತಮ್ಮೆಲ್ಲರ ಆಶೀವರ್ಾದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ.
ಆದರೆ ಬಿಜೆಪಿಯಲ್ಲಿದ್ದಾಗ ಯಡಿಯುರಪ್ಪನವರು ನನ್ನನ್ನು ಬಹಳ ಕನಿಷ್ಟವಾಗಿ ಕಂಡರು. ಅಲ್ಲದೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಕೋರ್ ಕಮೀಟಿಯಲ್ಲಿ ನನ್ನ ಬಗ್ಗೆ ಕನಿಷ್ಟವಾಗಿ ಮಾತನಾಡಿದರಲ್ಲದೇ ಆತನಿಗೆ ಟಿಕೇಟ್ ಕೊಡುವುದಿಲ್ಲ ಎಂದು ಅಪಮಾನಿಸಿದರು. ನನ್ನ ಅವಮಾನವಲ್ಲ, ಇದು ಕ್ಷೇತ್ರದ ಜನತೆಯ ಅವಮಾನ ಅಂಥ ಅವಮಾನವನ್ನು ಸಹಿಸಿ ಅಲ್ಲಿರುವುದಕ್ಕಿಂತ ಸ್ವಾಭಿಮಾನ ಸಿಗುವ ಸ್ಥಳಕ್ಕೆ ಹೋಗೋಣ ಎಂದು ಎಂದು ತಮ್ಮೆಲ್ರ ಅಭಿಪ್ರಾಯ ಪಡೆದೇ ಈ ನಿದರ್ಾರ ಕೈಗೊಂಡಿದ್ದೇನೆ. ನನಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ಯವಾಗುತ್ತಿರುವುದನ್ನು ಕಂಡರೆ ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಈ ಹಿಂದೆ ನೀಡಿದ ಸಹಕಾರ ಈ ಚುನಾವಣೆಯಲ್ಲೂ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.
ಮುಸ್ಲಿಂ ಸಮಾಜದ ಮುಖಂಡ ಮುಬಾರಕ ನದಾಫ ಮಾತನಾಡಿ ಕಾಗವಾಡ ಮತಕ್ಷೇತ್ರದ ಮುಸ್ಲಿಂ ಸಮಾಜದ ವತಿಯಿಂದ ರಾಜು ಕಾಗೆಯವರಿಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುವುಗಾಗಿ ಹೇಳುತ್ತ ಉಗಾರ ಪಟ್ಟಣದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡುವ ಭರವಸೆ ನೀಡಿದರು.
ಈ ವೇಳೆ ಮುಖಂಡರಾದ ಶಿದ್ದಗೌಡ ಕಾಗೆ, ಪುರಸಭಾ ಸದಸ್ಯರಾದ ಬಾಳಗೌಡ ಪಾಟೀಲ, ಮದನ್ ದೇಶಿಂಗೆ, ಮಂಜುನಾಥ ತೆರದಾಳೆ, ಅಲ್ತಾಫ ನದಾಫ, ಮೋಹನ ವೈಧು ಮಲಿಕ ನದಾಫ, ಮುಖಂಡರಾದ ಗಜಾನನ ಯರಂಡೋಲಿ, ರಾಜು ಬಿಳ್ಳೂರ, ಉಮೇಶ ಪಾಟೀಲ, ರಾವಸಾಬ ಕಟಗೇರಿ, ರಾಜು ಡಾಂಗೆ, ರಾಜು ಮದನೆ, ಅಣ್ಣಾಸಾಬ ಖೋತ, ಬಾಳು ಕಟಗೇರಿ, ಬಾಲಚಂದ್ರ ರೂಗೆ, ಜಿತೇಂದ್ರ ಸಾಂಗಲಿ,ಮಹೇಶ ಸೊಲ್ಲಾಪುರ, ವಿಶ್ವನಾಥ ನಾದಾರ, ಸುರೇಶ ವಾಘಮೊಡೆ, ದೀಪಕ ಪಾಟೀಲ ಸೇರಿದಂತೆ ಅನೇಕರು ಇದ್ದರು.