ಲೋಕದರ್ಶನವರದಿ
ರಾಣೇಬೆನ್ನೂರು25: ಇತಿಮಿತಿ ಇಲ್ಲದ ಜೀವನ, ನೀತಿ ಇಲ್ಲದ ಶಿಕ್ಷಣ, ಶ್ರಮವಿಲ್ಲದ ಸಂಪತ್ತು ಇವುಗಳು ಮನುಕುಲಕ್ಕೆ ಕಂಠಕವಾಗಿವೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ, ಭಾವೈಕ್ಯತೆ, ಸದ್ಭಾವನೆಗಳಂತಹ ಜನೋಪಯೋಗಿ ಈ ಸದ್ಗುಣಗಳನ್ನು ಧರ್ಮದ ತಳಹದಿಯ ಮೇಲೆ ರೂಢಿಸಿಕೊಂಡು ಮುನ್ನಡೆಯಬೇಕು. ಧರ್ಮದ ಬಗ್ಗೆ ಹಾಗೂ ದೇವರ ಬಗ್ಗೆ ಮನುಷ್ಯನಲ್ಲಿ ನಂಬಿ ವಿಶ್ವಾಸ ಇಲ್ಲದಿದ್ದರೆ ಆತನ ಬದುಕು ಬರ್ಬರವಾಗುವುದು ಎಂದು ಬಾಳೇಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದ ಶನೈಶ್ಚರ ಮಂದಿರದಲ್ಲಿಶನಿವಾರ ರಾತ್ರಿ ಲೋಕಕಲ್ಯಾಣಾರ್ಥವಾಗಿ ಏರ್ಪಡಿಸಲಾಗಿದ್ದ 7ನೇ ವರ್ಷದ ತಿಲಲಕ್ಷ ದೀಪೋತ್ಸವ ಮತ್ತು ಮನುಕುಲ ಸದ್ಭಾವನಾ ಸಮಾರಂಭ, ಹಾಗೂ 750 ದೈಹಿಕ ದಿವ್ಯಾಂಗರಿಗೆ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ವಿಶ್ವಕ್ಕೆ ಶಾಂತಿ ಮತ್ತು ಧರ್ಮಕ್ಕೆ ಹೆಸರಾದ ಭಾರತದಲ್ಲಿ ಧರ್ಮವು ಮನುಜಕುಲದ ಹಿತವನ್ನು ಕಾಪಾಡುತ್ತದೆ. ಧರ್ಮವು ಯಾರಿಗೂ, ಎಂದೆಂದಿಗೂ ಕೇಡು ಬಯಸುವುದಿಲ್ಲ. ಜನರ ಹಿತ ಕಾಪಾಡುವದೇ ಧರ್ಮದ ಆದ್ಯ ಕರ್ತವ್ಯವಾಗಿದೆ ಎಂದರು.
ಸಹಸ್ರಾರು ವರ್ಷಗಳ ಇತಿಹಾಸವಿರುವ ಧರ್ಮಕ್ಕೆ ಧರ್ಮವೇ ಮೂಲಾಧಾರವಾಗಿದೆ. ನಾವು ವಾಸಿಸುವ ಭೂಮಿ, ಪಡೆಯುತ್ತಿರುವ ಸೂರ್ಯನ ಬೆಳಕು, ಸೇವಿಸುತ್ತಿರುವ ಗಾಳಿ, ಕುಡಿಯುತ್ತಿರುವ ನೀರೂ ಸಹ ಧರ್ಮದಂತೆ ಕೆಲಸ ಮಾಡುತ್ತದೆ. ಇವುಗಳಲ್ಲಿ ಯಾವುದೇ ಬೇಧಭಾವನೆ ಇಲ್ಲ. ಸಮಾಜದಲ್ಲಿರುವ ಎಲ್ಲ ನಾಗರೀಕರೂ ಸಹ ಜಾತಿ, ಮತ, ಪಂಥವಿಲ್ಲದೆ ಮನುಷ್ಯನ ಬದುಕಿಗಾಗಿ ದಿನಂಪ್ರತಿ ಇವುಗಳನ್ನು ಬಳಸುತ್ತಾನೆ ಎಂದರು.
ಸ್ಥಳೀಯ ಶನೈಶ್ಚರಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಕಿರಿಯ ವಯಸ್ಸಿನಲ್ಲಿಯೇ ಅದ್ಭುತವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಈ ಹಿಂದೆ 25 ಸಾವಿರ ಮಹಿಳೆಯರಿಗೆ ಏಕಕಾಲದಲ್ಲಿ ಉಡಿ ತುಂಬುವ ಕಾರ್ಯಕ್ರಮ ಸಂಘಟಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಶಿವಾಚಾರ್ಯರು ಇದೀಗ 750 ದೈಹಿಕ ದಿವ್ಯಾಂಗರಿಗೆ ಏಕ ಕಾಲಕ್ಕೆ ವಸ್ತ್ರದಾನ ಮಾಡಿ ಗೌರವ ಅರ್ಪಣೆ ಮಾಡಿರುವುದೂ ಸಹ ರಾಷ್ಟ್ರದಲ್ಲಿಯೇ ಪ್ರಥಮ ಎಂದು ಕರೆಯಬಹುದು ಎಂದರು.
ಕಾರ್ಯಕ್ರಮದ ನೇತೃತ್ವವಹಿಸಿದ್ದ ಮದ್ಧರಕಿ ಹಾಗೂ ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶನೈಶ್ಚರ ಮಂದಿರದ ಆವರಣದಲ್ಲಿ ಮಹಾನ್ತಪಸ್ವಿ ಲಿಂಗೈಕ್ಯ ಸಿದ್ದಲಿಂಗ ಶ್ರೀಗಳ ಮಂದಿರ, ಶಾರದಾ ಮಾತೆಯ ಮಂದಿರ, ಜ್ಯೋತಿಲರ್ಿಂಗಗಳನ್ನು ಶೀಘ್ರವೇ ಸ್ಥಾಪನೆ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಇದಕ್ಕೆಲ್ಲ ಭಕ್ತರ ತನು ಮನ ಧನ ಸಹಾಯದ ಮೂಲಕ ನೆರವಾಗಬೇಕು ಎಂದು ಶ್ರೀಗಳು ವಿನಂತಿಸಿದರು.
ರಾಜ್ಯದ ಮುಖ್ಯಮಂತ್ರಿ ಆಪ್ತಕಾರ್ಯದಶರ್ಿ ವಿಶ್ವನಾಥ ಹಿರೇಮಠ ಇವರಿಗೆ ಮನು ಕುಲಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರಾಟೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸುಕೃತಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀಗಳು, ಹೇರೂರಿನ ನಂಜುಂಡ ಪಂಡಿತಾರಾಧ್ಯ ಶ್ರೀಗಳು ಬಂಕಾಪುರ ಅರಳಲೆಮಠದ ರೇವಣಸಿದ್ದೇಶ್ವರ ಶ್ರೀಗಳು, ಕೂಡಲದ ಗುರುಮಹೇಶ್ವರ ಶ್ರೀಗಳು, ನಿಚ್ಚವನಹಳ್ಳಿಯ ಹಾಲಸ್ವಾಮಿ ಶ್ರೀಗಳು, ಅಕ್ಕಿಆಲೂರಿನ ಚಂದ್ರಶೇಖರ ಶ್ರೀಗಳು ಸಮ್ಮುಖವಹಿಸಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಎಸ್.ರಾಮಲಿಂಗಣ್ಣನವರ, ಉದ್ಯಮಿ ಶಿವಕುಮಾರ ದೇವರಮನಿ,ಬಸವರಾಜ ಸವಣೂರ, ರವೀಂದ್ರಗೌಡ ಪಾಟೀಲ, ಶೋಭಾ ಮಠಪತಿ, ಸಿದ್ದಣ್ಣ ಚಿಕ್ಕಬಿದರಿ, ಜುಂಜಪ್ಪ ಹೆಗ್ಗಪ್ಪನವರ, ಬಸನಗೌಡ ಪಾಟೀಲ, ಕೃಷ್ಣಮೂತರ್ಿ ಲಮಾಣಿ, ರಾಜೇಶ್ವರಿ ಪಾಟೀಲ, ಶಿವುಕುಮಾರ ಹೊಸಳ್ಳಿ, ಇಕ್ಬಾಲಸಾಬ ರಾಣೇಬೆನ್ನೂರ, ಚನ್ನಬಸಪ್ಪ ಕೊಂಬಳಿ, ಪುಪ್ಪಾ ಬದಾಮಿ, ನಿತ್ಯಾನಂದ ಕುಂದಾಪುರ, ಕೊಟ್ರೇಶ್ ಎಮ್ಮಿ, ಗಿರಿಜಾದೇವಿ ದುರ್ಗದಮಠ, ಪ್ರಭಾವತಿ ತಿಳವಳ್ಳಿ, ಸೇರಿದಂತೆ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಗಣ್ಯರು, ಚುನಾಯಿತ ಪ್ರತಿನಿಧಿಗಳು ಮತ್ತಿತರರು ಇದ್ದರು.