ನವದೆಹಲಿ, ಮೇ ೮, ಸರ್ಕಾರಿ ಸ್ವಾಮ್ಯದ ಪ್ರಸಾರ ಸಂಸ್ಥೆ ದೂರದರ್ಶನ ಇಂದಿನಿಂದ ಪಾಕಿಸ್ತಾನ ಅಕ್ರಮಿತ ಕಾಶ್ಮೀರ ಪ್ರದೇಶಗಳ ಹವಾಮಾನ ಮುನ್ಸೂಚನೆಯನ್ನು ಪ್ರಸಾರ ಮಾಡಲಿದೆ. ಈ ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ ಎಂಬ ಸಂದೇಶವನ್ನು ನಿತ್ಯ ಮನವರಿಕೆ ಮಾಡಿಕೊಡಲು ಈ ಕ್ರಮ ಕೈಗೊಂಡಿದೆ.ದೇಶದ ಇತರ ಪ್ರದೇಶಗಳ ಜೊತೆಗೆ ಪಾಕ್ ಅಕ್ರಮಿತ ಕಾಶ್ಮೀರ(ಪಿ ಓಕೆ) ಪ್ರದೇಶದಲ್ಲಿನ ದೈನಂದಿನ ಹವಾಮಾನ ವಾರ್ತೆಗಳನ್ನು ಸೇರ್ಪಡೆಗೊಳಿಸಿ ಬಿತ್ತರಿಸುವಂತೆ ದೂರದರ್ಶನ ರಾಷ್ಟ್ರೀಯ, ಡಿಡಿ ನ್ಯೂಸ್, ಅಕಾಶವಾಣಿ ಹಾಗೂ ಕಾಶ್ಮೀರ ಚಾನೆಲ್ ಸರ್ಕಾರ ಸೂಚಿಸಿದೆ ಎಂದು ದೂರದರ್ಶನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರದರ್ಶನ ಕಾಶ್ಮೀರ ವಾಹಿನಿ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಪ್ರಸಾರವಾಗುತ್ತಿದೆ.ದೂರದರ್ಶನದ ಹವಾಮಾನ ವಾರ್ತೆಗಳಲ್ಲಿ ಇನ್ನೂ ಮುಂದೆ ಅಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರದೇಶದ ಮೀರ್ ಪುರ್ ಹಾಗೂ ಮಿರ್ಜಾಪುರ್ ನಗರಗಳ ಹವಾಮಾನ ಮುನ್ಸೂಚನೆ ಒಳಗೊಳ್ಳಲಿದೆ ಅಕ್ರಮಿತ ಕಾಶ್ಮೀರದಲ್ಲಿ ಯಾವುದೇ ಕಾನೂನು ಬದ್ದ ಕ್ರಮಗಳನ್ನು ಕೈಗೊಳ್ಳದಂತೆ ಪಾಕಿಸ್ತಾನ ಸರ್ಕಾರ ಹಾಗೂ ಭಾರತದಲ್ಲಿರುವ ಅದರ ಬೆಂಬಲಿಗರಿಗೆ ನಿರಂತರವಾಗಿ ಮನವರಿಕೆ ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.