ಮೂರು ತಿಂಗಳೊಳಗಾಗಿ ಎಲ್ಲರಿಗೂ ಆಸ್ತಿ ಉತಾರ ನೀಡುತ್ತೇವೆ: ತಹಶೀಲ್ದಾರ್ ಗುಂಡಪ್ಪಗೋಳ

ಮೂರು ತಿಂಗಳೊಳಗಾಗಿ ಎಲ್ಲರಿಗೂ ಆಸ್ತಿ ಉತಾರ ನೀಡುತ್ತೇವೆ: ತಹಶೀಲ್ದಾರ್ ಗುಂಡಪ್ಪಗೋಳ We will issue property extracts to everyone within three months: Tahsildar Gundappagola.

ಯರಗಟ್ಟಿ ೨೪: ಪಟ್ಟಣದ ದಲಿತ ಸಂಘಟನೆ, ಕರವೇ ಸಂಘಟನೆ, ರೈತ ಸಂಘ ಹಾಗೂ ಪಟ್ಟಣದ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಯಿತು. ಪಟ್ಟಣ ಪಂಚಾಯಿತಿ ಎದುರಿನ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆರಂಭವಾದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪಟ್ಟಣದಲ್ಲಿ ಸುಮಾರು ೩,೦೦೦ ಮನೆಗಳಿದ್ದು, ಪಟ್ಟಣ ಹಾಗೂ ಜನಸಂಖ್ಯೆ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ದಲಿತ ಜನಕೇರಿಯಲ್ಲಿ ದೇಸಾಯಿ ಮನೆತನದವರು ದಾನದ ರೂಪದಲ್ಲಿ ನೀಡಿರುವ ಜಾಗದಲ್ಲಿ ಸುಮಾರು ೩೦ ವರ್ಷಗಳಿಂದ ವಾಸಿಸುತ್ತಿದ್ದೇವೆ. ಆದರೆ ಆ ಮನೆಗಳ ಆಸ್ತಿ ಉತಾರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದಲಿತ ಮುಖಂಡ ಸಂತೋಷ ಚನ್ನವಮೇತ್ರಿ ಮಾತನಾಡಿ, ವಿವಿಧ ಸಂಘಟನೆಗಳು ಜನಪರ ಬೇಡಿಕೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿವೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸರ್ಕಾರದ ನೀತಿಗಳ ವಿರುದ್ಧ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರು. ಕರವೇ ಅಧ್ಯಕ್ಷ ರಫೀಕ್ ಡಿ.ಕೆ. ಮಾತನಾಡಿ, ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಬೇಕು. ಲಂಚ ಹಾಗೂ ಸ್ವಜನಪಕ್ಷಪಾತದ ವಿರುದ್ಧ ಅಣ್ಣಾ ಹಜಾರೆ ಮುಂತಾದವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಜನಪರ ಚಳವಳಿಗಳು ನಡೆದಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿಯಲ್ಲಿ ಉತಾರ ನೀಡಲು ಹಾಗೂ ಕಟ್ಟಡ ನಿರ್ಮಾಣ ಪರವಾನಗಿ ನೀಡಲು ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರು ಪರಿಶೀಲನೆ ನಡೆಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಕಚೇರಿಗೆ ಬಂದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ಮಾತನಾಡಿ, ಅವರ ಕೆಲಸಗಳನ್ನು ಮಾಡಿಕೊಡಬೇಕು. ಪಟ್ಟಣ ಪಂಚಾಯಿತಿ ಸಿಬ್ಬಂದಿಯೊAದಿಗೆ ಪ್ರತಿದಿನ ಸಂಜೆ ಸಭೆ ನಡೆಸಿ ವರದಿ ಪಡೆದು ಮುಂದಿನ ಕೆಲಸಗಳನ್ನು ಮಾಡಿಕೊಡಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿಗೆ ಸೂಚಿಸಿದರು. ಆಸ್ತಿ ಉತಾರ ನೀಡಲು ಸರ್ಕಾರ ಕೆಲವು ಮಾನದಂಡಗಳನ್ನು ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪಟ್ಟಣದ ಎಲ್ಲ ನಿವಾಸಿಗಳಿಗೆ ಮೂರು ತಿಂಗಳೊಳಗಾಗಿ ಆಸ್ತಿ ಉತಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಧರಣಿ ಸತ್ಯಾಗ್ರಹ ಹಿಂಪಡೆಯುವAತೆ ಮುಖಂಡರಲ್ಲಿ ತಹಶೀಲ್ದಾರ್ ಮನವಿ ಮಾಡಿದರು. 

ಗುರುವಾರ ಶಾಸಕ ವಿಶ್ವಾಸ ವೈದ್ಯ ಅವರ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವೇಳೆ ಭಾಸ್ಕರ ಹಿರೇಮೇತ್ರಿ, ಇಮಾಮಸಾಬ್ ಹುಸೇನನಾಯ್ಕರ, ರೈತ ಮುಖಂಡ ಸೋಮು ರೈನಾಪುರ, ಮಂಜುನಾಥ ನೀಲಪ್ಪನವರ, ಯಲ್ಲಪ್ಪ ಪಟ್ಟಪ್ಪನವರ, ಸುರೇಶ ತಮಣ್ಣವರ, ಹನಮಂತ ನರೇರ, ಲಂಕೇಶ ಮೇತ್ರಿ, ಶಾಮಣ್ಣ ಕಾರೇಪ್ಪನವರ, ಚಿದಂಬರ ಕಟ್ಟಿಮನಿ, ಲಕ್ಕಪ್ಪ ಹುಣಶಿಕಟ್ಟಿ, ರಾಯಪ್ಪ ಕರಿಗಾರ, ಹನಮಂತ ಕಿಡದಾಳ, ಲಕ್ಷö್ಮಣ ಕರಿಗೋಣ್ಣವರ, ಮಹಾಂತೇಶ ದಯಣ್ಣವರ, ರಂಗಪ್ಪ ಗಂಗರಡ್ಡಿ, ಯಕ್ಕೇರಪ್ಪ ತಳವಾರ, ಶೇಖರ ಕಿಲಾರಿ, ಗಿರೀಶ ಗಂಗರಡ್ಡಿ, ವೆಂಕಣ್ಣ ಹುರುಕನವರ, ಸುನೀತಾ ಗಿರಿವಗೋಳ, ಲಾಲಬಿ ಕರ್ಣಾಚಿ, ರುಕ್ಮವ್ವ ಪವಾರ, ರಾಧಾ ಮಾಳಗಿ, ಮಹಾನಂದಾ ತಳವಾರ, ಶೋಭಾ ಚನ್ನವಮೇತ್ರಿ, ಹನಮವ್ವ ಮಾಳಗಿ, ಮಂಜುಳಾ ಚನ್ನವಮೇತ್ರಿ, ಗೀತಾ ನೀಲಪ್ಪನವರ, ರೇಣುಕಾ ಹರಿಜನ, ಪಾರವ್ವ ನೀಲಪ್ಪನವರ, ಕವಿತಾ ಹುಣಶಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.