ಶ್ರೀಮಂತ ಪಾಟೀಲರಿಗೆ ತಕ್ಕಪಾಠ ಕಲಿಸಲಿದ್ದಾರೆ

ಲೋಕದರ್ಶನ ವರದಿ

ಕಾಗವಾಡ: ರಾಜ್ಯದ ಸಮ್ಮಿಶ್ರ ಸಕರ್ಾರದಲ್ಲಿ ಕಾಗವಾಡ ಕ್ಷೇತ್ರದ ಆಗೀಣ ಶಾಸಕ ಇವರು ಕ್ಷೇತ್ರದ ಅಭಿವೃದ್ಧಿಗಾಗಿ 400 ಕೋಟಿ ಅನುದಾನ ನೀಡಿದ್ದಾರೆ. ಆದರೂತಾವು ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿ, ಕುಮಾರಸ್ವಾಮಿ ಇವರ ಮೇಲೆ ಗುಬೆ ಕುಳಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕ್ಷೇತ್ರದ ಜನತೆತಕ್ಕ ಪಾಠ ಕಲಿಸಲಿದೆಯೆಂದು ಜೆಡಿಎಸ್ ಪಕ್ಷದ ವರಿಷ್ಠರು, ವಿಧಾನಪರಿಷತ್ತ ಸದಸ್ಯ ಬಸವರಾಜ ಹೊರಟ್ಟಿ ಕಾಗವಾಡದಲ್ಲಿ ಹೇಳಿದರು.

ಸೋಮವಾರರಂದು ಕಾಗವಾಡದ ಮಾಜಿ ಶಾಸಕ ಕೆ.ಪಿ.ಮಗೆಣ್ಣವರ ಇವರ ಲಕ್ಷ್ಮೀ ಬ್ಯಾಂಕ್ ಶಾಖೆಯಲ್ಲಿ ಆಯೋಜಿಸಿದ ಪತ್ರೀಕಾಗೋಷ್ಠಿಯಲ್ಲಿ ಬಸವರಾಜ ಹೊರಟ್ಟಿ ಮನಬಿಚ್ಚಿ ಹೇಳಿದರು.

ಶ್ರೀಮಂತ  ಪಾಟೀಲ  ರೈತರ  ನೇತಾರರು ಎಂದು ಹೇಳುತ್ತಾರೆ. ಅವರು ಈ ವರೆಗೆ ಸ್ವಾರ್ಥ ಒಂದೇ ಬಹಿಸಿದ್ದಾರೆ. ಮೊದಲು ಜೆಡಿಎಸ್, ಆಮೇಲೆ ಕಾಂಗ್ರೆಸ್, ಈಗ ಬಿಜೆಪಿ ಪಕ್ಷದಲ್ಲಿ ಸೇರಿಕೊಂಡು ರಾಜಕೀಯಮಾಡುತ್ತಿದ್ದಾರೆ. ಈ ಪಕ್ಷದಲ್ಲಿಯೂ ಕೆಲ ದಿನ ಮಾತ್ರ ಉಳಿಯಬಹುದು. ಕ್ಷೇತ್ರದಜನತೆಯಅಭಿವೃದ್ಧಿಗಾಗಿನಾನು ಈ ನಿರ್ಣಯಕೈಗೊಂಡಿದ್ದೇನೆ ಎಂದು ಹೇಳುತ್ತಿರುವುದು ಸುದ್ದಸುಳ್ಳು ಎಂದುಬಸವರಾಜ ಹೊರಟ್ಟಿ ಆರೋಪಿಸಿದರು.

ಕೃಷ್ಣಾ ನದಿಗೆ ನೀರು ಹರಿಸಲು ಕುಮಾರಸ್ವಾಮಿ ಮತ್ತು ನಾನು ಪ್ರಯತ್ನಿಸಿದ್ದೇನೆ. ಹಿಡಕಲ ಆನೆಕಟ್ಟೆಯಿಂದ 1 ಟಿಎಂಸಿ ನೀರು ಬಿಡಿಸಿದ್ದು ನಾನೇ.ಅಭಿವೃದ್ಧಿ ಕಾಮಗಾರಿಗಾಗಿ ಮತ್ತು ಕ್ಷೇತ್ರದ ಜನತೆಗಾಗಿ ನಾನು ಬಿಜೆಪಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದು, ಎಷ್ಟು ಸತ್ಯ? ಎದೆನೋವು ಕಾಣಿಸಿದ್ದು ಇದು ಸುಳ್ಳು. ಕನರ್ಾಟಕದಲ್ಲಿ ಬೇರೆ ರಾಜ್ಯಗಳಿಂದ ಬಂದು ಉಪಚಾರಿಸಿಕೊಳ್ಳುತ್ತಾರೆ. 

ಇವರು ಮುಂಬೈಗೆ ಹೋಗುವ ಅವಶ್ಯಕತೆಯಿಲ್ಲಾಗಿತ್ತು. ಈ ಚುನಾವಣೆ ಜೆಡಿಎಸ್ ಎದುರಾಳಿಗೆ ಕಾಂಗ್ರೆಸ್ ಇದೆ ಎಂದು ಬಸವರಾಜ ಹೋರಟ್ಟಿ ಹೇಳಿದರು.

ಪತ್ರೀಕಾಗೋಷ್ಠಿ ಸಭೆಯಲ್ಲಿ ಜೆಡಿಎಸ್ ಪಕ್ಷದರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ಎನ್.ಎಚ್.ಕೋನರೆಡ್ಡಿ, ಮಾಜಿ ಸಚಿವ ವೆಂಕಟರಾವನಾಡಗೌಡಾ, ಚಿಕ್ಕೋಡಿ ಜಿಲ್ಲಾ ಜೆಡಿಎಸ್ಆಧ್ಯಕ್ಷ, ಮಾಜಿ ಶಾಸಕ ಕೆ.ಪಿ.ಮಗೆಣ್ಣವರ, ಕಾಗವಾಡ ಅಭ್ಯಥರ್ಿ ಶ್ರೀಶೈಲ್ ತುಗಶೆಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷಶಂಕರ ಮಾಡಲಗಿ, ಗಿರೀಶ ಭುಟಾಳಿ, ಎಂ.ಕೆ.ಪಾಟೀಲ, ಭೀಮು ಪಾಟೀಲ, ಬಿ.ಆರ್.ಪಾಟೀಲ, ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರುಪಾಲ್ಗೊಂಡಿದ್ದರು.

ಕಾಗವಾಡದಲ್ಲಿ ಅಭ್ಯಥರ್ಿ ಶ್ರೀಶೈಲ್ ತುಗಶೆಟ್ಟಿ ಪರಬಸವರಾಜ ಹೋರಟ್ಟಿ, ಹಾಗೂ ಮುಖಂಡರುಮನೆ ಮನೆಗೆ ತರಳಿ ಮತಯಾಚಿಸಿದರು.